ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ದಿನಕ್ಕೊಂದು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯ ಮಾಡುತ್ತಿವೆ. ಇದೇ ಮಾದರಿಯಲ್ಲಿ ಬಜೆಟ್ ಸ್ಮಾರ್ಟ್‌ಪೋನ್‌ಗಳನ್ನು ಹೆಚ್ಚಾಗಿ ಮಾರುಕಟ್ಟೆಗೆ ಪರಿಚಯ ಮಾಡುವ ಐಟೆಲ್ ಮೊಬೈಲ್ ತಯಾರಕ ಕಂಪನಿಯು ಎರಡು ಬಜೆಟ್ ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಮತ್ತೇರಡು ಫೋನ್‌ಗಳನ್ನು ಸೇರಿಕೊಳ್ಳಲಿದೆ.

ಐಟೆಲ್ S42 ಮತ್ತು ಐಟೆಲ್ A44 ಎಂಬ ಎರಡು ಸ್ಮಾರ್ಟ್‌ಫೋನ್‌ಗಳು ಮುಂದಿನ ತಿಂಗಳಿನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಮೈಕ್ರೊಮ್ಯಾಕ್ಸ್, ಕಾರ್ಬನ್ ಸೇರಿದಂತೆ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆಯನ್ನು ನೀಡಲಿದೆ. ಐಟೆಲ್ S42 ಮತ್ತು ಐಟೆಲ್ A44 ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ ರೂ.8,499ಕ್ಕೆ ಮತ್ತು ರೂ.5,799ಕ್ಕೆ ಲಭ್ಯವಿದೆ ಎನ್ನಲಾಗಿದೆ.
ಐಟೆಲ್ S42 ಸ್ಮಾರ್ಟ್‌ಫೋನ್ ವಿಶೇಷತೆ:
18:9 ಅನುಪಾತದ 5.65 ಇಂಚಿನ HD+ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂಡಿರುವ ಐಟೆಲ್ S42 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 425 ಚಿಪ್‌ಸೆಟ್ ಅನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ 8.0 ಓರಿಯೋ ದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾ ದೊಂದಿಗೆ ಡ್ಯುಯಲ್ ಫ್ಲ್ಯಾಷ್ ನೀಡಲಾಗಿದೆ. ಮುಂಭಾಗದಲ್ಲಿ 13MP ಕ್ಯಾಮೆರಾ ಅಳವಡಿಸಲಾಗಿದೆ.
ಐಟೆಲ್ S42 ಸ್ಮಾರ್ಟ್‌ಫೋನ್ RAM:
ಐಟೆಲ್ S42 ಸ್ಮಾರ್ಟ್‌ಫೋನ್‌ನಲ್ಲಿ 3GB RAM ಮತ್ತು 16GB ಇಂಟರ್ನಲ್ ಮೆಮೊರಿ ಲಭ್ಯವಿದೆ. ಇದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಇದಲ್ಲದೇ ಐಟೆಲ್ S42 ಫೋನಿನಲ್ಲಿ 3000mAh ಬ್ಯಾಟರಿಯನ್ನು ನೋಡಬಹುದಾಗಿದೆ.
ಐಟೆಲ್ A44 ಸ್ಮಾರ್ಟ್‌ಫೋನಿನ ವಿಶೇಷತೆಗಳು:
ಆಂಡ್ರಾಯ್ಡ್ 7.0 ನೌಗಾದಲ್ಲಿ ಕಾರ್ಯನಿರ್ವಹಿಸುವ ಐಟೆಲ್ A44 ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.45 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನಿನ ಹಿಂಭಾಗ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ. 1GB RAM ಮತ್ತು 8GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುವ ಈ ಸ್ಮಾರ್ಟ್‌ಫೋನಿನಲ್ಲಿ 2400mAh ಬ್ಯಾಟರಿಯನ್ನು ಅಳವಡಿಸಲಾಗಿದೆ.
ಮತ್ತೊಂದು ಸೇರ್ಪಡೆ:
ಈ ಸ್ಮಾರ್ಟ್‌ಫೋನ್‌ಗಳೊಂದಿಗೆ ಶೀಘ್ರವೇ ಮಾರುಕಟ್ಟೆಗೆ ಐಟೆಲ್ A44 ಪ್ರೋ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಐಟೆಲ್ ಕಂಪನಿಯೂ ಮುಂದಾಗಿದ್ದು, ಇದರಲ್ಲಿ 5.45 ಇಂಚಿನ HD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಈ ಸ್ಮಾರ್ಟ್‌ಫೋನ್ ಹೊಂದಿರಲಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.