Home
ಮೊಬೈಲ್

6,990 ರೂ.ಗೆ 3GB RAM, ಫಿಂಗರ್‌ಪ್ರಿಂಟ್ ಫೀಚರ್ ಹಾಗೂ ವೋಲ್ಟ್ ಸ್ಮಾರ್ಟ್‌ಫೋನ್!!

6,990 ರೂ.ಗಳ ಬೆಲೆಯಲ್ಲಿ 3 ಜಿಬಿ RAM ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಹೊರಬರುತ್ತಿರುವ ಮೊದಲ ವೋಲ್ಟ್ ಸ್ಮಾರ್ಟ್‌ಫೋನ್ ಇದಾಗಿದೆ.

By Bhaskar N J

ಚೀನಾ ಮೂಲದ ಇಟೆಲ್ ಕಂಪೆನಿ ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ಹೊಂದಿರುವ ಹೊಸದೊಂದು ಸ್ಮಾರ್ಟ್‌ಫೋನ್ ಅನ್ನು ಭಾರತಕ್ಕೆ ಪರಿಚಯಿಸಿದೆ.! ಇಟೆಲ್ ಕಂಪೆನಿಯ ನೂತನ ಸ್ಮಾರ್ಟ್‌ಫೋನ್ "ಸೆಲ್ಫಿ ಪ್ರೊ ಎಸ್41" ಸ್ಮಾರ್ಟ್‌ಫೋನ್‌ ಭಾರತದಲ್ಲಿ ಕೇವಲ 6,990 ರೂ.ಗಳಿಗೆ ಲಭ್ಯವಿದೆ.!!

6,990 ರೂ.ಗಳ ಬೆಲೆಯಲ್ಲಿ 3 ಜಿಬಿ RAM ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಹೊರಬರುತ್ತಿರುವ ಮೊದಲ ವೋಲ್ಟ್ ಸ್ಮಾರ್ಟ್‌ಫೋನ್ ಇದಾಗಿದ್ದು, ಹಾಗಾದರೆ, "ಸೆಲ್ಫಿ ಪ್ರೊ ಎಸ್41" ಸ್ಮಾರ್ಟ್‌ಫೋನ್‌ ಬೇರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್.!!

ಇಟೆಲ್ ಸೆಲ್ಫಿ ಪ್ರೊ ಎಸ್41 ಸ್ಮಾರ್ಟ್‌ಫೋನ್ ವಿನ್ಯಾಸ ಆಕರ್ಷಕವಾಗಿದ್ದು, 5.0ಇಂಚ್ (1280*720 ಪಿಕ್ಸೆಲ್) ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇ ಹೊಂದಿದೆ.! ಜೊತೆಗೆ 1.25GHz ಕ್ವಾಡ್-ಕೋರ್ ಮಿಡಿಯಾ ಟೆಕ್ ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ನ್ಯೂಗಾ 7.0 ಮೂಲಕ ಸ್ಮಾರ್ಟ್‌ಫೋನ್ ರನ್ ಆಗಲಿದೆ..!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

3 ಜಿಬಿ RAM ಮತ್ತು 16 ಜಿಬಿ ಆಂತರಿಕ ಮೆಮೊರಿಯೊಂದಿಗೆ ಸೆಲ್ಫಿ ಪ್ರೊ ಎಸ್41 ಸ್ಮಾರ್ಟ್‌ಫೋನ್ ಹೊರಬಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 32 ಜಿಬಿ ವರೆಗೆ ವಿಸ್ತರಿಸಬಹುದಾದ ಆಯ್ಕೆ ಸ್ಮಾರ್ಟ್‌ಪೋನ್‌ನಲ್ಲಿ ಲಭ್ಯವಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸೆಲ್ಫಿ ಪ್ರೊ ಎಸ್41 ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ಸ್ವಯಂ-ಫೋಕಸ್ ಹಿಂಬದಿಯ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಫುಲ್-ಫ್ರೇಮ್ ಸೆಲ್ಫಿ ಕ್ಯಾಮರಾ ಹೊಂದಿದೆ. ಎರಡೂ ಕ್ಯಾಮೆರಾಗಳು ಸಹ 8 ಮೆಗಾಪಿಕ್ಸೆಲ್‌ ಹೊಂದಿರುವುದು ಈ ಫೋನ್‌ನ ಇನ್ನೊಂದು ವಿಶೇಷತೆಗಳಲ್ಲೊಂದು.!!

ಬ್ಯಾಟರಿ ಶಕ್ತಿ ಎಷ್ಟು!?

ಬ್ಯಾಟರಿ ಶಕ್ತಿ ಎಷ್ಟು!?

ಇಟೆಲ್ ಕಂಪೆನಿ ತನ್ನ ನೂತನ ಸ್ಮಾರ್ಟ್‌ಫೋನ್ ಸೆಲ್ಫಿ ಪ್ರೊ ಎಸ್41 ನಲ್ಲಿ 2700mAh ಬ್ಯಾಟರಿಯನ್ನು ಅಳವಡಿಸಿದೆ.! ಬೂದು ಮತ್ತು ಕಪ್ಪು ಬಣ್ಣಗಳಲ್ಲಿ ಸೆಲ್ಫಿ ಪ್ರೊ ಎಸ್41 ಪೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.!!

ಫಿಂಗರ್ಪ್ರಿಂಟ್ ಮತ್ತು ಕನೆಕ್ಟಿವಿಟಿ

ಫಿಂಗರ್ಪ್ರಿಂಟ್ ಮತ್ತು ಕನೆಕ್ಟಿವಿಟಿ

4G VoLTE ಕನೆಕ್ಟಿವಿಟಿ ಹಾಗೂ ಫಿಂಗರ್ಪ್ರಿಂಟ್ ಸಂವೇದಕ ಸ್ಮಾರ್ಟ್‌ಫೋನ್ ಬೆಲೆಗೆ ಪೂರಕವಾದ ಅಂಶಗಳಾಗಿವೆ.!! ಹಾಗಾಗಿ, 3GB RAM, 4G VoLTE ಕನೆಕ್ಟಿವಿಟಿ ಹಾಗೂ ಫಿಂಗರ್ಪ್ರಿಂಟ್ ಫೀಚರ್ ಹೊಂದಿರುವ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್ ಎನ್ನಬಹುದು.!!

Best Mobiles in India

English summary
China-based Transsion Holdings on Thursday launched itel Mobile's "SelfiePro S41" smartphone at Rs 6,990 in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+