Home
ಮೊಬೈಲ್

ಜಸ್ಟ್ 5,699 ರೂ.! 5000mAh ಬ್ಯಾಟರಿ.. 6.6 ಇಂಚಿನ ಡಿಸ್ಪ್ಲೇ.. ಸದ್ದಿಲ್ಲದೆ ಹೊಸ itel ಫೋನ್ ಲಾಂಚ್

ಐಟೆಲ್ ಅಗ್ಗದ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ಭಾರತದಲ್ಲಿ ಇಂದು ತನ್ನ ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ಹೌದು, ಸದ್ದಿಲ್ಲದೆ ಐಟೆಲ್ ಝೆನೋ 10 (itel Zeno 10) ಫೋನ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದನ್ನು ಅತೀ ಅಗ್ಗದ ಬೆಲೆ ಪರಿಚಯಿಸಲಾಗಿದೆ. ನೀವು ಅಮೆಜಾನ್‌ ಮೂಲಕ ಈ ಫೋನನ್ನು ರಿಯಾಯಿತಿಯೊಂದಿಗೆ ಖರೀದಿಸಬಹುದು. ಅಗ್ಗದ ದರವೆಂಬ ಕಾರಣಕ್ಕೆ ಫೋನಿನ ಕಾರ್ಯಕ್ಷಮತೆ ಮತ್ತು ವೈಶೀಷ್ಟ್ಯಗಳಲ್ಲಿ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಐಟೆಲ್ ಝೆನೋ 10 ಮೊಬೈಲ್ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 10W ವೇಗದ ಚಾರ್ಜಿಂಗ್‌ ಹೊಂದಿದೆ. ಈ ಫೋನಿನಲ್ಲಿ 6.6 ಇಂಚಿನ HD+ ಡಿಸ್ಪ್ಲೇ ಲಭ್ಯವಿದೆ. ಇದು ಯುನಿಸೊಕ್ T603 ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 8 ಮೆಗಾಪಿಕ್ಸೆಲ್ ಮುಖ್ಯ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ ಎರಡು ಸ್ಟೋರೇಜ್ ರೂಪಾಂತರದಲ್ಲಿ ಬರುತ್ತದೆ. ನೀವು 5,700 ರೂ.ಗಿಂತ ಕಡಿಮೆ ಬೆಲೆಗೆ ಈ ಫೋನನ್ನು ಖರೀದಿಸಬಹುದು.

ಜಸ್ಟ್ 5,699 ರೂ.! 5000mAh ಬ್ಯಾಟರಿ, 6.6 ಇಂಚಿನ ಡಿಸ್ಪ್ಲೇ; ಯಾವ ಫೋನ್

ಐಟೆಲ್ ಝೆನೋ 10 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಟೆಲ್ ಝೆನೋ 10 ಸ್ಮಾರ್ಟ್‌ಫೋನ್ 6.66 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ವಾಟರ್‌ಡ್ರಾಪ್ ನಾಚ್ ಶೈಲಿಯ ಐಪಿಎಸ್‌ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 720 x 1612 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಜೊತೆಗೆ 60Hz ರಿಫ್ರೆಶ್ ದರ ಮತ್ತು ಡೈನಾಮಿಕ್ ಬಾರ್ ವೈಶಿಷ್ಟ್ಯವು ಸಹ ಲಭ್ಯವಿದೆ.

ಪ್ರೊಸೆಸರ್ ಸಾಮರ್ಥ್ಯ

ಐಟೆಲ್ ಝೆನೋ 10 ಮೊಬೈಲ್ ಯುನಿಸೊಕ್ T603 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್

ಐಟೆಲ್ ಝೆನೋ 10 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಎಐ ದ್ವಿತೀಯ ಲೆನ್ಸ್‌ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಜಸ್ಟ್ 5,699 ರೂ.! 5000mAh ಬ್ಯಾಟರಿ, 6.6 ಇಂಚಿನ ಡಿಸ್ಪ್ಲೇ; ಯಾವ ಫೋನ್

ಬ್ಯಾಟರಿ ಮತ್ತು ಚಾರ್ಜಿಂಗ್

ಐಟೆಲ್ ಝೆನೋ 10 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 10W ವೇಗದ ಚಾರ್ಜಿಂಗ್ ಸೌಲಭ್ಯ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಹೊಂದಿದೆ.

ಐಟೆಲ್ ಝೆನೋ 10 ಬೆಲೆ ಮತ್ತು ಲಭ್ಯತೆ

3GB RAM + 64GB ಸ್ಟೋರೇಜ್ ಬೆಲೆ = 5,999 ರೂ.
4GB RAM + 64GB ಸ್ಟೋರೇಜ್ ಬೆಲೆ = 6,499 ರೂ.

ಐಟೆಲ್ ಝೆನೋ 10 ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್‌ನ ಮೂಲ ರೂಪಾಂತರವು 3GB RAM ಜೊತೆಗೆ 64GB ಸ್ಟೋರೇಜ್ ಹೊಂದಿದೆ. ಇದರ ಬೆಲೆ ಕೇವಲ 5,999 ರೂ. ಆಗಿದೆ. ಈ ಸ್ಮಾರ್ಟ್‌ಫೋನಿನ 4GB RAM + 64GB ಸ್ಟೋರೇಜ್‌ ಬೆಲೆ 6,499 ರೂ. ಇದೆ. ನೀವು ಈ ಫೋನನ್ನು ಅಮೆಜಾನ್‌ನಲ್ಲಿ (Amazon) ಖರೀದಿಸಬಹುದು.

ಐಟೆಲ್ ಝೆನೋ 10 ಫೋನ್ ಓಪಲ್ ಪರ್ಪಲ್ ಮತ್ತು ಫ್ಯಾಂಟಮ್ ಕ್ರಿಸ್ಟಲ್ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ಮೊದಲ ಮಾರಾಟದ ಭಾಗವಾಗಿ ಬ್ಯಾಂಕ್ ಆಫರ್ ನೀಡುತ್ತಿದೆ. 3GB RAM ರೂಪಾಂತರವು 300 ರೂ. ರಿಯಾಯಿತಿಯೊಂದಿಗೆ 5,699 ರೂ.ಗೆ ಲಭ್ಯವಿದೆ. ಮತ್ತು 4GB RAM ವೇರಿಯಂಟ್ 500 ರೂ. ರಿಯಾಯಿತಿಯೊಂದಿಗೆ 5,999 ರೂ.ಗೆ ಮಾರಾಟವಾಗುತ್ತಿದೆ.

Best Mobiles in India

English summary
itel Zeno 10 Entry Level Smartphone Launched in India: Check Price, Offers, Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+