Home
ಮೊಬೈಲ್

₹5,999ಕ್ಕೆ 5,000mAh ಬ್ಯಾಟರಿ, IP54 ರೇಟಿಂಗ್‌ ಪೋನ್!..ಇಂದಿನಿಂದ ಮೊದಲ ಸೇಲ್!

ನೀವು ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿದ್ದರೆ, ಹೊಸ Itel Zeno 20 ಫೋನ್ ಇದೀಗ ನಿಮ್ಮ ಆಯ್ಕೆಯಾಬಹುದು.! ದೇಶದಲ್ಲಿ ಕಳೆದ ವಾರವಷ್ಟೇ ಬಿಡುಗಡೆಯಾಗಿರುವ Itel Zeno 20 ಫೋನ್ ಈಗ ದೇಶಾದ್ಯಂತ ಮಾರಾಟಕ್ಕೆ ಲಭ್ಯವಾಗಿದೆ. ₹5,999 ರಿಂದ ಆರಂಭವಾಗುವ ಬೆಲೆಯೊಂದಿಗೆ ಈ ಹೊಸ ಫೋನ್ ಈಗ ಅಮೆಜಾನ್‌ನಲ್ಲಿ ಲಭ್ಯವಿದ್ದು, ಇದರ ಆಕರ್ಷಕ ವೈಶಿಷ್ಟ್ಯಗಳು ಮತ್ತು ಕೈಗೆಟುಕುವ ಬೆಲೆಯು ಎಲ್ಲರ ಗಮನ ಸೆಳೆಯುತ್ತಿದೆ. ಹಾಗಾದರೆ, ಈ ಹೊಸ Itel Zeno 20 ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

Itel Zeno 20 : ಪ್ರಮುಖ ಫೀಚರ್ಸ್ ಹೇಗಿದೆ?
ಹೊಸ Itel Zeno 20 ಫೋನ್ 90Hz ರಿಫ್ರೆಶ್ ರೇಟ್ ಹೊಂದಿರುವ 6.6-ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾದ ಡೈನಾಮಿಕ್ ಬಾರ್ (Dynamic Bar), ಫೋನ್‌ನ ಮುಂಭಾಗದ ಕ್ಯಾಮೆರಾ ಕಟೌಟ್ ಸುತ್ತಲೂ ಬ್ಯಾಟರಿ ಸ್ಥಿತಿ ಮತ್ತು ಕರೆ ನೋಟಿಫಿಕೇಶನ್‌ಗಳನ್ನು ತೋರಿಸುತ್ತದೆ. ಇದು Apple ನ Dynamic Island ವೈಶಿಷ್ಟ್ಯವನ್ನು ಹೋಲುತ್ತದೆ. ಇದರ ಜೊತೆಗೆ, ಧೂಳು ಮತ್ತು ನೀರಿನಿಂದ ರಕ್ಷಿಸಲು IP54-ರೇಟೆಡ್ ಬಾಡಿ ಹೊಂದಿದೆ.

₹5,999ಕ್ಕೆ 5,000mAh ಬ್ಯಾಟರಿ, IP54 ರೇಟಿಂಗ್‌ ಪೋನ್!..ಇಂದಿನಿಂದ ಮೊದಲ ಸೇಲ್!

ಕಾರ್ಯಕ್ಷಮತೆಗಾಗಿ, ಈ Itel Zeno 20 ಫೋನ್ ಆಕ್ಟಾ-ಕೋರ್ Unisoc T7100 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 3GB ಮತ್ತು 4GB RAM ಆಯ್ಕೆಗಳಲ್ಲಿ ಲಭ್ಯವಿದ್ದು, ಇದರ ಸಂಗ್ರಹಣೆಯನ್ನು ಕ್ರಮವಾಗಿ 64GB ಮತ್ತು 128GB ವರೆಗೆ ವಿಸ್ತರಿಸಬಹುದು. ಈ ಫೋನ್‌ನಲ್ಲಿ Ivanna 2.0 ಎಂಬ AI ವಾಯ್ಸ್ ಅಸಿಸ್ಟೆಂಟ್ ವೈಶಿಷ್ಟ್ಯ ಕೂಡ ಇದೆ. ಇದು ಧ್ವನಿ ಆಜ್ಞೆಗಳ ಮೂಲಕ ಅಪ್ಲಿಕೇಶನ್‌ಗಳನ್ನು ತೆರೆಯಲು ಮತ್ತು ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, Itel Zeno 20 ಫೋನ್ 13-ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಭದ್ರತೆಯ ದೃಷ್ಟಿಯಿಂದ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ದೀರ್ಘಕಾಲದ ಬಳಕೆಗೆ ಅನುಕೂಲವಾಗುವಂತೆ ಇದು 5,000mAh ಬ್ಯಾಟರಿ ಮತ್ತು 15W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಜೊತೆಗೆ ಈ ಫೋನಿನಲ್ಲಿ DTS ಸೌಂಡ್ ಸಿಸ್ಟಮ್ ಇದೆ. ಆದರೆ, 5G ಬೆಂಬಲವನ್ನು ಹೊಂದಿಲ್ಲ.

₹5,999ಕ್ಕೆ 5,000mAh ಬ್ಯಾಟರಿ, IP54 ರೇಟಿಂಗ್‌ ಪೋನ್!..ಇಂದಿನಿಂದ ಮೊದಲ ಸೇಲ್!

Itel Zeno 20 ಪೋನ್ ಖರೀದಿಸಲು ಯೋಗ್ಯವಾಗಿದೆಯಾ?
ಡೈನಾಮಿಕ್ ಬಾರ್ ವಿಶಿಷ್ಟ ವೈಶಿಷ್ಟ್ಯವು Itel Zeno 20 ಫೋನ್‌ಗೆ ಪ್ರೀಮಿಯಂ ನೋಟ ಮತ್ತು ಅನುಭವವನ್ನು ಒದಗಿಸುತ್ತಿದೆ. ಈ ಬೆಲೆಯ ಫೋನ್‌ಗಳಲ್ಲಿ ಸಾಮಾನ್ಯವಾಗಿ ಕಾಣಸಿಗದ IP54 ರೇಟಿಂಗ್ ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುವ ವೈಶಿಷ್ಟ್ಯ ಮತ್ತು ದೀರ್ಘಕಾಲದ ಬಳಕೆಗೆ ಅಗತ್ಯವಿರುವ ಉತ್ತಮ ಬ್ಯಾಟರಿ ಸಾಮರ್ಥ್ಯವು ಈ ಫೋನನ್ನು ಆಕರ್ಷಕವಾಗಿದೆ. ನೀವು ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ, Itel Zeno 20 ಉತ್ತಮ ಆಯ್ಕೆಯಾಗಿದೆ. ಆದರೆ, ನೀವು 5G ಬೆಂಬಲವನ್ನು ನಿರೀಕ್ಷಿಸುವುದಾದರೆ, ಇದು ನಿಮಗೆ ಅಯ್ಕೆಯಾಗುವುದಿಲ್ಲ.

ಇತರೆ ಆಯ್ಕೆಗಳು ಯಾವುವು?
Itel Zeno 20 ಸ್ಮಾರ್ಟ್‌ಫೋನ್ ತನ್ನ ಬೆಲೆಯ ಕಾರಣದಿಂದ ಭಾರತದ ಬಜೆಟ್ ವಿಭಾಗದಲ್ಲಿ ಪ್ರಬಲ ಸ್ಪರ್ಧೆಯನ್ನು ನೀಡುತ್ತಿದೆ. ಈ ಫೋನ್ ಮುಖ್ಯವಾಗಿ Poco C61, Realme C51, Lava Blaze 2 Pro, ಮತ್ತು Motorola Moto G04 ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ. ಈ ಎಲ್ಲಾ ಫೋನ್‌ಗಳು 10,000 ರೂಪಾಯಿಗಳ ಒಳಗೆ ಲಭ್ಯವಿದ್ದು, ಇವುಗಳು ಉತ್ತಮ ಕಾರ್ಯಕ್ಷಮತೆ ಮತ್ತು ಫೀಚರ್‌ಗಳನ್ನು ನೀಡುತ್ತಿವೆ. ಆದಾಗ್ಯೂ, Itel ತನ್ನ ಪ್ರೀಮಿಯಂ ವೈಶಿಷ್ಟ್ಯಗಳಾದ ಡೈನಾಮಿಕ್ ಬಾರ್ ಮತ್ತು IP54 ರೇಟಿಂಗ್‌ಗಳ ಮೂಲಕ ಈ ಫೋನ್‌ಗಳಿಗಿಂತ ಉತ್ತಮ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

Best Mobiles in India

English summary
The Itel Zeno 20 is an ultra-affordable smartphone featuring a 6.6-inch display, now on sale in India via Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+