6499 ರೂ.ಗಳಲ್ಲಿ ಇಂತಹ ಫೀಚರ್ಸ್ ಹೊಂದಿರುವ ಏಕೈಕ ಸ್ಮಾರ್ಟ್‌ಪೋನ್ ಇದು!!
ಭಾರತದ ಅತ್ಯಂತ ಕಡಿಮೆ ಬೆಲೆಯ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ 'ಐವೊಮಿ ಐ2 ಲೈಟ್' ಸ್ಮಾರ್ಟ್‌ಫೋನಿಗೆ ಗ್ರಾಹಕರು ಮನಸೋತಿದ್ದಾರೆ. ಚೀನಾದ ಪ್ರಮುಖ ಎಲೆಕ್ಟ್ರಾನಿಕ್ ಕಂಪನಿ ಐವೊಮಿ ಕಂಪೆನಿಯು ಕಳೆದ ತಿಂಗಳು ಲಾಂಚ್ ಮಾಡಿದ್ದ 'ಐವೊಮಿ ಐ2 ಲೈಟ್' ಸ್ನಾರ್ಟ್‌ಫೋನ್ ಈಗ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.
ಸ್ಟೇಅನ್ ಇಂಟೆರೆಪ್ಟೆಡ್ ಎಂಬ ವಿಶೇಷ ಟ್ಯಾಗ್ಲೈನ್ ಹೊತ್ತು ಬಿಡುಗಡೆಯಾಗಿದ್ದಾಗಲೇ ಮೊಬೈಲ್ ಮಾರುಕಟ್ಟೆಯ ಗಮನ ಸೆಳೆದಿದ್ದ 'ಐವೊಮಿ ಐ2 ಲೈಟ್' ಈಗ ತನ್ನ ಬೆಲೆಯಿಂದಲೇ ವೈರಲ್ ಆಗಿದೆ. 6499 ರೂಪಾಯಿಗಳಿಗೆ ಇಂತಹ ಫೀಚರ್ಸ್ ಹೊಂದಿರುವ ಏಕೈಕ ಸ್ಮಾರ್ಟ್‌ಪೋನ್ ಇದಾಗಿದೆ ಎಂದು ಮೊಬೈಲ್ ಪ್ರಿಯರಿಗೆ ಅನಿಸುವಂತೆ ಸ್ಮಾರ್ಟ್‌ಪೋನ್ ಹೆಸರುವಾಸಿಯಾಗಿದೆ.

ಹಾಗಾದರೆ, 18:9 ಸ್ಕ್ರೀನ್ ರೆಷ್ಯೂನೊದಿಗೆ 5.45 ಇಂಚಿನ ಹೆಚ್‌ಡಿ ಡಿಸ್ಪ್ಲೇ, 4000 ಎಂಎಎಚ್ ಬ್ಯಾಟರಿನ ಸಾಮರ್ಥ್ಯದಂತಹ ಅತ್ಯುತ್ಕೃಷ್ಟ ಶ್ರೇಣಿಯ ಸಾಮರ್ಥ್ಯ ಮತ್ತು ಆಕರ್ಷಕ ವಿನ್ಯಾಸ ಒಳಗೊಂಡಿರುವ ಈ ಸ್ಮಾರ್ಟ್‌ಪೋನ್ ಬೆಲೆ ಎಷ್ಟು? ಸ್ಮಾರ್ಟ್‌ಪೋನಿನ ಇನ್ನಿತರ ಫೀಚರ್ಸ್ ಯಾವುವು? ಖರೀದಿಸಲು ಯೋಗ್ಯವಾಗಿದೆಯೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

'ಐವೊಮಿ ಐ2 ಲೈಟ್' ಡಿಸ್‌ಪ್ಲೇ
ಮೊದಲೇ ಹೇಳಿದಂತೆ 'ಐವೊಮಿ ಐ2 ಲೈಟ್' ಸ್ಮಾರ್ಟ್‌ಫೋನ್ 18:9 ಸ್ಕ್ರೀನ್ ರೆಷ್ಯೂನೊದಿಗೆ 5.45 ಇಂಚಿನ ಹೆಚ್‌ಡಿ ಡಿಸ್ಪ್ಲೇ ಹೊಂದಿದೆ. 720*1440 ಪಿಕ್ಸೆಲ್ ಸಾಮರ್ಥದ ಈ ಡಿಸ್‌ಪ್ಲೇಯು ವಿಡಿಯೊ ವೀಕ್ಷಣೆಗೆ ಮಧ್ಯಮ ಗುಣಮಟ್ಟದಲ್ಲಿ ಸಹಕರಿಸಲಿದೆ. ನೀಡುವ ಹಣಕ್ಕೆ ಸರಿಹೊಂದುವಂತಹ ಈ ಸ್ಮಾರ್ಟ್‌ಪೋನ್ ವಿನ್ಯಾಸ ಉತ್ತಮವಾಗಿದೆ ಎಂದು ಹೇಳಬಹುದು.

ಪ್ರೊಸೆಸರ್ ಮತ್ತು RAM!
1.5GHz ಕ್ವಾಡ್-ಕೋರ್ 6739 ಪ್ರೊಸೆಸರ್ ಹೊಂದಿರುವ ಈ ಐವೊಮಿ ಐ2 ಲೈಟ್' ಸ್ಮಾರ್ಟ್‌ಫೋನ್ 2 ಜಿಬಿ RAM ಮತ್ತು 16 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಆಂಡ್ರಾಯ್ಡ್ ಓರಿಯೊ 8.1 ಮೂಲಕ ಕಾರ್ಯನಿರ್ವಹಣೆ ನೀಡುವ ಈ ಸ್ಮಾರ್ಟ್‌ಪೋನಿನ ಮೆಮೊರಿಯನ್ನು ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ 128 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸಾಮರ್ಥ್ಯ?
13 ಎಂಪಿ +2 ಎಂಪಿ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 4ಪಿ ಸ್ಲಿಮ್ ಲೆನ್ಸ್‌ನೊಂದಿಗೆ 8ಎಂಪಿ ಸೆಲ್ಫಿ ಕ್ಯಾಮೆರಾಗಳನ್ನು 'ಐವೊಮಿ ಐ2 ಲೈಟ್' ಸ್ಮಾರ್ಟ್‌ಫೋನನಿನಲ್ಲಿ ನಿಡಲಾಗಿದೆ. ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಪೋನಿನ ಫೇಸ್ ಅನ್‌ಲಾಕ್‌ಗೆ ಸಪೋರ್ಟ್ ಮಾಡುತ್ತದೆ. ಕ್ಯಾಮೆರಾ ಸೋನಿ ಸೆನ್ಸಾರ್ ಸಾಫ್ಟ್ ಫ್ಲ್ಯಾಶ್ ಒಳಗೊಂಡಿರುವುದು ಕ್ಯಾಮೆರಾದ ವಿಶೇಷತೆಯಾಗಿದೆ.

ಇತರೆ ಏನೆಲ್ಲಾ ಫೀಚರ್ಸ್?
2ಎ ಫಾಸ್ಟ್ ಚಾರ್ಜ್ ತಂತ್ರಜ್ಞಾನದ 4000 ಎಂಎಹೆಚ್ ಬ್ಯಾಟರಿ, ಒಟಿಜಿ ಸಪೋರ್ಟ್, ಡ್ಯುಯಲ್ ಸಿಮ್, 4ಜಿ ವೋಲ್ಟ್, ಆಂಡ್ರಾಯ್ಡ್ 8.1 ಓರಿಯೊಯೊದಂತಹ ಫೀಚರ್ಸ್ ಜೊತೆಗೆ ಶೇಷವಾಗಿ ಲ್ಯಾಪ್ಟಾಪ್ ಮೇಲೆ ಸ್ಕ್ರೀನ್ ಮಿರರಿಂಗ್ ವ್ಯವಸ್ಥೆಯನ್ನು ಹೊಂದಿದೆ. ಫೋನ್ ಅನ್ಲಾಕ್ ಆಗಲು ಮುಖ ಗುರುತಿಸುವಂತಹ ತಂತ್ರಜ್ಞಾನ ಸಾಮಾನ್ಯ ಎನಿಸುವಂತಿದೆ.

ಖರೀದಿಸಲು ಯೋಗ್ಯ ಮೊಬೈಲ್?
ಆನ್‌ಲೈನ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಈ ಸ್ಮಾರ್ಟ್‌ಫೋನ್ ಗುಣಮಟ್ಟವು ನಾವು ನೀಡುವ ಬೆಲೆಗೆ ಯೋಗ್ಯವಾಗಿದೆ ಎನ್ನಬಹುದು. ಆದರೆ, ಇನ್ನು ಕೆಲವು ಸಾವಿರ ರುಪಾಯಿಗಳಲ್ಲಿ ಇದಕ್ಕಿಂತಲೂ ಹೆಚ್ಚು ಗುಣಮಟ್ಟದ ಸ್ಮಾರ್ಟ್‌ಫೋನ್ ಖರೀದಿಸುವುದು ಒಳ್ಳೆಯದು. ಆದರೂ, ಈ ಸ್ಮಾರ್ಟ್‌ಫೋನ್ ಅನ್ನು ನಿರಾಕರಿಸಲು ಸಾಧ್ಯವಿಲ್ಲ.!


Click it and Unblock the Notifications








