ಕೇವಲ ರೂ.1799ಕ್ಕೆ ಆಂಡ್ರಾಯ್ಡ್ ಗೊ ಫೋನ್..! ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ..!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಚೀನಾ ಕಂಪನಿಯ ಆರ್ಭಟವು ಹೆಚ್ಚಾಗಲು ಇದೊಂದೇ ಸ್ಮಾರ್ಟ್‌ಫೋನ್ ಸಾಕು, ಚೀನಾದ ಬೇರೆ ಟಾಪ್ ಕಂಪನಿಗಳಿಗೆ ಸಾಧ್ಯವಾದ ಸಾಧ್ಯತೆಯೊಂದನ್ನು ತೋರಿಸಿಕೊಟ್ಟಿರುವ ಈ ಕಂಪನಿ ಇದುವರೆಗೂ ಯಾವುದೇ ಸ್ಮಾರ್ಟ್‌ಫೋನ್ ಕಂಪನಿಯೂ ನೀಡದ ಬೆಲೆಗೆ ಹೆಚ್ಚಿನ ಪ್ರಮಾಣದ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಿದೆ. ಕಡಿಮೆ ಬೆಲೆ, ಆಕರ್ಷಕ ವಿನ್ಯಾಸ, ಗರಿಷ್ಠ ಫೀಚರ್ಸ್‌ನೊಂದಿಗೆ ಬಂದಿರುವ ಐವಿವೋಮಿ ಹೊಸ ಫೋನ್ ಕುರಿತು ಮಾಹಿತಿಯೂ ಇಲ್ಲಿದೆ.

ಶಿಯೋಮಿ, ವಿವೋ, ಒಪ್ಪೋ ಕಂಪನಿಗಳಿಗೂ ಸಾಧ್ಯವಾಗದ ಮಾದರಿಯಲ್ಲಿ ಐವೋಮಿ ಹೊಸ ಮಾದರಿಯಲ್ಲಿ ಐವೋಮಿ iಪ್ರೋ ಹೆಸರಿನ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಈ ನೂತನ ಫೋನ್ ಭಾರತದ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸಾಧ್ಯತೆಯನ್ನು ತೋರಿಸಿಕೊಡಲಿದೆ ಎನ್ನಲಾಗಿದೆ. ಈ ಬೆಲೆ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಇನ್ನೆಂದು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

ಫುಲ್ ವೀವ್ಯೂ ಡಿಸ್‌ಪ್ಲೇ:
ಐವೋಮಿ iಪ್ರೋ ಸ್ಮಾರ್ಟ್‌ಫೋನಿನಲ್ಲಿ ಫುಲ್ ವೀವ್ಯೂ ಡಿಸ್‌ಪ್ಲೇ ಯನ್ನು ಕಾಣಬಹುದಾಗಿದೆ. 4.95 ಇಂಚಿನ ಡಿಸ್‌ಪ್ಲೇಯನ್ನು ಈ ಫೋನಿನಲ್ಲಿ ನೀಡಲಾಗಿದೆ. ಇದು 18:9 ಅನುಪಾತದಿಂದ ಕೂಡಿದೆ. ಇದೊಂದು ಬಜೆಟ್ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ಫೋನ್ ಆಗಿದ್ದು, FWVGA+ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಫೇಸ್ ಲಾಕ್ ಸೇವೆಯನ್ನು ಹೊಂದಿದೆ.

ಆಂಡ್ರಾಯ್ಡ್ ಗೋ:
ಐವೋಮಿ iಪ್ರೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಗೋನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಮಿಡಿಯಾ ಟೆಕ್ MT6737 ಪ್ರೋಸೆಸರ್ ಹೊಂದಿದ್ದು, 1 GB RAM ಅನ್ನು ಕಾಣಬಹುದಾಗಿದೆ. ಅಲ್ಲದೇ ಇದು 8 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು, 128 ಜಿಬಿ ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದು ಬಳಕೆದಾರರಿಗೆ ದೊಡ್ಡದಾದ ಅವಕಾಶವನ್ನು ನೀಡಲಿದೆ.

ಬೆಸ್ಟ್ ಕ್ಯಾಮೆರಾ:
ಐವೋಮಿ iಪ್ರೋ ಸ್ಮಾರ್ಟ್‌ಫೋನಿನಲ್ಲಿ 5 MP ಸೆಲ್ಪೀ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ 5 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಈ ಎರಡು ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ.

ಬೆಲೆ:
ಫುಲ್ ವೀವ್ಯೂ ಡಿಸ್‌ಪ್ಲೇ ಹೊಂದಿರುವ ನೂತನ ಐವೋಮಿ iಪ್ರೋ ಸ್ಮಾರ್ಟ್‌ಫೋನಿನ ಬೆಲೆ ಕೇಳಿದ್ರೆ ಶಾಕ್ ಆಗುವುದು ಗ್ಯಾರೆಂಟಿ, ಈ ಸ್ಮಾರ್ಟ್‌ಫೋನ್ ಕೇವಲ ರೂ.3,999ಕ್ಕೆ ಲಭ್ಯವಿದೆ ಎನ್ನಲಾಗಿದೆ. ಇಷ್ಟು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಯಾವುದೇ ಆಂಡ್ರಾಯ್ಡ್ ಗೋನಲ್ಲಿ ಸ್ಮಾರ್ಟ್‌ಫೋನ್ ದೊರೆಯುತ್ತಿಲ್ಲ.

ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ:
ಐವೋಮಿ iಪ್ರೋ ಸ್ಮಾರ್ಟ್‌ಫೋನಿನಲ್ಲಿ ಫ್ಲಿಪ್ ಕಾರ್ಟ್ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ. ಇದಲ್ಲದೇ ಜಿಯೋದಿಂದ ರೂ.2200 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದರಿಂದಾಗಿ ಈ ಸ್ಮಾರ್ಟ್‌ಫೋನ್ ಎಫೆಕ್ಟ್‌ವಿವ್ ಆಗಿ ರೂ.1799ಕ್ಕೆ ಮಾರಾಟವಾಗಲಿದೆ.


Click it and Unblock the Notifications








