ಶಿಯೋಮಿಗೆ ಸೆಡ್ಡು ಹೊಡೆದ ಐವೋಮಿ!..3,999 ರೂ.ಗೆ ಬೆಸ್ಟ್ 4G ಸ್ಮಾರ್ಟ್‌ಫೋನ್‌ !!

Written By:

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೈನೀಸ್ ಕಂಪೆನಿಗಳದ್ದೇ ಕಾರುಬಾರು. ಶಿಯೋಮಿ, ಲೆನೊವೊ, ಲಿ ಇಕೋ ಕಂಪೆನಿಗಳಂತೆ ಇದೀಗ ಐವೋಮಿ (iVoomi) ಎಂಬ ಚೈನೀಸ್‌ ಕಂಪನಿ ಭಾರತದಲ್ಲಿ ಕಾಲಿಟ್ಟಿದೆ.!! ಐವೋಮಿ ಕೇವಲ 3,999 ರೂಪಾಯಿಗೆ 4G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳೊಂದಿಗೆ ಬಿಡುಗಡೆಯಾದ ಮೊಬೈಲ್‌ ಇದಾಗಿದೆ.!!

ಆಂಡ್ರಾಯ್ಡ್ 6.o ಮಾರ್ಶಮಲ್ಲೊ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುವ ಐವೋಮಿಯ ನೂತನ ಐವೋಮಿ iv50 ಸ್ಮಾರ್ಟ್‌ಫೋನ್, 5ಇಂಚಿನ HD (540×960 ಪಿಕ್ಸಲ್) ಐಪಿಎಸ್ ಡಿಸ್‌ಪ್ಲೇ, 1.3GHz ಕ್ವಾಡ್‌ ಕೋರ್‌ ಪ್ರೊಸೇಸರ್, 1ಜಿಬಿ RAM ಮತ್ತು 4G VoLTE ಫೀಚರ್ ಅನ್ನು ಹೊಂದಿದೆ.!!

ಶಿಯೋಮಿಗೆ ಸೆಡ್ಡು ಹೊಡೆದ ಐವೋಮಿ!..3,999 ರೂ.ಗೆ ಬೆಸ್ಟ್ 4G ಸ್ಮಾರ್ಟ್‌ಫೋನ್‌ !!

ಮಾರ್ಚ್ 31 ರಿಂದ ಜಿಯೋ 999 ರೂ. ಮೊಬೈಲ್ ಮಾರಾಟ!!?

ಸೆಲ್ಫಿ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಐವೋಮಿ ಸೆಲ್ಫಿಗಾಗಿ 8ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಅಳವಡಿಸಿದೆ. ಆದರೆ ರಿಯರ್ ಕ್ಯಾಮೆರಾ ಕೇವಲ 5 ಮೆಗಾಪಿಕ್ಸೆಲ್ ಇದೆ.!! ಇನ್ನು ಸ್ಮಾರ್ಟ್‌ಫೋನ್ 8ಜಿಬಿ ಇಂಟರ್‌ನಲ್‌ ಮೆಮೊರಿ ಹೊಂದಿದ್ದು, ಇದನ್ನು ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ 128ಜಿಬಿವರೆಗೂ ವಿಸ್ತರಿಸಬಹುದು.

ಶಿಯೋಮಿಗೆ ಸೆಡ್ಡು ಹೊಡೆದ ಐವೋಮಿ!..3,999 ರೂ.ಗೆ ಬೆಸ್ಟ್ 4G ಸ್ಮಾರ್ಟ್‌ಫೋನ್‌ !!

ಐವೋಮಿ iv50 ಸ್ಮಾರ್ಟ್‌ಫೋನ್ ಕಪ್ಪು ಮತ್ತು ಗೋಲ್ಡ್ ಬಣ್ಣದಲ್ಲಿ ಲಭ್ಯವಿದ್ದು, ಫ್ಲ್ಯಾಶ್‌ ಚಾರ್ಜಿಂಗ್ ಜೊತೆಗೆ 3000 mAH ಬ್ಯಾಟರಿ ಕೂಡ ನೀಡಲಾಗಿದೆ. ಬೆಸ್ಟ್‌ ಕ್ವಾಲಿಟಿಯ ಸ್ಮಾರ್ಟ್‌ಫೋನ್ ಮೊಬೈಲ್‌ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಶಾಪ್‌ಕ್ಲೂಸ್‌ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಈಗಾಗಲೇ ಸೋಲ್ಡ್ ಔಟ್ ಆಗಿದೆ.!! ಮುಂದಿನ ಸೇಲ್ ಸದ್ಯದಲ್ಲೆ ಆರಂಭವಾಗಲಿದೆ.

English summary
Chinese electronic major iVoomi has entered the Indian market. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot