ಭಾರತದ ಅತ್ಯಂತ ಕಡಿಮೆ ಬೆಲೆಯ 3GB RAM ಫೋನ್ 'ಐವೋಮಿ ಮಿ3'!!..ಬೆಲೆ ಎಷ್ಟು?
ಶಿಯೋಮಿಗೆ ನೇರವಾಗಿ ಸೆಡ್ಡು ಹೊಡೆಯುವ ಬಜೆಟ್ ಫೋನ್ ಐವೋಮಿ ಮಿ 3 ಸ್ಮಾರರ್ಟ್‌ಫೋನ್ 5,499 ರೂಪಾಯಿಗಳಿಗೆ ಬಿಡುಗಡೆಯಾಗಿದೆ.!!
ಭಾರತದ ಮೊಬೈಲ್ ಮಾರುಕಟ್ಟೆಗೆ ಈಗಷ್ಟೆ ಕಾಲಿಟ್ಟಿರುವ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ ಐವೋಮಿ ಅತ್ಯಂತ ಕಡಿಮೆ ಬೆಲೆಗೆ 3GB RAM ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.! ಶಿಯೋಮಿಗೆ ನೇರವಾಗಿ ಸೆಡ್ಡು ಹೊಡೆಯುವ ಬಜೆಟ್ ಫೋನ್ ಐವೋಮಿ ಮಿ 3 ಸ್ಮಾರರ್ಟ್‌ಫೋನ್ 5,499 ರೂಪಾಯಿಗಳಿಗೆ ಬಿಡುಗಡೆಯಾಗಿದೆ.!!
3GB RAM ಮತ್ತು 32GB ಮೆಮೊರಿ ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದ್ದು, ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಹೊಂದಿರಬೇಕಾದ ಎಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದರೆ, ಐವೋಮಿ ಮಿ 3 ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಮತ್ತು ಈ ಫೋನ್ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?
ಐವೋಮಿ ಮಿ 3 ಸ್ಮಾರ್ಟ್‌ಫೋನ್ 5.2 ಇಂಚ್ ಹೆಚ್‌ಡಿ ರೆಸ್ಯುಲೇಷನ್ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇ 2.5Dಕರ್ವಡ್ ಗ್ಲಾಸ್‌ಯಿಂದ ರೂಪಿತವಾಗಿದೆ. ಎಲ್ಲಿಯೂ ಫಿಂಗರ್‌ಪ್ರಿಂಟ್ ಫೀಚರ್ ಅಳವಡಿಸಿಲ್ಲದ ಈ ಫೋನ್ ಶಿಯೋಮಿಯ ಫೋನ್ ರೆಡ್‌ಮಿ 4A ವಿನ್ಯಾಸ ಹೊಂದಿದೆ ಎನ್ನಬಹುದು.

ಪ್ರೊಸೆಸರ್ ಮತ್ತು RAM!!
ಮೀಡಿಯಾಟೆಕ್ ಎಮ್‌ಟಿ6737 ಚಿಪ್‌ಸೆಟ್ ಮತ್ತು ಮಾಲಿ-ಟಿ720 ಗ್ರಾಫಿಕ್ಸ್ ಜಿಪಿಯು ಮೊಬೈಲ್‌ನಲ್ಲಿದ್ದು, ಆಂಡ್ರಾಯ್ಡ್ ನ್ಯೂಗಾ ಮೂಲಕ ಫೋನ್ ಕಾರ್ಯನಿರ್ವಹಣೆ ನೀಡಲಿದೆ.!! ಮೊದಲೇ ಹೇಳಿದಂತೆ ಈ ಫೋನ್ 3GB RAM ಮತ್ತು 32GB ಮೆಮೊರಿಯನ್ನು ಹೊಂದಿದೆ.!!

ಕ್ಯಾಮೆರಾ ಉತ್ತಮವಾಗಿದೆ.!!
ಐವೋಮಿ ಮಿ 3 ಸ್ಮಾರ್ಟ್‌ಫೋನ್ 13MP ರಿಯರ್ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಎರಡೂ ಕ್ಯಾಮೆರಾಗಳಿಗೂ ಕೂಡ ಫ್ಲಾಶ್‌ಲೈಟ್ ಹೊಂದಿರುವುದು ಐವೋಮಿ ಮಿ 3 ಫೋನ್ ಕ್ಯಾಮೆರಾಗಳ ವಿಶೇಷತೆಯಾಗಿದೆ ಎಂದು ಹೇಳಬಹುದು.!!

ಬ್ಯಾಟರಿ ಮತ್ತು ಇತರ ಫೀಚರ್ಸ್!!
ಎಲ್ಲಾ ಫೀಚರ್ಸ್ಗಳಲ್ಲಿಯೂ ಶಿಯೋಮಿಗೆ ಸೆಡ್ಡುಹೊಡೆದಿರುವ ಐವೋಮಿ ಮೊಬೈಲ್ ಕಂಪೆನಿ, ಐವೋಮಿ ಮಿ 3 ಫೋನ್‌ನಲ್ಲಿ 3000mAh ಬ್ಯಾಟರಿಯನ್ನು ಅಳವಡಿಸಿದೆ. ಇನ್ನುಳಿದಂತೆ 4G ಎಲ್‌ಟಿಯ, ಜಿಪಿಎಸ್, ಮೈಕ್ರೊ ಯುಎಸ್‌ಬಿ ಸಪೋರ್ಟ್, ಬ್ಲೂಟೂತ್ ಎಲ್ಲಾ ಫೀಚರ್ಸ್ ಅನ್ನು ಮೊಬೈಲ್ ಒಳಗೊಂಡಿದೆ.!!


ಖರೀದಿಸಲು ಯೋಗ್ಯವೇ?
3GB RAM ಹೊಂದಿರುವ ಅತ್ಯಂತ ಕಡಿಮೆ ಬೆಲೆ ಫೋನ್ ಐವೋಮಿ ಮಿ 3 ಆಂಡ್ರಾಯ್ಡ್ ಓರಿಯೋಗೂ ಕೂಡ ಅಪ್‌ಡೇಟ್ ಆಗಲಿದೆ. ಹಾಗಾಗಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಇದು ಉತ್ತಮ ಫೋನ್ ಆಗಿರುವುದರಿಂದ ಈ ಫೋನ್ ಖರೀದಿಸಲು ಯೋಗ್ಯ ಎಂದು ಹೇಳಬಹುದು.!!


Click it and Unblock the Notifications