ಆಪಲ್‌ನ ಐಕ್ಲೌಡ್‌ಗೆ ಸಂಕಷ್ಟಗಳ ಸರಮಾಲೆ

Written By:

31 ಆಗಸ್ಟ್ 2014 ಈ ದಿನದಂದು ಸೆಲೆಬ್ರಿಟಿಗಳ ಬೆತ್ತಲೆ ಚಿತ್ರದ ಪ್ರದರ್ಶನ ಐಕ್ಲೌಡ್‌ನಲ್ಲಿ ಬಿಡುಗಡೆಗೊಂಡಿದ್ದು ಆಪಲ್‌ಗೆ ಸಂದಿಗ್ಧ ಸ್ಥಿತಿಯನ್ನು ಉಂಟುಮಾಡುವಲ್ಲಿ ಕಾರಣವಾಗಿದೆ.

ಹಾಲಿವುಡ್ ಸೆಲೆಬ್ರಿಟಿಗಳಾದ ಜೆನ್ನಿಫರ್ ಲಾರೆನ್ಸ್, ರಿಹಾನ್ನ, ಅರಿನ್ನಾ ಗ್ರ್ಯಾಂಡೆ, ಸೆಲಿನಾ ಗೋಮ್ಜ್ ಹೀಗೆ ಕೆಲವೊಂದು ಮಹಿಳಾ ಸೆಲೆಬ್ರಿಟಿಗಳ ಬೆತ್ತಲೆ ದೇಹ ಪ್ರದರ್ಶನವು ಆಪಲ್‌ನ ಐಕ್ಲೌಡ್‌ನಲ್ಲಿ ಲೀಕ್ ಆಗಿದ್ದು ಇದು ಸೆಲೆಬ್ರಿಟಿಗಳ ಪೋನ್ ಅನ್ನು ಹ್ಯಾಕ್ ಮಾಡುವ ಅವಕಾಶವನ್ನು ಒದಗಿಸಿತ್ತು.

ಈ ಸೆಲೆಬ್ರಿಟಿಗಳ ದೇಹ ಪ್ರದರ್ಶನವು ಐಕ್ಲೌಡ್‌ನ ಭದ್ರತೆಯ ಸುತ್ತ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಸೆಲೆಬ್ರಿಟಿಗಳ ಖಾಸಗಿ ವಿಚಾರವನ್ನು ಬಯಲು ಮಾಡಿರುವುದು ಹೆಚ್ಚಿನ ಐಕ್ಲೌಡ್ ಬಳಕೆದಾರರಲ್ಲಿ ಕೂಡ ಸಂದೇಹವನ್ನು ವ್ಯಕ್ತಪಡಿಸುತ್ತಿದೆ.

ಐಕ್ಲೌಡ್ ಸಮಸ್ಯೆ ಆಪಲ್‌ಗೆ ಬಾಧಕವೇ???

ಆಪಲ್‌ನ ಐಕ್ಲೌಡ್ 2011 ರಲ್ಲಿ ಲಾಂಚ್ ಆಗಿದ್ದು, ಕಂಪೆನಿಯ ಮೊಬೈಲ್ ಮಿ (MobileMe) ಸೇವೆಯ ಬದಲಿಗೆ ಈ ಸೇವೆಯನ್ನು ಕಂಪೆನಿಯು ಪ್ರಾಯೋಜಿಸಿತ್ತು. ಒಂದು ವರದಿಯ ಪ್ರಕಾರ ಇದೀಗ ಐಕ್ಲೌಡ್ 300 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು 20% ದಷ್ಟು ಹೆಚ್ಚುವರಿ ಅಧಿಕತೆಯನ್ನು ಇದು ಪ್ರದರ್ಶಿಸಿದೆ.

ಈ ರೀತಿಯ ಹ್ಯಾಕಿಂಗ್ ಐಕ್ಲೌಡ್‌ನ ಭದ್ರತೆಗೆ ಹೆಚ್ಚಿನ ಸವಾಲನ್ನು ಒಡ್ಡಿದ್ದು ಇದನ್ನು ನಿಲ್ಲಿಸಲು ಹೆಚ್ಚಿನ ಬಳಕೆದಾರರು ಆಪಲ್‌ನ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ. ಐಕ್ಲೌಡ್‌ನಲ್ಲಿ ಅಷ್ಟು ಸುಲಭವಾಗಿ ಹ್ಯಾಕರ್ ಬಳಕೆದಾರರ ಖಾಸಗಿ ಬದುಕನ್ನು ಪ್ರದರ್ಶಿಸಿದ್ದಾನೆ ಎಂದಾದಲ್ಲಿ ಇದರ ಭದ್ರತೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನಾವು ಸುಲಭವಾಗಿ ಅಂದಾಜಿಸಬಹುದೆಂದು ತಂತ್ರಜ್ಞಾನ ಬರಹಗಾರರಾದ ಬ್ರಿಯಾನ್ ಫಗೋಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಕಂಪೆನಿಯು ಈಗ ತನ್ನ ಹೆಚ್ಚಿನ ಗಮನವನ್ನ ಮುಂಬರಲಿರುವ ಐಫೋನ್‌ನ ಆಗಮನದ ತಯಾರಿಯ ಮೇಲೆ ಇಟ್ಟಿದ್ದು ಈ ತರಹದ ಸಮಸ್ಯೆಗಳು ಆಪಲ್‌ಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಲಿದೆ. ಆದ್ದರಿಂದ ಐಕ್ಲೌಡ್ ಬಳಕೆದಾರರು ಹೆಚ್ಚಿನ ಗಮನವನ್ನು ಭದ್ರತೆಯನ್ನು ನೀಡಿ ತಮ್ಮ ಖಾಸಗಿ ಖಾತೆಯನ್ನು ಇಲ್ಲಿ ತೆರೆಯಬೇಕೆಂಬುದಾಗಿ ಬ್ರಿಯಾನ್ ತಿಳಿಸಿದ್ದಾರೆ.

ಸುದ್ದಿಯ ಪ್ರಕಾರ ಆಪಲ್ ಸ್ಪೋಕ್ಸ್‌ವುಮನ್ ನಟಾಲ್ ಕೆರ್ರೀಸ್ ತಿಳಿಸಿದ ಪ್ರಕಾರ ಆಪಲ್ ಈ ಬಗ್ಗೆ ತನಿಖೆಗಳನ್ನು ನಡೆಸುತ್ತಿದ್ದು ಐಕ್ಲೌಡ್‌ನ ಖಾತೆಯನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದೆ ಮತ್ತು ಇದರಲ್ಲಿರುವ ಬಳಕೆದಾರರಿಗೆ ಭದ್ರತೆಯನ್ನು ಒದಗಿಸಲಿದೆ ಬಳಕೆದಾರರ ಖಾಸಗಿಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು ಇದರ ಬಗ್ಗೆ ತನಿಖೆಗಳನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

English summary
This article tells about Jennifer Lawrence Celebrity Nude Leak Raises Questions on iCloud Security.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot