ನಾಳೆಯಿಂದ ಫಸ್ಟ್ ಫ್ಲಾಷ್ ಸೇಲ್‌ನಲ್ಲಿ ಜಿಯೋ ಫೋನ್ 2 : ಮೊದಲು ಖರೀದಿಸುವುದು ಹೇಗೆ...?
ಜಿಯೋ ಫೋನ್ ಮಾರುಕಟ್ಟೆಯಲ್ಲಿ ಮಾಡಿದ ಕಮಾಲ್‌ನಿಂದಾಗಿ ರಿಲಯನ್ಸ್ ಮತ್ತೊಂದು ಹೊಸ ಫೋನ್ ಅನ್ನು ಈಗಾಗಲೇ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಜಿಯೋ ಫೋನ್ 2 ಈಗಾಗಲೇ ಬಿಡುಗಡೆಗೊಂಡಿದ್ದು, ನಾಳೆ ಎಂದರೆ ಆಗಸ್ಟ್ 16 ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಆಗಸ್ಟ್ 15 ರಿಂದ ಜಿಯೋ ಗಿಗಾ ಫೈಬರ್ ಸೇವೆಯನ್ನು ಪಡೆಯಲು ರಿಜಿಸ್ಟ್ರೇಷನ್ ಆರಂಭವಾಗಿದೆ. ಇದೇ ಮಾದರಿಯಲ್ಲಿ ಆಗಸ್ಟ್ 16 ರಿಂದ ಜಿಯೋ ಸೇಲ್ ಆರಂಭವಾಗಲಿದೆ.

ಜಿಯೋ ಫೋನ್ 2 ಆಗಸ್ಟ್ 16 ರಿಂದ ಮಾರುಕಟ್ಟೆಯಲ್ಲಿ ಫ್ಲಾಷ್ ಸೇಲ್ ನಲ್ಲಿ ಪಡೆದುಕೊಳ್ಳಲು ದೊರೆಯಲಿದೆ. ಜಿಯೋ ಡಾ.ಕಾಮ್‌ನಲ್ಲಿ ಆಗಸ್ಟ್ 16 ರಂದು ಮಧ್ಯಾಹ್ನ 12ಕ್ಕೆ ಸೇಲ್ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಜಿಯೋ ಫೋನ್ ಕುರಿತ ಮಾಹಿತಿಯೂ ಮುಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪಡೆದಿರುವ ಫೋನ್ ಬೇಡಿಕೆಯೂ ಅಧಿಕವಾಗಲಿದೆ.

ರೂ.2999ಕ್ಕೆ ಮಾರಾಟ:
2016ರಲ್ಲಿ ಲಾಂಚ್ ಆದ ಜಿಯೋ ಫೋನ್ ಕೇವಲ ರೂ.1500ಕ್ಕೆ ಲಭ್ಯವಿತ್ತು. ಅಲ್ಲದೇ ಅದು ಮರು ಪಾವತಿಯ ಠೇವಣಿಯಾಗಿತ್ತು. ಆದರೆ ಈ ಬಾರಿ ಲಾಂಚ್ ಆಗಲಿರುವ ಜಿಯೋ ಫೋನ್ 2 ರೂ. 2,999ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ. ಆದರೆ ಈ ಫೋನ್ ದೊಡ್ಡ ಮಟ್ಟದಲ್ಲಿ ಆಯ್ಕೆಗಳನ್ನು ಹೊಂದಿದ್ದು, ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಗಳನ್ನು ನೀಡಲಿದೆ.

ಹೇಗಿದೆ ಜಿಯೋ ಫೋನ್:
ಹೊಸ ಜಿಯೋ ಫೋನ್ 2 ವಿನ್ಯಾಸ ಮತ್ತು ಡಿಸ್‌ಪ್ಲೇ ಜಿಯೋ ಫೋನ್‌ಗಿಂತಲೂ ವಿಭಿನ್ನವಾಗಿದೆ. ಹೊಸ ಫೋನ್‌ನಲ್ಲಿ QWERTY ಕೀಪ್ಯಾಡ್ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಕಾಣಬಹುದಾಗಿದೆ. ಇದು ಸಹ ಹಳೇ ಮಾದರಿಯಲ್ಲಿ 2.4 ಇಂಚಿನ QVGA ಡಿಸ್‌ಪ್ಲೇ ಹೊಂದಿದೆ ಎನ್ನಲಾಗಿದೆ.

ಗೂಗಲ್ ಅಸಿಸ್ಟೆಂಟ್ ಮತ್ತು ವಾಟ್ಸ್‌ಆಪ್:
ಜಿಯೋ ಫೋನ್ 2 ಹಿಂದಿಗಿಂತಲೂ ಭಿನ್ನವಾಗಿದೆ. ಕಾರಣ ಇದರಲ್ಲಿ ಗೂಗಲ್ ಅಸಿಸ್ಟೆಂಟ್ ಮತ್ತು ವಾಟ್ಸ್‌ಆಪ್ ಅನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಹೊಸ ಮಾದರಿಯ ಆಯ್ಕೆಯೂ ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಹಾಯವನ್ನು ಮಾಡಲಿದೆ.

KaiOS ಸಿಸ್ಟಮ್:
ಜಿಯೋ ಫೋನ್ 2 KaiOS ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿದೆ. ಸೋಶಿಯಮ್ ಮೀಡಿಯಾ ಬಳಕೆ ಮಾಡಿಕೊಳ್ಳುವ ಅವಕಾಶವು ಇದರಲ್ಲಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಆಯ್ಕೆಗಳು ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ.

ಜಿಯೋ ಫೋನ್ 2 ಕ್ಯಾಮೆರಾ:
ಜಿಯೋ ಫೋನ್ 2ನಲ್ಲಿ 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಕಾಣಬಹುದಾಗಿದೆ. ಉತ್ತಮವಾದ ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿದ್ದು, ಬಳಕೆದಾರರು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದ್ದಾರೆ.

ಜಿಯೋ ಫೋನ್ 2 ಮೆಮೊರಿ:
ಜಿಯೋ ಫೋನ್ 2 ಮೆಮೊರಿ ವಿಚಾರದಲ್ಲೂ ವಿಭಿನ್ನವಾಗಿಲ್ಲ. ಜಿಯೋ ಫೋನ್‌ನಂತೆಯೇ 512MB RAM ಮತ್ತು 4GB ಆಂತರಿಕ ಸ್ಟೊರೇಜ್ ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ.

ಡ್ಯುಯಲ್ ಸಿಮ್:
ಜಿಯೋ ಫೋನ್ 2 ಡ್ಯುಯಲ್ ಸಿಮ್ ಬೆಂಬಲ ನೀಡಲಿದೆ ಮತ್ತು ವೈ-ಫೈ ಫೀಚರ್ ಹೊಂದಿದೆ. ಇವೆರಡು ಫೀಚರ್‌ಗಳು ಜಿಯೋ ಫೋನ್‌ನಲ್ಲಿ ಇರಲಿಲ್ಲ. ಜಿಯೋ ಫೋನ್‌ನ ಉಳಿದ ಫೀಚರ್‌ಗಳಾದ 4G VoLTE, FM ರೇಡಿಯೋ, ವೈ-ಫೈ, GPS ಮತ್ತು NFC ಫೀಚರ್‌ಗಳನ್ನು ಹೊಂದಿದೆ. 2000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಫೀಚರ್ ಫೋನ್‌ನಲ್ಲಿ ಬೆಸ್ಟ್ ಎನಿಸಬಹುದ.

ಜಿಯೋ ಫೋನ್ 2 ವಿಶೇಷತೆ:
ಜಿಯೋ ಫೋನ್ 2 ಎರಡು ಮೊಬೈಲ್‌ಗಳು ಜಿಯೋ ಆಪ್‌ಗಳಾದ ಮೈ ಜಿಯೋ, ಜಿಯೋ ಮ್ಯೂಸಿಕ್, ಜಿಯೋ ಟಿವಿಯಂತಹ ಆಪ್‌ಗಳನ್ನು ಒಳಗೊಳ್ಳಲಿವೆ. ಆದರೆ ಜಿಯೋ ಫೋನ್ 2 ರಲ್ಲಿ ಈ ಆಪ್‌ಗಳನ್ನು ಹೊರತುಪಡಿಸಿ ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ನಂತಹ ಆಪ್‌ಗಳು ಇರಲಿವೆ.


Click it and Unblock the Notifications








