ಇನ್ನು ಜಿಯೋ ಫೋನ್ 2 ಖರೀದಿಸಿಲ್ಲವಾ..? ಹಾಗಾದ್ರೇ ನಾಳೆ ಖರೀದಿಸಿ..!
ಸೆಪ್ಟೆಂಬರ್ 6 ಕ್ಕೆ ಮತ್ತೊಮ್ಮೆ ಜಿಯೋ ಫೋನ್ 2 ರ ಫ್ಲ್ಯಾಶ್ ಸೇಲ್ ನಡೆಯಲಿದೆ. ಮೂರನೇ ಬಾರಿಗೆ ಈ ಫೋನ್ ಖರೀದಿಗೆ ಅವಕಾಶ ಸಿಗುತ್ತಿದೆ. ಕುತೂಹಲಕಾರಿ ವಿಚಾರವೇನೆಂದರೆ ಎರಡನೇ ಮತ್ತು ಮೂರನೇ ಫ್ಲ್ಯಾಶ್ ಸೇಲ್ ಗಳ ನಡುವಿನ ಅಂತರ ಕೇವಲ ಒಂದು ವಾರ ಅಷ್ಟೇ ಹಾಗೂ ಎರಡು ಮತ್ತು ಒಂದನೇ ಫ್ಲ್ಯಾಶ್ ಸೇಲ್ ಗಳ ನಡುವಿನ ಅಂತರ 15 ದಿನಗಳಾಗಿತ್ತು.
ಈ ಹಿಂದಿನಂತೆಯೇ ,4ಜಿ ವೈಶಿಷ್ಟ್ಯತೆಯುಳ್ಳು ಈ ಫೋನ್ ಗಳು Jio.com ನಲ್ಲಿ ಪಡೆಯಬಹುದು ಮತ್ತು ಈ ಸೇಲ್ ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಆರಂಭವಾಗುತ್ತದೆ. ಜಿಯೋ ಫೋನ್ 2 ದ ಭಾರತೀಯ ಬೆಲೆ 2,999ರುಪಾಯಿ. ಇದರಲ್ಲಿ QWERTY ಕೀಬೋರ್ಡ್ ಇದೆ ಮತ್ತು ಡುಯಲ್ ಸಿಮ್ ಗಳಿಗೆ ಬೆಂಬಲ ನೀಡುತ್ತದೆ.

ಅದರಲ್ಲಿ ಎರಡನೇ ಸ್ಲಾಟ್ ನಲ್ಲಿ ಇತರೆ ಟೆಲಿಕಾಂ ಆಪರೇಟರ್ ಗಳ ಸಿಮ್ ಗಳು ಬಳಸಲು ಅವಕಾಶವಿರುತ್ತದೆ. ಪ್ರೈಮರಿ ಸ್ಲಾಟ್ ನಲ್ಲಿ ಜಿಯೋ ಸಿಮ್ ಗಳನ್ನೇ ಬಳಸಬೇಕು. ಖರೀದಿದಾರರು 4ಜಿ ವೈಶಿಷ್ಟ್ಯತೆಯ ಈ ಫೋನಿಗೆ ಮೂರು ರೀತಿಯ ರೀಚಾರ್ಜ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅದರ ಬೆಲೆ Rs. 49, Rs. 99 ಮತ್ತು Rs. 153.
ಜಿಯೋ ಫೋನ್ 2 ಫ್ಲ್ಯಾಶ್ ಸೇಲ್ ನಲ್ಲಿ ಲಿಮಿಟೆಡ್ ಯುನಿಟ್ ಗಳಿದ್ದು, ಖರೀದಿದಾರು ಯಾರು ಮೊದಲು ಬುಕ್ ಮಾಡುತ್ತಾರೋ ಅವರಿಗೆ ಲಭ್ಯವಾಗುತ್ತದೆ. ಕಂಪೆನಿ ಹೇಳುವ ಪ್ರಕಾರ 5-7 ದಿನಗಳ ಒಳಗೆ ಖರೀದಿದಾರರಿಗೆ ಡೆಲಿವರಿ ಮಾಡಲಾಗುತ್ತದೆ. ಯಾರು ಕಳೆದ ಸೇಲ್ ನಲ್ಲಿ ಖರೀದಿಯನ್ನು ತಪ್ಪಿಸಿಕೊಂಡು ಬಿಟ್ಟಿದ್ದೀರೋ ಅವರು ಈ ಬಾರಿ ಪ್ರಯತ್ನಿಸಬಹುದು. ಜಿಯೋ ಫೋನ್ ಎಕ್ಸ್ ಚೇಂಜ್ ಗೂ ಕೂಡ ಲಭ್ಯವಿದ್ದು ಹಳೆಯ ಫೋನ್ ಕೊಟ್ಟು ಖರೀದಿಸುವುದಾದರೆ 501 ರುಪಾಯಿ ರಿಯಾಯಾತಿ ಲಭ್ಯವಾಗುತ್ತದೆ. 594 ರುಪಾಯಿ ರಿಚಾರ್ಜ್ ಆಯ್ಕೆಯೂ ಇದ್ದು 4ಜಿ ಡಾಟಾ 90ಜಿಬಿ ಸಿಗುತ್ತದೆ. ಅನಿಯಮಿತ ಕರೆಗಳು ಮತ್ತು ಪ್ರತಿ ದಿನ 100 ಎಸ್ ಎಂಎಸ್ ಉಚಿತವಿರುತ್ತದೆ. ಜಿಯೋ ಆಪ್ ಗಳಿಗೆ ಆಕ್ಸಿಸ್ ಕೂಡ ಸಿಗುತ್ತದೆ.
ಜಿಯೋ ಫೋನ್ 2 ವೈಶಿಷ್ಟ್ಯತೆಗಳು:
ಜಿಯೋ ಪೋನ್ 2 KaiOS ನಿಂದ ರನ್ ಆಗುತ್ತದೆ. 2.4 ಇಂಚಿನ QVGA ಡಿಸ್ಪ್ಲೇಯನ್ನು ಹೊಂದಿದೆ. 512MB RAM ಮತ್ತು 4GB ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆ ಇದ್ದು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128ಜಿಬಿ ವರೆಗೆ ಹಿಗ್ಗಿಸಿಕೊಳ್ಳಲು ಅವಕಾಶವಿದೆ. 2 ಮೆಗಾಪಿಕ್ಸಲ್ ನ ಹಿಂಭಾಗದ ಕ್ಯಾಮರಾ ಮತ್ತು VGA ಮುಂಭಾಗ ಕ್ಯಾಮರಾ ಇರಲಿದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 4G VoLTE, VoWi-Fi, ಬ್ಲೂಟೂತ್, GPS, NFC, ಮತ್ತು FM ರೇಡಿಯೋ ಸೌಲಭ್ಯವಿದೆ.
ವಾಯ್ಸ್ ಕಮಾಂಡ್ ಗೆ ನಿರ್ಧಿಷ್ಟ ಬಟನ್ ಇದ್ದು ಗೂಗಲ್ ಅಸಿಸ್ಟೆಂಟ್ ಬಳಕೆ ಮಾಡಲು ಅನುಕೂಲಕರವಾಗಿದೆ. ಫೋನಿನ ಬ್ಯಾಟರಿ ಕೆಪಾಸಿಟಿಯು 2000mAh ಆಗಿದೆ. ಜಿಯೋ ಫೋನ್ 1 ಗಿಂತ ದೊಡ್ಡ ಡಿಸ್ಪ್ಲೇ ಹೊಂದಿದ್ದು ಬ್ಲಾಕ್ ಬೆರ್ರಿ ರೀತಿಯ ಕೀ ವೈಶಿಷ್ಟ್ಯತೆಗಳನ್ನು ಜಿಯೋ ಫೋನ್ 2 ಹೊಂದಿದೆ.


Click it and Unblock the Notifications








