ಜಿಯೋ ಫೋನ್ 2 ಸೇಲ್‌ನಲ್ಲಿ ಸೋಲ್ಡ್ ಔಟ್: ಆದ್ರೂ ಖರೀದಿಸಬೇಕಾ..?
ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೇಲ್‌ನಲ್ಲಿ ಕಾಣಿಸಿಕೊಂಡ ರಿಲಯನ್ಸ್ ಬಿಡುಗಡೆ ಮಾಡಿರುವ ಜಿಯೋ ಫೋನ್ 2 ಸೋಲ್ಡ್ ಔಟ್ ಆಗಿದೆ. ಈ ಹಿನ್ನಲೆಯಲ್ಲಿ ಮತ್ತೊಂದು ಸೇಲ್ ಆಯೋಜನೆ ಮಾಡಿದ್ದು, ಯಾರಿಗೆ ಮೊದಲ ಸೇಲ್‌ನಲ್ಲಿ ಜಿಯೋ ಫೋನ್ 2 ದೊರೆಯಲಿಲ್ಲವೋ ಅವರು ಎರಡನೇ ಸೇಲ್‌ನಲ್ಲಿ ಖರೀದಿಸಬಹುದಾಗಿ. ಆಗಸ್ಟ್ 16 ರಂದು ನಡೆದ ಮೊದಲ ಸೇಲ್‌ನಲ್ಲಿ ಕೆಲವೇ ಕ್ಷಣಗಳಲ್ಲಿ ಜಿಯೋ ಫೋನ್ 2 ಸೇಲ್ ಆಗಿತ್ತು.

ಜುಲೈನಲ್ಲಿಯೇ ಜಿಯೋ ಫೋನ್ 2 ಲಾಂಚ್ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿದ್ದ ಅಂಬಾನಿ, ಸ್ವಾತಂತ್ರ್ಯ ದಿನಾಚರಣೆಯ ಮರು ದಿನವೇ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಈ ಹಿಂದೆ ಜಿಯೋ ಫೋನ್ ಲಾಂಚ್ ಆದ ಸಂದರ್ಭದಲ್ಲಿಯೂ ಇದೇ ಮಾದರಿಯಲ್ಲಿ ಭಾರೀ ಪ್ರಮಾಣದ ಬೇಡಿಕೆಯೂ ನಿರ್ಮಾಣವಾಗಿತ್ತು. ಮತ್ತೆ ಅದೇ ಮಾದರಿಯಲ್ಲಿ ಜಿಯೋ ಫೋನ್ 2 ಸಹ ಬೇಡಿಕೆಯನ್ನು ಸೃಷ್ಟಿಸಿಕೊಳ್ಳೂತ್ತಿದೆ.

ಜಿಯೋ ವೆಬ್‌ಸೈಟಿನಲ್ಲಿ:
ಮೊದಲನೇ ಫ್ಲಾಷ್ ಸೇಲ್‌ನಂತೆಯೇ ಎರಡನೇ ಬಾರಿ ನಡೆಯಲಿರುವ ಫ್ಲಾಷ್ ಸೇಲ್ ಸಹ ಜಿಯೋ ಅದಿಕೃತ ಜಾಲತಾಣ ಜಿಯೋ .ಕಾಮ್ ನಲ್ಲಯೇ ನಡೆಯಲಿದೆ ಎನ್ನಲಾಗಿದೆ. ಆಗಸ್ಟ್ 30ರಂದು ಮಧ್ಯಾಹ್ನ 12 ಗಂಟೆಗೆ ಸೇಲ್ ಶುರುವಾಗಲಿದೆ. ಫ್ಲಾಷ್ ಸೇಲ್ ಆಗಿರುವುದರಿಂದ ಮೊದಲು ಬುಕ್ ಮಾಡಿದವರಿಗೆ ಆಧ್ಯತೆಯ ಮೇಲೆ ಸ್ಮಾರ್ಟ್‌ಫೋನ್ ದೊರೆಯಲಿದೆ.

ಸ್ಮಾರ್ಟ್ ಜಿಯೋ ಫೋನ್ 2:
ಈ ಹಿಂದೆ ಬಿಡುಗಡೆಯಾಗಿದ್ದ ಜಿಯೋ ಪೋನ್‌ಗಿಂತಲೂ ಹೆಚ್ಚಿನ ಸ್ಮಾರ್ಟ್‌ಆಗಿ ಕಾರ್ಯನಿರ್ವಹಿಸಲು ಜಿಯೋ ಫೋನ್ 2 ಶಕ್ತವಾಗಿದೆ. ಈ ಫೋನ್ ಪ್ರಮುಖ ಆಕರ್ಷಣೆ ಎಂದರೆ ಸೋಶಿಯಲ್ ಮೀಡಿಯಾ. ಅದರಲ್ಲಿಯೂ ವಾಟ್ಸ್‌ಆಪ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳು ಆಪ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದ್ದು, ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಗಳನ್ನು ನೀಡಲಿದೆ.

ಜಿಯೋ ಸೇವೆ:
ಇದಲ್ಲದೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರವೇ ನೀಡುವ ಜಿಯೋ ಆಪ್ ಸೇವೆಗಳನ್ನು ಜಿಯೋ ಫೋನ್ 2ನಲ್ಲಿಯೂ ಕಾಣಬಹುದಾಗಿದೆ. ಮೈ ಜಿಯೋ, ಜಿಯೋ ಸಿನಿಮಾ. ಜಿಯೋ ಟಿವಿ ಆಪ್‌ಗಳ ಬಳಕೆಯಿಂದಾಗಿ ಹೆಚ್ಚಿನ ಪ್ರಮಾಣದ ಮನರಂಜನೆಯನ್ನು ಪಡೆಯಬಹುದಾಗಿದೆ.

QWERTY ಕೀಪ್ಯಾಡ್:
ಹೊಸ ಜಿಯೋ ಫೋನ್ 2 ವಿನ್ಯಾಸ ಮತ್ತು ಡಿಸ್‌ಪ್ಲೇ ಜಿಯೋ ಫೋನ್‌ಗಿಂತಲೂ ವಿಭಿನ್ನವಾಗಿದೆ. ಹೊಸ ಫೋನ್‌ನಲ್ಲಿ QWERTY ಕೀಪ್ಯಾಡ್ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಕಾಣಬಹುದಾಗಿದೆ. ಇದು ಸಹ ಹಳೇ ಮಾದರಿಯಲ್ಲಿ 2.4 ಇಂಚಿನ QVGA ಡಿಸ್‌ಪ್ಲೇ ಹೊಂದಿದೆ ಎನ್ನಲಾಗಿದೆ.

ಕ್ಯಾಮೆರಾ ಸಹ ಬೆಸ್ಟ್:
ಜಿಯೋ ಫೋನ್ 2ನಲ್ಲಿ 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಕಾಣಬಹುದಾಗಿದೆ. ಉತ್ತಮವಾದ ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿದ್ದು, ಬಳಕೆದಾರರು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದ್ದಾರೆ.

ಬೆಲೆ:
2016ರಲ್ಲಿ ಲಾಂಚ್ ಆದ ಜಿಯೋ ಫೋನ್ ಕೇವಲ ರೂ.1500ಕ್ಕೆ ಲಭ್ಯವಿತ್ತು. ಬಾರಿ ಲಾಂಚ್ ಆಗಲಿರುವ ಜಿಯೋ ಫೋನ್ 2 ರೂ.2,999ಕ್ಕೆ ಮಾರಾಟವಾಗಲಿದೆ. 4G VoLTE, FM ರೇಡಿಯೋ, ವೈ-ಫೈ, GPS ಮತ್ತು NFC ಫೀಚರ್‌ಗಳನ್ನು ಹೊಂದಿದೆ. 2000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಫೀಚರ್ ಫೋನ್‌ನಲ್ಲಿ ಬೆಸ್ಟ್ ಎನಿಸಬಹುದು. ಡ್ಯುಯಲ್ ಸಿಮ್ ಹಾಕಿಕೊಳ್ಳಬಹುದು.


Click it and Unblock the Notifications








