ಜಿಯೋಫೋನ್ ದೀಪಾವಳಿ ಬಂಪರ್ ಆಫರ್ 1 ತಿಂಗಳ ಕಾಲ ವಿಸ್ತರಣೆ!
ದೀಪಾವಳಿ ಆಫರ್ ನೀಡಿದ ಸಂದರ್ಭ ದೇಶದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಜಿಯೋಫೋನ್ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದ್ದು, ಹಲವು ಮಂದಿ 'ಜಿಯೋಪೋನ್' ಕೊಳ್ಳಲು ಮುಗಿಬೀಳುತ್ತಿದ್ದರು. ಈ ಹಿನ್ನಲೆಯಲ್ಲಿ ಜಿಯೋ ಫೋನ್ ದೀಪಾವಳಿ ಆಫರ್ ಅನ್ನು ಹೆಚ್ಚುವರಿ ಒಂದು ತಿಂಗಳು (ನವೆಂಬರ್) ಮುಂದುವರಿಸಲು ಜಿಯೋ ನಿರ್ಧರಿಸಿದೆ. ಕಳೆದ 3 ವಾರಗಳಲ್ಲಿ ಜಿಯೋಫೋನ್ ಅಭೂತಪೂರ್ವ ದಾಖಲೆಯ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಜಿಯೋ ವಕ್ತಾರರು ತಿಳಿಸಿದ್ದಾರೆ.

ಈ ಬಾರಿಯ ದೀಪಾವಳಿ ಸಮಯದಲ್ಲಿ ಜಿಯೋ ಕುಟುಂಬವನ್ನು ಸೇರಲು ಸಾಧ್ಯವಾಗದ ಫೀಚರ್ ಫೋನ್ ಬಳಕೆದಾರರನ್ನು ಆಕರ್ಷಿಸಲು ಜಿಯೋ ಮುಂದಾಗಿತ್ತು. ಇದಕ್ಕಾಗಿ ಕಡಿಮೆ ಬೆಲೆಯಲ್ಲಿ ಹೆಚ್ಚು ಲಾಭವನ್ನು ಒದಗಿಸಿ ಜಿಯೋಫೋನ್ ಮಾರಾಟಕ್ಕೆ ತಂದಿತ್ತು. ಈ ಸಂದರ್ಭದಲ್ಲಿ ಬಳಕೆದಾರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ದೀಪಾವಳಿ ಹಬ್ಬದ ಕೊಡುಗೆಯ ಲಾಭಗಳನ್ನು ಪಡೆಯಲು ಇನ್ನೂ ಒಂದು ತಿಂಗಳು ಈ ಆಫರ್ ನೀಡಿದೆ. ಈ ವೇಳೆಯಲ್ಲಿ ಜಿಯೋ ಫೋನ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರಲಿದೆ.

ಈ ಆಫರ್ ಅನ್ನು ಒಂದು ತಿಂಗಳು ವಿಸ್ತರಿಸಿರುವುದರಿಂದ 2G ಫೀಚರ್ ಫೋನ್ ಬಳಕೆದಾರರು ಜಿಯೋಫೋನ್ ಪ್ಲಾಟ್‌ಫಾರ್ಮ್‌ಗೆ ಆಗಮಿಸಬಹುದಾಗಿದೆ. ಈ ಮೂಲಕ ಸ್ಮಾರ್ಟ್ ಫೋನ್ ಬಳಕೆಯ ಅನುಭವನ್ನು ಸಿಂಗಲ್-ಲಾರ್ಗೆಸ್ಟ್ 4 ಜಿ ಡಿವೈಸ್ ನಲ್ಲಿ ಪಡೆಯಬಹುದಾಗಿದೆ. ಜಿಯೋಫೋನ್ ದೀಪಾವಳಿ ಕೊಡುಗೆಯ ಭಾಗವಾಗಿ ಜಿಯೋ ಫೋನ್ ರೂ.699ಕ್ಕೆ ದೊರೆಯುತ್ತಿದೆ. (ಮೂಲತಃ 1,500 ರೂ.ಗಳಿಗೆ ಮಾರಾಟವಾಗುತ್ತಿತ್ತು) ಮತ್ತು ಇನ್ನೊಂದು ತಿಂಗಳು (ನವೆಂಬರ್) ಈ ಆಫರ್ ಲಭ್ಯವಿರುತ್ತದೆ ಎಂದು ಜಿಯೋ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ದೀಪಾವಳಿ ಕೊಡುಗೆಯ ಲಾಭವಾಗಿ ರೂ.700 ಮೌಲ್ಯದ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಬಳಕೆದಾರರಿಗೆ ಜಿಯೋ ನೀಡಲಿದೆ. ಜಿಯೋ ಪೋನ್ ಕೊಳ್ಳುವ ಗ್ರಾಹಕರು ಮೊದಲು ಮಾಡಿಸುವ 7 ರೀಚಾರ್ಜ್‌ಗಳಲ್ಲಿ ಜಿಯೋ ಹೆಚ್ಚುವರಿಯಾಗಿ ಪ್ರತಿ ರೀಚಾರ್ಜ್‌ನಲ್ಲಿ (ರೂ. 99 * 7) ರೂ.99 ಮೌಲ್ಯದ ಡೇಟಾವನ್ನು ಉಚಿತವಾಗಿ ಸೇರಿಸುತ್ತದೆ. ಇದರಿಂದಾಗಿ ರೂ.700 ಮೌಲ್ಯದ ಹೆಚ್ಚುವರಿ ಡೇಟಾವು ಜಿಯೋಫೋನ್ ಬಳಕೆದಾರರಿಗೆ ದೊರೆಯಲಿದೆ ಮತ್ತು ಕಡಿಮೆ ಬೆಲೆಗೂ 4G ಫೀಚರ್ ಫೋನ್ ಸಿಗುತ್ತಿದೆ ಎಂದು ಜಿಯೋ ಹೇಳಿದೆ.

ದೀಪಾವಳಿ ಕೊಡುಗೆಯ ಲಾಭವಾಗಿ ಜಿಯೋ ಫೋನ್ ಖರೀದಿಸುವುದರಿಂದಾಗಿ ರೂ.700 ಮೌಲ್ಯದ ಹೆಚ್ಚುವರಿ ಡೇಟಾವು ಜಿಯೋಫೋನ್ ಬಳಕೆದಾರರಿಗೆ ದೊರೆಯಲಿದೆ. ಈ ಲಾಭದಿಂದಾಗಿ ಫೀಚರ್ ಪೋನ್ ಬಳಕೆದಾದರರು ಇನ್ನು ಮುಂದೆ ಮನರಂಜನೆ, ಪಾವತಿ, ಇ-ಕಾಮರ್ಸ್, ಶಿಕ್ಷಣ, ಕಲಿಕೆ, ರೈಲು ಮತ್ತು ಬಸ್ ಬುಕಿಂಗ್ ಮತ್ತು ಇನ್ನೂ ಹೆಚ್ಚಿನ ಲಾಭವನ್ನು ಜಿಯೋ ಫೋನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಲಕ್ಷಾಂತರ ಫೀಚರ್ ಫೋನ್ ಬಳಕೆದಾರರನ್ನು ಜಿಯೋಫೋನ್ ಕೊಳ್ಳುವ ಸುವರ್ಣ ಅವಕಾಶ ಇದಾದಿದೆ ಎಂದು ಜಿಯೋ ಹೇಳಿದೆ.


Click it and Unblock the Notifications








