Home
ಮೊಬೈಲ್

ಜಿಯೋ ಫೋನ್ 2 ಬಗ್ಗೆ ಎಷ್ಟು ಗೊತ್ತು..? ಸ್ಮಾರ್ಟ್ ಫೋನ್ ಕೂಡ ನಾಚುವಂತಿದೆ..!

By Srinidhi
41st Reliance AGM: WhatsApp for JioPhone, JioPhone 2, and Jio Giga Fiber

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಜಿಯೋ ಫೋನ್ ಯಶಸ್ಸನ್ನು ಮುಂದುವರೆಸಿಕೊಂಡು ಹೊಗುವ ಕಾರಣಕ್ಕಾಗಿ ಮಾರುಕಟ್ಟೆಗೆ ಜಿಯೋ ಫೋನ್ 2 ಅನ್ನು ಲಾಂಚ್ ಮಾಡಲು ಮೂಂದಾಗಿದೆ. ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಈ ಫೋನ್ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಸಾಕಷ್ಟು ಫೋನ್ ಗಳಿಗೆ ಇದ್ದು ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಶೀಘ್ರವೇ ಲಾಂಚ್ ಆಗಲಿರುವ ಈ ಫೋನ್ ಕುರಿತ ಮಾಹಿತಿಯೂ ಮುಂದಿದೆ.

ಜಿಯೋ ಫೋನ್ 2 ಬಗ್ಗೆ ಎಷ್ಟು ಗೊತ್ತು..? ಸ್ಮಾರ್ಟ್ ಫೋನ್ ಕೂಡ ನಾಚುವಂತಿದೆ..!
ಈ ಹಿಂದೆ ಜಿಯೋ ಫೋನ್ ಅನ್ನು ಜಿರೋ ಬೆಲೆಗೆ ಮಾರಾಟ ಮಾಡಿತ್ತು. ಇದೇ ಮಾದರಿಯಲ್ಲಿ ಜಿಯೋ ಫೋನ್ 2 ಅನ್ನು ರೂ.2999ಕ್ಕೆ ಮಾರಾಟ ಮಾಡಲು ಮುಂದಾಗಿದೆ. ಜಿಯೋ ಫೋನ್ ಗಿಂತಲೂ ಭಿನ್ನವಾಗಿರುವ ಈ ಫೋನ್ ಕ್ವರ್ಟಿ ಕಿಪ್ಯಾಡ್ ಅನ್ನು ಜಿಯೋ ಫೋನ್ 2 ನಲ್ಲಿ ಕಾಣಬಹುದಾಗಿದೆ. ಇದು ಈಫೋನಿಗೆ ಹೊಸ ಲುಕ್ ಅನ್ನು ನೀಡಿದೆ. ಈ ಹಿನ್ನಲೆಯಲ್ಲಿ ಜಿಯೋ ಫೋನ್ 2 ಟಾಪ್ ಫೀಚರ್ ಬಗ್ಗೆ ಮಾಹಿತಿಯೂ ಮುಂದಿದೆ.

ಸೂಪರ್ ಡಿಸ್ ಪ್ಲೇ

ಸೂಪರ್ ಡಿಸ್ ಪ್ಲೇ

ಜಿಯೋ ಪೋನ್ 2 ನಲ್ಲಿ 2.4 ಇಂಚಿನ QVGA ಡಿಸ್ ಪ್ಲೇಯನ್ನು ಅಳವಡಿಸಲಾಗಿದ್ದು, ಬ್ಲಾಕ್ ಬರೀ ಮಾದರಿಯಲ್ಲಿ ಡಿಸ್ ಪ್ಲೇ ಕಳಭಾಗದಲ್ಲಿ ಕೀ ಪ್ಯಾಡ್ ಅನ್ನು ನೀಡಲಾಗಿದೆ. ಇದು ಈ ಫೋನಿನ ಅಂದವನ್ನು ಹೆಚ್ಚು ಮಾಡಿರುವುದಲ್ಲದೇ, ಗುಣಮಟ್ಟದ ಫೋನ್ ವೊಂದನ್ನು ಹಿಡಿದ ಅನುಭವನ್ನು ನೀಡುವ ಸಾಧ್ಯತೆ ಇದೆ.

ಫುಲ್ ಸೋಶಿಯಲ್ ಮೀಡಿಯಾ

ಫುಲ್ ಸೋಶಿಯಲ್ ಮೀಡಿಯಾ


ಜಿಯೋ ಪೋನ್ 2 ನಲ್ಲಿ ಈ ಹಿಂದಿನ ಫೋನಿನಲ್ಲಿ 512MB RAM ಅನ್ನು ನೀಡಲಾಗಿದ್ದ ಮಾದರಿಯಲ್ಲಿಯೇ ಇದರಲ್ಲಿಯೂ ಅದೇ ಮಾದರಿಯ RAM ಇದೆ. ಇದಲ್ಲದೇ KaiOS ಅನ್ನು ಇದರಲ್ಲಿ ನೀಡಲಾಗಿದೆ. ಇದು ಗುಣಮಟ್ಟ ಸಾಫ್ಟ್ ವೇರ್ ಆಗಿದ್ದು, ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

128  GB ವರೆಗೂ ಸ್ಟೋರೆಜ್:

128 GB ವರೆಗೂ ಸ್ಟೋರೆಜ್:

ಜಿಯೋ ಪೋನ್ 2 ನಲ್ಲಿ 4 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದರೊಂದಿಗೆ 128 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಹೆಚ್ಚಿನ ಡೇಟಾವನ್ನು ಇದರಲ್ಲಿ ಇರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಹೆಚ್ಚಿನ ಬ್ಯಾಕಪ್ ನೀಡುವ ಬ್ಯಾಟರಿ:

ಹೆಚ್ಚಿನ ಬ್ಯಾಕಪ್ ನೀಡುವ ಬ್ಯಾಟರಿ:

ಜಿಯೋ ಪೋನ್ 2 ನಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಾಗಿದೆ. ಇದರಲ್ಲಿ ಹೆಚ್ಚಿನ ಬಾಳಿಕೆಗಾಗಿ 2000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಹೆಚ್ಚಿನ ಪ್ರಮಾಣದ ಫೋನ್ ಬಳಕೆಗೆ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಕೆ ಮಾಡಬಹುದಾಗಿದೆ.

ಎರಡು ಕ್ಯಾಮೆರಾ:

ಎರಡು ಕ್ಯಾಮೆರಾ:

ಜಿಯೋ ಫೋನ್ 2 ನಲ್ಲಿ ಹಿಂಭಾಗ ಮತ್ತು ಮುಂಭಾಗದಲ್ಲಿ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗದಲ್ಲಿ 2 MP ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಫೀಚರ್ ಫೋನಿನಲ್ಲಿ ಇದನ್ನು ಬೆಸ್ಟ್ ಕ್ಯಾಮೆರಾ ಎನ್ನಬಹುದಾಗಿದೆ.

Best Mobiles in India

English summary
JioPhone 2 launched: Specs, price, top features. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+