ಕೇವಲ 2,799 ರೂ.! JioPhone Prima 2 4G ಬಿಡುಗಡೆ.. ಹೇಗಿದೆ?
JioPhone Prima 2 4G Launched: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಮುಖ್ಯವಾಗಿ, ದೀಪಾವಳಿ ಹಬ್ಬಕ್ಕೂ ಮುಂಚಿತವಾಗಿಯೇ, ಜಿಯೋ ತನ್ನ ಅಭಿಮಾನಿಗಳಿಗಾಗಿ ಜಿಯೋ ಫೋನ್ ಪ್ರೈಮಾ 2 4G (JioPhone Prima 2 4G) ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಕಳೆದ ವರ್ಷ ಪರಿಚಯಿಸಿದ ಜಿಪ್‌ಫೋನ್ ಪ್ರೈಮಾದ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಕಂಪನಿಯು ಹಲವಾರು ಅದ್ಭುತ ವೈಶಿಷ್ಟ್ಯಗಳೊಂದಿಗೆ ಈ ಇತ್ತೀಚಿನ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಹೌದು, ಜಿಯೋ ಫೋನ್ ಪ್ರೈಮಾ 2 4G ಫೋನ್ ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು 2.4 ಇಂಚಿನ QVGA ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಎಲ್ಇಡಿ ಟಾರ್ಚ್ ಮತ್ತು ಹಿಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಮುಂಭಾಗದಲ್ಲಿ 0.3MP ಸೆಲ್ಫಿ ಕ್ಯಾಮೆರಾ ಇದೆ. ಈ ಫೋನ್ 512MB RAM ಅನ್ನು ಹೊಂದಿದೆ. ಇದು ARM Cortex A53 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ.

ಜಿಯೋ ಫೋನ್ ಪ್ರೈಮಾ 2 4G ಫೋನಿನ ಬೆಲೆ ಮತ್ತು ಲಭ್ಯತೆ
ಕಂಪನಿಯು JioPhone Prima 2 4G ಅನ್ನು ಲಕ್ಸ್ ಬ್ಲೂ ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ ಬೆಲೆ ನೋಡುವುದಾದರೆ, ನೀವು ಇದನ್ನು ಕೇವಲ 2,799 ರೂ.ಗಳಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಇ ಕಾಮರ್ಸ್ ವೆಬ್‌ಸೈಟ್ ಅಮೇಜಾನ್ (Amazon) ನಲ್ಲಿ ಲಭ್ಯವಿದೆ. ಇದಲ್ಲದೆ, ಕಂಪನಿಯು ಶೀಘ್ರದಲ್ಲೇ ಈ ಫೋನನ್ನು ಜಿಯೋಮಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಇತರ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟ ಮಾಡಲಿದೆ.
ಜಿಯೋ ಫೋನ್ ಪ್ರೈಮಾ 2 4G ಫೋನಿನ ವೈಶಿಷ್ಟ್ಯಗಳು
ಜಿಯೋ ಕಂಪನಿಯ ಹೊಸ ಫೋನ್ Kai-OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್ YouTube, Facebook ಮತ್ತು Google Voice Assistant ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಅಂದರೆ, ನೀವು ಈ ಫೋನಿನಲ್ಲೊ ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ರನ್ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ, ಈ ಸ್ಮಾರ್ಟ್‌ಫೋನ್ JoiTV, JioCinema, JioSaavan ಜೊತೆಗೆ ಅನೇಕ ಇತರೆ ಮನರಂಜನಾ ಅಪ್ಲಿಕೇಶನ್‌ಗಳನ್ನು ಸಹ ನೀಡುತ್ತದೆ.
ಜಿಯೋ ಫೋನ್ ಪ್ರೈಮಾ 2 4G ಫೋನ್ ಸಹ JioChat ಗಾಗಿ ಹಿಂದಿನ ಮತ್ತು ಸೆಲ್ಫಿ ಕ್ಯಾಮೆರಾ ಹೊಂದಿದೆ. ಮತ್ತು ಯಾವುದೇ ಅಪ್ಲಿಕೇಶನ್ ಇಲ್ಲದೆ ಸ್ಥಳೀಯ ವಿಡಿಯೋ ಕರೆಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, JioPay ಮತ್ತು ಸೌಂಡ್ ಅಲರ್ಟ್, UPI ಸ್ಕ್ಯಾನ್ ಮತ್ತು QR ಕೋಡ್ ಪಾವತಿ ಆಯ್ಕೆಯೂ ಈ ಫೋನ್‌ನಲ್ಲಿ ಲಭ್ಯವಿದೆ. ಮನರಂಜನೆಗಾಗಿ ಈ ಫೋನ್ FM ರೇಡಿಯೊವನ್ನು ಸಹ ಹೊಂದಿದೆ. ಇದು 23 ಭಾಷೆಗಳ ಬೆಂಬಲದೊಂದಿಗೆ ಲಭ್ಯವಿದೆ.
ಜಿಯೋ ಫೋನ್ ಪ್ರೈಮಾ 2 4G ಫೋನಿನ ಡಿಸ್ಪ್ಲೇ ಮತ್ತು ಬ್ಯಾಟರಿ
ಜಿಯೋ ಫೋನ್ ಪ್ರೈಮಾ 2 4G ಫೋನ್ 320x240 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 2.4 ಇಂಚಿನ QVGA ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ. ರೌಂಡ್ ಎಡ್ಜ್ ವಿನ್ಯಾಸ ಹೊಂದಿರುವ ಈ ಫೋನ್ ARM Cortex A53 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಜಿಯೋದ ಈ ಹೊಸ ಫೋನ್ 512MB RAM ಅನ್ನು ಹೊಂದಿದೆ. ಮೈಕ್ರೊ SD ಕಾರ್ಡ್ ಸಹಾಯದಿಂದ ನೀವು ಇದರ ಮೆಮೊರಿಯನ್ನು 128GB ವರೆಗೆ ವಿಸ್ತರಿಸಬಹುದು.
ಈ ಫೋನ್ ಅದ್ಭುತ ಬ್ಯಾಟರಿ ಬ್ಯಾಕಪ್ ಹೊಂದಿದೆ. ಕಂಪನಿಯು 2000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಫೋನ್ ಎಲ್ಇಡಿ ಟಾರ್ಚ್ ಮತ್ತು ಹಿಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಸೆಲ್ಫಿಗಾಗಿ, ಈ ಫೋನಿನ ಮುಂಭಾಗದಲ್ಲಿ 0.3MP ಕ್ಯಾಮೆರಾವನ್ನು ನೀಡಲಾಗಿದೆ.


Click it and Unblock the Notifications








