Home
ಮೊಬೈಲ್

ಜಿಯೋ ಫೋನ್‌ನಲ್ಲಿ ಶೀಘ್ರವೇ ಬರಲಿದೆ ವಾಟ್ಸ್‌ಆಪ್, ಯುಟ್ಯೂಬ್...!

By Gizbot Bureau

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿರುವ ರಿಲಯನ್ಸ್ ಜಿಯೋ ಫೋನ್, ಈಗ ಮತ್ತೊಂದು ಹೊಸ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳಲಿದೆ. ಸದ್ಯ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಈ ಫೋನ್ ಗಳು ಹೊಸ ಆಯ್ಕೆಗಳೊಂದಿಗೆ ದೊರೆಯುತ್ತಿದೆ. ಈ ಹಿಂದೆಯೇ ಹೇಳಿದಂತೆ ಈ ಎರಡು ಫೋನ್ ಗಳು ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ವಾಟ್ಸ್ಆಪ್ ಮತ್ತು ಯೂಟ್ಯುಬ್ ಆಪ್ ಗಳನ್ನು ಪಡೆದುಕೊಳ್ಳಲಿದೆ.

ಮೂಲಗಳ ಪ್ರಕಾರ ಜಿಯೋ ಫೋನ್ 2 ಬಳಕೆದಾರರಿಗೆ ಯೂಟ್ಯುಬ್ ಮತ್ತು ವಾಟ್ಸ್ಆಪ್ ಆಪ್ ಗಳು ಬಿಟಾ ಟೆಸ್ಟಿಂಗ್ಸ್ ಶುರುವಾಗಲಿದ್ದು, ಕೆಲವೇ ದಿನಗಳಲ್ಲಿ ಸಾಮಾನ್ಯ ಬಳಕೆದಾರರಿಗೂ ಈ ಹೊಸ ಆಯ್ಕೆಗಳು ಬಳಕೆಗೆ ಮುಕ್ತವಾಗಲಿದೆ. ಈಗಾಗಲೇ ಈ ಎರಡು ಫೋನ್ ಬಳಕೆದಾರರಿಗೆ ಫೇಸ್ ಬುಕ್ ಆಪ್ ಪ್ರೀಲೋಡೆಡ್ ಆಗಿ ಬರುತ್ತಿದೆ. ಇದರೊಂದಿಗೆ ಈ ಎರಡು ಆಪ್ ಗಳು ಸೇರಿಕೊಂಡರೆ ಬಳಕೆದಾರರಿಗೆ ಹಬ್ಬ ಎನ್ನಬಹುದು.

ಜಿಯೋ ಫೋನ್‌ನಲ್ಲಿ ಶೀಘ್ರವೇ ಬರಲಿದೆ ವಾಟ್ಸ್‌ಆಪ್, ಯುಟ್ಯೂಬ್...!

ಬಿಟಾ ಟೆಸ್ಟಿಂಗ್ಸ್ ಆಪ್ ಗಳು ಜಿಯೋ ಸ್ಟೋರ್ ನಲ್ಲಿ ದೊರೆಯುತ್ತಿಲ್ಲ ಎನ್ನಲಾಗಿದೆ. ಕೆಲವೇ ಕೆಲವು ಬಳಕೆದಾರರಿಗೆ ಮಾತ್ರವೇ ಈ ಆಯ್ಕೆಯೂ ಲಭ್ಯವಿದೆ. ಇನ್ನು 10 ರಿಂದ 15 ದಿನಗಳ ಒಳಗೆ ಈ ಹೊಸ ಆಪ್ ಗಳನ್ನು ಜಿಯೋ ಸ್ಟೋರ್ ನಲ್ಲಿ ಬಳಕೆ ಮುಕ್ತವಾಗಿಸುವುದು ಎನ್ನಲಾಗಿದೆ. ಸ್ಟೋರ್ ನಲ್ಲಿ ದೊರೆತ ನಂತರ ಇದನ್ನು ಬಳಕೆ ಮಾಡಿಕೊಳ್ಳಲು ಅವಕಾಶ ದೊರೆಯಲಿದೆ.

ವಾಟ್ಸ್ಆಪ್ ಮತ್ತು ಯೂಟ್ಯುಬ್ ಆಪ್ ಗಳ್ನು ಡೌನ್ ಲೋಡ್ ಮಾಡುವ ಅವಕಾಶವು ಜಿಯೋ ಪೋನ್ ಮತ್ತು ಜಿಯೋ ಪೋನ್ 2 ಎರಡರಲ್ಲಿಯೂ ದೊರೆಯಲಿದೆ. ಈ ಎರಡು ಫೋನ್ ಗಳಿಗೆ ಮುಂದಿನ ದಿನದಲ್ಲಿ ಎಲ್ಲಾ ಮಾದರಿಯ ಆಪ್ ಗಳು ಬಳಕೆಗೆ ದೊರೆತರು ಆಶ್ಚರ್ಯ ಪಡಬೇಕಾಗಿಲ್ಲ.

ಈಗಾಗಲೇ ಮಾರುಕಟ್ಟೆಯಲ್ಲಿ ಒಂದು ಸೇಲ್ ನಲ್ಲಿ ಕಾಣಿಸಿಕೊಂಡಿರುವ ಜಿಯೋ ಪೋನ್ 2, ಇದೇ ಸೆಪ್ಟೆಂಬರ್ 6 ರಂದು ಮತ್ತೊಮ್ಮೆ ಫ್ಲಾಷ್ ಸೇಲ್ ನಲ್ಲಿ ಕಾಣಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ಬಳಕೆದಾರರು ಮತ್ತೊಮ್ಮೆ ಫೋನ್ ಖರೀದಿಸುವ ಅವಕಾಶವನ್ನು ಪಡೆಯಲಿದ್ದಾರೆ. ಅಲ್ಲದೇ ಈ ಫೋನ್ ರೂ. 2999ಕ್ಕೆ ಮಾರಾಟವಾಗುತ್ತಿದೆ. ಜಿಯೋ ವೈಬ್ ಸೈಟ್ ಇಲ್ಲವೇ ಮೈ ಜಿಯೋ ಆಪ್ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
JioPhone to soon get WhatsApp and YouTube, beta tests begin. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+