ವಿಶ್ವದಲ್ಲಿ ಜಿಯೋ ವಿಶೇಷ ದಾಖಲೆ!..ಭಾರತದ ಮೊದಲ ಕಂಪೆನಿಯೊಂದಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ!!

  ಜಾಗತಿಕ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಜಿಯೋ ಪರಿಚಯಿಸಿದ ಉಚಿತ 4G ಫೋನ್ ಮಾರಾಟ ಅಬ್ಬರದಿಂದ ಸಾಗಿದೆ. 2018ರ ಮೊದಲ ತ್ರೈಮಾಸಿಕದಲ್ಲಿ ಜಿಯೋ ಫೀಚರ್ ಫೋನ್ ಖರೀದಿಯ ಪ್ರಮಾಣ ಹೆಚ್ಚಿದ್ದು, ವಿಶ್ವ ಫೀಚರ್ ಮೊಬೈಲ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಪ್ರಖ್ಯಾತ ಸಮೀಕ್ಷಾ ಸಂಸ್ಥೆ ಕೌಂಟರ್‌ಪಾಯಿಂಟ್ ವರದಿ ಮಾಡಿದೆ.

  ಈ ಮೂಲಕ ಮೊಬೈಲ್ ಮಾರಾಟದಲ್ಲಿ ಜಗತ್ತಿನಲ್ಲಿಯೇ ಮೊದಲ ಸ್ಥಾನ ಪಡೆದ ಭಾರತದ ಮೊದಲ ಕಂಪೆನಿ ಎಂಬ ಕೀರ್ತಿಗೆ ಜಿಯೋ ಪಾತ್ರವಾಗಿದೆ. ಜಿಯೋ ಫೋನ್ ನಂತರ ಹೆಚ್ಚು ಮಾರಾಟವಾಗುತ್ತಿರುವ ಫೀಚರ್ ಫೋನ್‌ಗಳು ಎಂಬ ಹೆಗ್ಗಳಿಕೆಗೆ ನೋಕಿಯಾ ಪಾತ್ರವಾಗಿದೆ. ಜಾಗತಿಕ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಶೇಕಡಾ 15 ರಷ್ಟು ಪಾಲು ಹೊಂದಿದ್ದರೆ, ನೋಕಿಯಾ ಎಚ್ಎಂಡಿ ಶೇಕಡ 14 ರಷ್ಟು ಫೀಚರ್ ಫೋನ್ ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಮತ್ತೆ ಹಳಿಗೆ ಮರಳಿದೆ.!

  ಜಿಯೋ ವಿಶೇಷ ದಾಖಲೆ!..ಭಾರತದ ಮೊದಲ ಕಂಪೆನಿಯೊಂದಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ!!

  ಒಂದು ಕಾಲದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ದಿಗ್ಗಜ ಮೊಬೈಲ್ ಕಂಪೆನಿ ನೋಕಿಯಾಗೆ ಇದೀಗ ಮತ್ತೆ ಸಂಕ್ರಮಣ ಕಾಲ ಕೂಡಿಬಂದಿದ್ದು, ನೋಕಿಯಾ ಎಚ್ಎಂಡಿ ಕಂಪೆನಿಯ ಫೀಚರ್ ಫೋನ್ ಮಾರುಕಟ್ಟೆ ಲಾಭವು 2018ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಯಲ್ಲಿ 38 ಪ್ರತಿಶತವನ್ನು ಹೆಚ್ಚಿಸಿದೆ ಎಂದು ಕೌಂಟರ್ಪಾಯಿಂಟ್ ತನ್ನ ವರದಿಯಲ್ಲಿ ತಿಳಿಸಿದೆ.

  ಜಿಯೋ ವಿಶೇಷ ದಾಖಲೆ!..ಭಾರತದ ಮೊದಲ ಕಂಪೆನಿಯೊಂದಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ!!

  ಸ್ಮಾರ್ಟ್ ಫೋನಿಗೆ ಬದಲಾಗಿ ಫೀಚರ್ ಫೋನ್ ಖರೀದಿಸಲು ಆದ್ಯತೆ ನೀಡುವ ಕೆಲವೇ ಕೆಲವು ಜನರಿದ್ದರೂ ಸಹ 4G ಫೀಚರ್ ಪೋನ್ ಮಾರಾಟದ ಪ್ರಮಾಣ ಹೆಚ್ಚಾಗಿರುವುದನ್ನು ಕೌಂಟರ್‌ಪಾಯಿಂಟ್ ಉಲ್ಲೇಖಿಸಿದೆ. ಹಾಗಾದರೆ, ಮಾರುಕಟ್ಟೆಯಲ್ಲಿಯೇ ಹೆಚ್ಚು ಮಾರಾಟವಾಗುತ್ತಿರುವ ಜಿಯೋ ಫೀಚರ್ ಫೋನ್ ವೈಶಿಷ್ಟ್ಯಗಳೇನು ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹೇಗಿದೆ ಜಿಯೋ ಮೊಬೈಲ್?

  ಜಿಯೋ ಮತ್ತು LYF ಎರಡೂ ಅಂಬಾನಿಯದೇ ಬ್ರಾಂಡ್ ಆಗಿದ್ದು, LYF ಎಂದು ಲೋಗೊ ಇರುವ ಈ ಫೋನ್ ಜಿಯೋದೆ ಆಗಿದೆ. ನೋಡಲು ಹಳೆ ನೋಕಿಯಾ ಮಲ್ಟಮೀಡಿಯಾ ಸ್ಮಾರ್ಟ್‌ಫೋನ್‌ಗಳಿಗೆ ಹೋಲುವಂತೆ ಜಿಯೋ ಫೋನ್ ರೂಪುಗೊಂಡಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ.!

  ಮಲ್ಟಿಮೀಡಿಯಾ ಆಯ್ಕೆ ಇದೆ.!!

  ಜಿಯೋ ಫೋನ್ ವಿಡಿಯೋ ಜೊತೆಗೆ ಫೋನ್ ಬಗ್ಗೆ ಮಾಹಿತಿಯನ್ನು ಟೆಕ್ ಪಿಪಿ ವೆಬ್‌ಸೈಟ್ ನೀಡಿದೆ. ಜಿಯೋ 4G ಫೋನ್ 512MB RAM ಮತ್ತು 4GB ಆಂತರಿಕ ಮೆಮೊರಿಯನ್ನು ಹೊಂದಿದೆ. ಜೊತೆಗೆ ಮೈಕ್ರೋ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ವಿಸ್ತರಿಸಿಕೊಳ್ಳುವ ಆಯ್ಕೆ ಇದೆ.!

  ಜಿಯೋ ಫೋನ್ ಪ್ರೊಸೆಸರ್ ಯಾವುದು?

  4G ವೋಲ್ಟ್ ಸೇವೆಗಾಗಿಯೇ ರಿಲಾಯನ್ಸ್ ಜಿಯೋ ಸ್ನ್ಯಾಪ್‌ಡ್ರಾಗನ್ 205 ಪ್ಲಾಟ್‌ಫಾರ್ಮ್ ಪ್ರೊಸೆಸರ್ ಹೊಂದಿದೆ. KAI OS ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಣೆ ನೀಡುವ ಫೋನ್, ಡ್ಯವೆಲ್ ಸಿಮ್ ಆಯ್ಕೆ ಹೊಂದಿದೆ. ಮತ್ತು ಒಂದು ಸ್ಲಾಟ್‌ನಲ್ಲಿ ನ್ಯಾನೋ ಸಿಮ್ ಹಾಕಬಹುದಾಗಿದೆ.!

  ಕ್ಯಾಮೆರಾ ಹೇಗಿದೆ!!

  ಜಿಯೋ 4G ಫೋನ್ ಅನ್ನು ಬೇಸಿಕ್ ಫೋನ್ ಎಂದು ಹೇಳುವಹಾಗಿಲ್ಲ ಎನ್ನಬಹುದು. ಜಿಯೋ 4G ಫೀಚರ್ ಫೋನ್ ಫ್ರಂಟ್ VGA ಹಾಗೂ ಹಿಂಬಾಗದಲ್ಲಿ 2MP ಕ್ಯಾಮೆರಾ ಹೊಂದಿದೆ.!

  ಜಿಯೋ ಆಪ್ಸ್ ಕಾರ್ಯನಿರ್ವಹಿಸುತ್ತವೆ.!!

  ಜಿಯೋ ಬೇಸಿಕ್ ಮೊಬೈಲ್‌ನಲ್ಲಿಯೂ ಜಿಯೋ ಆಪ್ಸ್ ಕಾರ್ಯನಿರ್ವಹಣೆ ನೀಡುತ್ತವೆ ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಆದರೆ, ಜಿಯೋ ಸಿನಿಮಾ, ಜಿಯೋ ಟಿವಿಯಂತಹ ಕೆಲವೇ ಕೆಲವು ಆಪ್‌ಗಳು ಮಾತ್ರ ರನ್ ಆಗಿವೆ. ಇಷ್ಟು ಸಾಕಲ್ಲವೇ?

  ಫೇಸ್‌ಬುಕ್ ವಾಟ್ಸ್ಆಪ್ ಸಹ ಬಳಸಬಹುದು.!

  ಜಿಯೋ ಫೋನ್ ಖರೀದಿಸಿದರೆ ಫೇಸ್‌ಬುಕ್ ವಾಟ್ಸ್ಆಪ್ ಸಹ ಬಳಸಬಹುದು ಕು. ಪ್ರಸ್ತುತ ಭಾರತೀಯರು ಹೆಚ್ಚು ಬಳಸುತ್ತಿರುವ ಫೇಸ್‌ಬುಕ್ ಮತ್ತು ವಾಟ್ಸ್‌ಆಪ್ ಬಳಕೆ ಮಾಡುವ ಆಯ್ಕೆಯನ್ನು ಸಹ ಜಿಯೋ ಫೋನ್ ಹೊಂದಿದೆ.!!

  ವಿಡಿಯೋ ಕಾಲಿಂಗ್ ಮತ್ತು ಬ್ಲೂಟೂತ್ 4.1 ಆಯ್ಕೆ.!

  ಜಿಯೋ ಬೇಸಿಕ್ ಫೋನ್ ಮಾಹಿತಿ ಬಿಡುಗಡೆಯಾದ ತಕ್ಷಣ ಎಲ್ಲರೂ ನಿಬ್ಬೆರಗಾಗಿದ್ದು ಮೊಬೈಲ್ ಫೀಚರ್ಸ್‌ಗಳಿಂದಾಗಿ. ವಿಡಿಯೋ ಕಾಲಿಂಗ್ ಮತ್ತು ಬ್ಲೂಟೂತ್ 4.1 ಆಯ್ಕೆಯನ್ನು ಹೊಂದಿರುವ ಜಿಯೋ ಫೋನ್ ಎಲ್ಲರಿಗೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.!

  ಡೇಟಾ ಶೇರ್ ಮಾಡಬಹುದು.!

  ಜಿಯೋ ಫೀಚರ್ ಫೋನ್ ಮೂಲಕ ನೀವು ನಿಮ್ಮಡೇಟಾವನ್ನು ಕೂಡ ಶೇರ್ ಮಾಡುವ ಆಯ್ಕೆ ಇದೆ. ಟೆದರಿಂಗ್ ಆಯ್ಕೆಯನ್ನು ಜಿಯೋ ಫೀಚರ್ ಫೋನ್ ಹೊಂದಿದ್ದು, ಜಿಯೋ ಡೇಟಾವನ್ನು ನಿಮ್ಮ ಗೆಳೆಯರು ಮತ್ತು ಫ್ಯಾಮಿಲಿ ಜೊತೆಗೆ ಹಂಚಿಕೊಳ್ಳಬಹುದು.!

  ಕನ್ನಡದಲ್ಲಿಯೂ ಮಾಹಿತಿ ಲಭ್ಯ.!

  ಜಿಯೋ ಬೇಸಿಕ್ ಮೊಬೈಲ್ ಅನ್ನು ಭಾರತದ 22 ಭಾಷೆಗಳಲ್ಲಿ ಬಳಕೆ ಮಾಡಬಹುದಾಗಿದ್ದು, ಕನ್ನಡ ಭಾಷೆಯಲ್ಲಿಯೂ ಜಿಯೋ ಫೋನ್ ಬಳಕೆ ಮಾಡಬಹುದಾಗಿದೆ.!ಗ್ರಾಮೀಣ ಜನರನ್ನು ಸೆಳೆಯಲು ಪ್ರಾದೇಶಕ ಭಾಷೆ ಅತ್ಯವಶ್ಯಕವಾಗಿದೆ ಎಂದು ಜಿಯೋ ಅರಿತಿದೆ!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The 4G feature phone from the retail arm of Reliance Industries (RIL), cornered a 15% share of the global marke . to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more