Subscribe to Gizbot

3,999 ರೂ.ಗೆ ಫಿಂಗರ್‌ಪ್ರಿಂಟ್‌, ಟಚ್ ಮತ್ತು ಕೀಪ್ಯಾಡ್ ಹೊಂದಿರುವ "4G" ಸ್ಮಾರ್ಟ್‌ಫೋನ್!!

Written By:

ಹಿರಿಯ ನಾಗರಿಕರಿಗೆ ಹಾಗೂ ಇಳಿವಯಸ್ಸಿನವರಿಗೆ ಅನುಕೂಲವಾಗಲೆಂದು ಫಿಂಗರ್‌ಪ್ರಿಂಟ್‌ ಸೆನ್ಸಾರ್‌ನಂತಹ ಅತ್ಯಾಧುನಿಕ ಫೀಚರ್ಸ್ ಜೊತೆಗೆ ಟಚ್ ಮತ್ತು ಕೀಪ್ಯಾಡ್ ಎರಡೂ ಆಯ್ಕೆ ಹೊಂದಿರುವ ವಿಶ್ವದ ಮೊದಲ 4ಜಿ ಸ್ಮಾರ್ಟ್‌ಫೋನ್‌ 'ರೆವಲ್ಯೂಷನ್ ಟಿಎನ್‌ಟಿ 3' ಸ್ಮಾರ್ಟ್‌ಫೋನ್ ಇದೀಗ ವೈರೆಲ್ ಆಗಿದೆ.!!

ಜಿವಿ-ಮ್ಯಾಜಿಕ್‌ ಕಾನ್‌ಪ್ಲೆಕ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿದ್ದ 'ರೆವಲ್ಯೂಷನ್ ಟಿಎನ್‌ಟಿ 3' ಸ್ಮಾರ್ಟ್‌ಫೋನ್ಯುವಕರ ಜೊತೆಗೆ ಎಲ್ಲ ವರ್ಗದ ಗ್ರಾಹಕರಿಗೂ ಮೆಚ್ಚಿಗೆಯಾಗುವಂತೆ ವಿನ್ಯಾಸವಾಗಿದ್ದು, ಕೇವಲ 3,999 ರೂ. ಬೆಲೆ ಹೊಂದಿರುವುದರಿಂದ ಫೋನ್ ಖರೀದಿಗೆ ಎಲ್ಲರೂ ಆಸಕ್ತಿವಹಿಸುತ್ತಿದ್ದಾರೆ.!! ಹಾಗಾಗಿ, ಮೊಬೈಲ್‌ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಚ್ ಮತ್ತು ಕೀಪ್ಯಾಡ್ ಫೋನ್!!

ಟಚ್ ಮತ್ತು ಕೀಪ್ಯಾಡ್ ಫೋನ್!!

ಇದೇ ಮೊದಲ ಭಾರಿ ಇಂತಹೊಂದು 4G ಪೊನ್ ಮಾರುಕಟ್ಟೆಗೆ ಬಂದಿದ್ದು, ಫೀಚರ್ ಫೋನ್‌ಗೆ ಹೊಂದಿಕೊಂಡಿದ್ದವರು ಸ್ಮಾರ್ಟ್‌ಫೋನ್‌ ಬಳಸುವುದನ್ನು ಕಲಿಯುವ ಮತ್ತು ಅವರಿಗೆ ಸರಳವಾಗುವ ಉದ್ದೇಶದಿಂದ ಈ ನೂತನ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿವಿ ಸಂಸ್ಥೆ ಹೇಳಿಕೊಂಡಿದೆ.!!

ಟಿಎನ್‌ಟಿ 3 ಫೋನ್ ಫೀಚರ್ಸ್ ಏನು?

ಟಿಎನ್‌ಟಿ 3 ಫೋನ್ ಫೀಚರ್ಸ್ ಏನು?

ರೆವಲ್ಯೂಷನ್ ಟಿಎನ್‌ಟಿ 3 ಫೋನ್ 4 ಇಂಚಿನ ಡಬ್ಲ್ಯುವಿಜಿಎ ಟಚ್ ಸ್ಕ್ರೀನ್ ಹೊಂದಿದೆ.! ಹಿರಿಯರಿಗೆ ಕೀಪ್ಯಾಡ್ ಅನುಭವವು ಸಿಗುವಂತೆ ಮತ್ತು ಯುವಕರಿಗೆ ಗೇಮ್ ಆಡಲು ಸಹಕಾರಿಯಾಗುವಂತೆ 1.1 ಇಂಚಿಗಿಂತ ಹೆಚ್ಚು ಜಾಗವನ್ನು ಕೀಪ್ಯಾಟ್ ಅಳವಡಿಸಲು ಮೀಸರಿಸಿಸಲಾಗಿದೆ.!!

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

4G ವೋಲ್ಟ್ ಡ್ಯುಯಲ್ ಸಿಮ್ ಸಪೋರ್ಟ್ ಮಾಡುವಂತಹ1.3GBz ಕ್ವಾಡ್‌ಕೋರ್‌ ಪ್ರೊಸೆಸರ್ ಅನ್ನು ರೆವಲ್ಯೂಷನ್ ಟಿಎನ್‌ಟಿ 3 ಫೋನಿನಲ್ಲಿ ಅಳವಡಿಸಿಸಲಾಗಿದೆ. 1GB RAM ಮತ್ತು 8GB ಆಂತರಿಕ ಮೆಮೊರಿ ಹೊಂದಿರುವ ಈ ಫೋನ್ ಆಂಡ್ರಾಯ್ಡ್ 7.0 ಮೂಲಕ ಕಾರ್ಯನಿರ್ವಹಣೆ ನೀಡಲಿದೆ.!!

22 ಸ್ಥಳೀಯ ಭಾಷೆ!!

22 ಸ್ಥಳೀಯ ಭಾಷೆ!!

ರೆವಲ್ಯೂಷನ್ ಟಿಎನ್‌ಟಿ 3 ಸ್ಮಾರ್ಟ್‌ಫೋನ್ ಒಂದು ವಿಶಿಷ್ಟ ಫೋನ್‌ ಆಗಿದ್ದು 22 ಸ್ಥಳೀಯ ಭಾಷೆಗಳಲ್ಲಿ ಬಳಸಲು ಸಹಾಯವಾಗುವಂತೆ ಈ ಫೋನನ್ನು ರೂಪಿಸಲಾಗಿದೆ. ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ತಂತ್ರಜ್ಞಾನದ ಫೋನನ್ನು ನಮ್ಮ ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ಜಿವಿ ಮೊಬೈಲ್ಸ್ ಸಿಇಒ ಪಂಕಜ್ ಆನಂದ್ ಅವರು ಹೇಳಿದ್ದಾರೆ.!!

ಇತರೆ ಫೀಚರ್ಸ್ ಏನು?

ಇತರೆ ಫೀಚರ್ಸ್ ಏನು?

ಕೇವಲ 3,999 ರೂಪಾಯಿಗಳಿಗೆ ಮಾರುಕಟ್ಟೆಗೆ ಕಾಲಿಟ್ಟಿರುವ ರೆವಲ್ಯೂಷನ್ ಟಿಎನ್‌ಟಿ 3 ಫೋನ್ ಅತ್ಯಂತ ಹೆಚ್ಚು ಫೀಚರ್ಸ್ ಹೊಂದಿದೆ. ಫಿಂಗರ್‌ಪ್ರಿಂಟ್‌ ಸೆನ್ಸಾರ್, 2300 ಎಂಎಎಚ್ ಬ್ಯಾಟರಿ, ಹೊಂದಿರುವ ಫೋನಿನಲ್ಲಿ 5MP ಮತ್ತು 2MP ಕ್ಯಾಮೆರಾವನ್ನು ನೀಡಲಾಗಿದೆ.!!

ಓದಿರಿ:ಬಿಟ್‌ಕಾಯಿನ್ ಖರೀದಿಸದಿರಿ ಎಂದು ಎಚ್ಚರಿಸಿದ ಕೇಂದ್ರ ಸರ್ಕಾರ!!..ಏನೆಲ್ಲಾ ಕಾರಣಕ್ಕಾಗಿ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
TnT3 smartphone with 4.00-inch 480x800 display powered by 1.3GHz quad-core processor alongside 1GB of RAM .to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot