Home
ಮೊಬೈಲ್

ಎರಡರಲ್ಲಿ ನಿಮ್ಮಿಷ್ಟದ ಮೊಬೈಲ್ ಯಾವುದು?

By Super
ಎರಡರಲ್ಲಿ ನಿಮ್ಮಿಷ್ಟದ ಮೊಬೈಲ್ ಯಾವುದು?

ಅಗ್ಗದ ಬೆಲೆಗೆ ಮೊಬೈಲ್ ಮತ್ತು ಸ್ಮಾರ್ಟ್ ಫೋನ್ ಗಳನ್ನು ನೀಡುತ್ತಾ ಬಂದಿರುವ ಕಾರ್ಬನ್ ಮತ್ತು ಲಾವಾ ಕಂಪನಿ ಇತ್ತೀಚೆಗಷ್ಟೆ ಎರಡು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.

ಕಾರ್ಬನ್ A1 ಮತ್ತು ಲಾವಾ S12 ಎಂಬ ನೂತನ ಹ್ಯಾಂಡ್ ಸೆಟ್ ಗಳು ಅನೇಕ ವಿಶೇಷತೆ ಮತ್ತು ಸೌಲಭ್ಯಗಳನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ಎರಡೂ ಸ್ಮಾರ್ಟ್ ಫೋನ್ ಗಳೂ ಆಂಡ್ರಾಯ್ಡ್ 2.2 ಫ್ರೊಯೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಲಾವಾದಲ್ಲಿ ಸಿಂಗಲ್ ಕೋರ್ 600 MHz ಕ್ವಾಲ್ಕಂ MSM7227 ಪ್ರೊಸೆಸರ್ ಹೊಂದಿರುವುದು ವಿಶೇಷವೆನಿಸಿದೆ.

ಕಾರ್ಬನ್ A1 ಮೊಬೈಲ್ ವಿಶೇಷತೆ:

* 105 ಗ್ರಾಂ ತೂಕ

* 106.8 x 59.2 x 14.0 ಎಂಎಂ ಸುತ್ತಳತೆ

* 2.9 ಇಂಚಿನ ಸ್ಕ್ರೀನ್ ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್

* ಟಚ್ ಸ್ಕ್ರೀನ್

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* 32ಜಿಬಿ ಮೆಮೊರಿ ವಿಸ್ತರಣೆಗೆ ಅವಕಾಶ

* 3.5 ಎಂಎಂ ಜ್ಯಾಕ್

* ಬ್ಲೂಟೂಥ್, USB ಪೋರ್ಟ್

ಲಾವಾ S12 ಮೊಬೈಲ್ ವಿಶೇಷತೆ:

* 120 ಗ್ರಾಂ ತೂಕ

* 117 x 57.5 x 13.4 ಎಂಎಂ ಸುತ್ತಳತೆ

* ಟಚ್ ಸ್ಕ್ರೀನ್

* 3.20 ಇಂಚಿನ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ, ಡಿಜಿಟಲ್ ಝೂಮ್ ತಂತ್ರಜ್ಞಾನ

* 32ಜಿಬಿ ಮೆಮೊರಿ ವಿಸ್ತರಣೆಗೆ ಅವಕಾಶ

* 3.5 ಎಂಎಂ ಜ್ಯಾಕ್

* ಬ್ಲೂಟೂಥ್, USB ಪೋರ್ಟ್

ಕಾರ್ಬನ್ A1 ಮೊಬೈಲಿನ 1100 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, 250 ನಿಮಿಷದ ಟಾಕ್ ಟೈಂ ಮತ್ತು 250 ಗಂಟೆ ಸ್ಟ್ಯಾಮಡ್ ಬೈ ಟೈಂ ನೀಡುತ್ತದೆ. ಲಾವಾ S12 ಮೊಬೈಲಿನ 1300 mAh ಲೀಥಿಯಂ ಐಯಾನ್ ಬ್ಯಾಟರಿ 10.80 ಗಂಟೆ ಟಾಕ್ ಟೈಂ ಮತ್ತು 590 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ ಎನ್ನಲಾಗಿದೆ.

ಕಾರ್ಬನ್ A1 ಮತ್ತು ಲಾವಾ S12 ಎರಡೂ ಮೊಬೈಲ್ ಗಳಲ್ಲೂ ಸಹ ಆಡಿಯೋ, ವಿಡಿಯೋ ಪ್ಲೇಯರ್ ಇದ್ದು, MP3, MP4 ಮತ್ತು AAC, AAC+ ಫೀಲ್ ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ. ಆದರೆ ಕಾರ್ಬನ್ A1 ಮೊಬೈಲಿನಲ್ಲಿ ಎಫ್ ಎಂ ನೀಡಲಾಗಿಲ್ಲದಿರುವುದೇ ಕೊರತೆ ಎನಿಸಿದೆ.

ಕಾರ್ಬನ್ A1 ಮೊಬೈಲ್ ಬೆಲೆ 7,000ರು ಎಂದು ಅಂದಾಜಿಸಲಾಗಿದ್ದು, ಲಾವಾ S12 ಮೊಬೈಲ್ ಸುಮಾರು 10,000 ರುಗೆ ದೊರೆಯಲಿದೆ ಎಂದು ತಿಳಿದುಬಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+