ಸದ್ಯದಲ್ಲೇ ಕಾರ್ಬ‌ನ್‌ ಲಾವಾದಿಂದ ವಿಂಡೋಸ್ ಸ್ಮಾರ್ಟ್‌ಫೋನ್‌

Posted By:

ಮೈಕ್ರೋಸಾಫ್ಟ್‌ ಶುಲ್ಕ ರಹಿತವಾಗಿ ವಿಂಡೋಸ್ ಫೋನ್‌ ಓಎಸ್‌ ಪರವಾನಗಿ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಲಾವಾ ಮತ್ತು ಕಾರ್ಬ‌ನ್‌ ಕಂಪೆನಿಯಲ್ಲಿ ಕಡಿಮೆ ಬೆಲೆಯಲ್ಲಿ ವಿಂಡೋಸ್‌ ಫೋನ್‌ ಓಎಸ್‌ ಸ್ಮಾರ್ಟ್‌ಫೋನ್‌‌‌ ತಯಾರಿಸಲು ಮುಂದಾಗಿವೆ.

6 ಸಾವಿರ ರೂಪಾಯಿಯಿಂದ ಆರಂಭವಾಗಿ 12 ಸಾವಿರ ರೂಪಾಯಿ ಒಳಗಡೆ ನಾಲ್ಕು ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಲಿದೆ ಎಂದು ಕಾರ್ಬ‌ನ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಜೈನ್‌‌ ಪಿಟಿಐಗೆ ತಿಳಿಸಿದ್ದಾರೆ.

ಲಾವಾ ಕಂಪೆನಿ ರೂ. 6,500 ರಿಂದ ಆರಂಭವಾಗಿ ರೂ.8,500 ಒಳಗಡೆಯ ಕ್ವಾಲಕಂ ಸ್ನಾಪ್‌ಡ್ರಾಗನ್‌ 200 ಪ್ರೊಸೆಸರ್‍ ಹೊಂದಿರುವ ವಿಂಡೋಸ್‌ ಸ್ಮಾರ್ಟ್‌ಫೋನ್‌‌ ಬಿಡುಗಡೆ ಮಾಡಲಿದೆ ಎಂದು ಲಾವಾ ಇಂಟರ್‌ನ್ಯಾಶನಲ್‌ ಸಿಇಒ ಹರಿ ಓಂ ರೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 ಸದ್ಯದಲ್ಲೇ ಕಾರ್ಬ‌ನ್‌ ಲಾವಾದಿಂದ ವಿಂಡೋಸ್ ಸ್ಮಾರ್ಟ್‌ಫೋನ್‌

ಮೈಕ್ರೋಸಾಫ್ಟ್‌‌ ಭಾರತೀಯ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್‌‌,ಝೋಲೋದ ಜೊತೆಗೆ ಸಹ ಮಾತುಕತೆ ನಡೆಸಿದೆ. ಈ ಕಂಪೆನಿಗಳು ಸಹ ಕಡಿಮೆ ಬೆಲೆಯ ವಿಂಡೋಸ್‌ ಸ್ಮಾರ್ಟ್‌ಫೋನ್‌ ನಿರ್ಮಾಣ ಮಾಡುವ ಸಾಧ್ಯತೆಯಿದೆ.

ಮೈಕ್ರೋಸಾಫ್ಟ್ ಭಾರತದ ಕಂಪೆನಿಗಳಲ್ಲದೇ ಚೀನಾದ ಜಿಯೋನೀ,ಲೆನೊವೊ,ಝಡ್‌ಟಿಇ ಜೊತೆಗೆ ಮಾತುಕತೆ ನಡೆಸಿದ್ದು ಈ ಕಂಪೆನಿಗಳ ವಿಂಡೋಸ್‌ ಸ್ಮಾರ್ಟ್‌ಫೋನ್‌ ಈ ವರ್ಷ‌ವೇ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸತ್ಯ ನಾದೆಳ್ಲಾ ಮೈಕ್ರೋಸಾಫ್ಟ್‌ ಸಿಇಒ ಆಗಿದ್ದಕ್ಕೆ ಜನ ಏನಂತಾರೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot