Subscribe to Gizbot

ಡಾಲ್ಬಿ DTS ಇರುವ ಕಾರ್ಬನ್ ಮೊಬೈಲ್:KT81

Posted By: Varun
ಡಾಲ್ಬಿ DTS ಇರುವ ಕಾರ್ಬನ್ ಮೊಬೈಲ್:KT81

ಥಿಯೇಟರುಗಳಿಗೆ ಹೋಗಿ ಚಿತ್ರ ನೋಡುವವರಿಗೆ Dolby DTS ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತೆ ಅದರ ಸೌಂಡ್ ಎಫೆಕ್ಟ್. ಅಂತಹ ಸೌಲಭ್ಯವಿರುವ ಫೋನ್ ಒಂದನ್ನು ಈಗ ಕಾರ್ಬನ್ ಕಂಪನಿ ಬಿಡುಗಡೆ ಮಾಡಿದೆ.

KT81 ಎಂಬ ಹೆಸರಿರುವ ಈ ಫೋನ್ ಅನ್ನು ಸಂಗೀತ ಪ್ರೇಮಿಗಳನ್ನು ಗಮನದಲ್ಲಿ ಇಟ್ಟುಕೊಂಡೇ ಹೊರತರಲಾಗಿದ್ದು ಹಲವಾರು ಆಕರ್ಷಕ ಫೀಚರುಗಳನ್ನು ಒಳಗೊಂಡಿದೆ. ಒಳ್ಳೆಯ ಬ್ಯಾಟರಿ ಬ್ಯಾಕ್ ಅಪ ಕೂಡ ಇರುವ ಈ ಫೋನ್ ವಿವಿಧ ರೀತಿಯ ಆಡಿಯೋ ಹಾಗು ವೀಡಿಯೋ ಫಾರ್ಮ್ಯಾಟ್ ಗಳನ್ನು ಸಪೋರ್ಟ್ ಮಾಡುತ್ತದೆ.

ಈ ಫೋನಿನ ಇತರೇ ಫೀಚರುಗಳು ಈ ರೀತಿ ಇವೆ:

  • 3 .2 ಇಂಚ್ ಗಾತ್ರದ ಕೆಪಾಸಿಟಿವ್ ಟಚ್ ಸ್ಕ್ರೀನ್

  • 2048х1536 ಪಿಕ್ಸೆಲ್ ರೆಸಲ್ಯೂಶನ್

  • 3.2 ಮೆಗಾಪಿಕ್ಸೆಲ್ ಇರುವ ಡಿಜಿಟಲ್ ಜೂಮ್ ಕ್ಯಾಮರಾ

  • 16 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • ಮೈಕ್ರೊ SD ಹಾಗು ಮೈಕ್ರೊ SDHC ಕಾರ್ಡ್ ಸ್ಲಾಟ್

  • ಲೌಡ್ ಸ್ಪೀಕರ್
 

ಡಾಲ್ಬಿ ಸೌಂಡ್ ಹೊಂದಿರುವ ಈ ಮೊಬೈಲ್ ನ ಬೆಲೆ 4, 500 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot