ಕಾರ್ಬನ್‌ನಿಂದ ಎರಡು ಫೋನ್‌ಗಳ ಭರ್ಜರಿ ಜಾಕ್‌ಪಾಟ್

Posted By:

ಮತ್ತೊಮ್ಮೆ ಭಾರತೀಯ ಮೂಲದ ಸ್ಮಾರ್ಟ್‌ಫೋನ್ ಕಂಪೆನಿ ಕಾರ್ಬನ್ ಓಪಿಯಮ್ N7 ಮತ್ತು ಓಪಿಯಮ್ N9 ಎಂಬ ಹೆಸರಿನಲ್ಲಿ ಡೊಮೆಸ್ಟಿಕ್ ಮಾರುಕಟ್ಟೆಯಲ್ಲಿ ಜನಪ್ರಿಯ ಇ ಕಾಮರ್ಸ್ ಸೈಟ್ ಆದ ಹೋಮ್‌ಶಾಪ್ 18 ನಲ್ಲಿ ಲಾಂಚ್ ಮಾಡಿದೆ. ಕ್ವಾಡ್ ಕೋರ್ ಪ್ರೊಸೆಸರ್ ಫೋನ್ ಆದ ಇವುಗಳು ರೂ 5,999 ಮತ್ತು ರೂ 8,999 ರಲ್ಲಿ ದೊರೆಯುತ್ತಿವೆ.

ಕಾರ್ಬನ್ ಓಪಿಯಮ್ N7 ಅನ್ನು ಕಪ್ಪು ಬಣ್ಣದಲ್ಲಿ ಮಾತ್ರವೇ ವಿತರಿಸುತ್ತಿದ್ದು, ಓಪಿಯಮ್ N9 ಕಪ್ಪು ಮತ್ತು ಬಿಳಿ ಈ ಎರಡೂ ಬಣ್ಣಗಳಲ್ಲಿ ಲಭ್ಯವಿವೆ. ಓಪಿಯಮ್ N9 ನಲ್ಲಿ ಆಕರ್ಷಣೆ ಏನೆಂದರೆ ಇದು ವಿಭಿನ್ನ ಡಿಸೈನ್ ಅನ್ನು ಹೊಂದಿದ್ದು ವೃತ್ತಾಕಾರದ ಬದಲಿಗೆ ಆಂಗ್ಯುಲರ್ ಮೂಲೆಗಳನ್ನು ಹೊಂದಿರುವುದಾಗಿದೆ. ಇದು ಡಿವೈಸ್‌ಗೆ ವಿಭಿನ್ನ ನೋಟವನ್ನು ನೀಡಿದೆ.

ಕಾರ್ಬನ್‌ನಿಂದ ಡಬ್ಬಲ್ ಧಮಾಕಾ ಸ್ಮಾರ್ಟ್‌ಫೋನ್ ಬಿಡುಗಡೆ

ಕಾರ್ಬನ್ ಓಪಿಯಮ್ N7 ಪ್ರಮುಖ ವೈಶಿಷ್ಟ್ಯಗಳು
ಕಾರ್ಬನ್ ಓಪಿಯಮ್ N7 4 ಇಂಚಿನ (800 ×480 ಪಿಕ್ಸೆಲ್‌ಗಳ) ಸಾಮರ್ಥ್ಯವುಳ್ಳ ಟಚ್‌ಸ್ಕ್ರೀನ್‌ನೊಂದಿಗೆ ಬಂದಿದ್ದು IPS ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದ್ದು 512 ಎಮ್‌ಬಿ RAM ಇದೆ. ಇದರಲ್ಲಿ ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ಚಾಲನೆಯಾಗುತ್ತಿದ್ದು ಡ್ಯುಯೆಲ್ ಸಿಮ್, 5ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, 0.3MP (VGA) ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ. ಡಿವೈಸ್‌ನ ಆಂತರಿಕ ಮೆಮೊರಿ 4ಜಿಬಿಯಾಗಿದ್ದು ಇದನ್ನು 32ಜಿಬಿಗೆ ವಿಸ್ತರಿಸಬಹುದಾಗಿದೆ. ಸಂಪರ್ಕ ವ್ಯವಸ್ಥೆಗಳು 3ಜಿ, ವೈ-ಫೈ 802.11 b/g/n, ಬ್ಲೂಟೂತ್ 4.0 and GPS ಇದ್ದು ಬ್ಯಾಟರಿ ಸಾಮರ್ಥ್ಯ 1600 mAh ಆಗಿದೆ.

ಕಾರ್ಬನ್‌ನಿಂದ ಡಬ್ಬಲ್ ಧಮಾಕಾ ಸ್ಮಾರ್ಟ್‌ಫೋನ್ ಬಿಡುಗಡೆ

ಕಾರ್ಬನ್ ಓಪಿಯಮ್ N9 ಪ್ರಮುಖ ವೈಶಿಷ್ಟ್ಯಗಳು
ಕಾರ್ಬನ್ ಓಪಿಯಮ್ N9 ದೊಡ್ಡದಾದ 5 ಇಂಚಿನ (1280 x 720 ಪಿಕ್ಸೆಲ್‌ಗಳ) HD IPS ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದರಲ್ಲಿ 1.3 GHz ಕ್ವಾಡ್ ಕೋರ್ ಪ್ರೊಸೆಸರ್ ಇದ್ದು 1ಜಿಬಿ RAM ಡಿವೈಸ್‌ನಲ್ಲಿದೆ. ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ. ಇಷ್ಟಲ್ಲದೆ ಡಿವೈಸ್‌ನಲ್ಲಿ ಡ್ಯುಯೆಲ್ ಸಿಮ್, 8ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಇದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. 2ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಫೋನ್‌ನ ವಿಶೇಷತೆಯಾಗಿದ್ದು, 4ಜಿಬಿ ಆಂತರಿಕ ಮೆಮೊರಿಯನ್ನು ವಿಸ್ತರಿಸಬಹುದಾದ ಸಾಮರ್ಥ್ಯದೊಂದಿಗೆ 3ಜಿ, WiFi 802.11 b/g/n, ಬ್ಲ್ಯೂಟೂತ್, GPS ಮತ್ತು 2000 mAh ಬ್ಯಾಟರಿಯನ್ನು ಹೊಂದಿದೆ.

ಸ್ವಲ್ಪ ದಿನಗಳ ಹಿಂದೆಯಷ್ಟೇ, ಭಾರತದ ಮೂರನೇ ಮೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆದ ಕಾರ್ಬನ್ ಫ್ಲಿಪ್‌ಕಾರ್ಟ್ ಮೂಲಕ ನಾಲ್ಕು ಬಜೆಟ್ ಅನುಗುಣವಾದ ಫೋನ್‌ಗಳನ್ನು ಸ್ಥಾಪಿಸಿದ್ದು ಕಂಪೆನಿಯ ಪ್ರಪ್ರಥಮ ಆಂಡ್ರಾಯ್ಡ್ ಪವರ್ ಸ್ಮಾರ್ಟ್‌ಫೋನ್ ಆಗಮನವು ಕಾರ್ಬನ್ ಫೋನ್ ಪ್ರೇಮಿಗಳಿಗೆ ಹಬ್ಬವನ್ನುಂಟು ಮಾಡಿದೆ.

ಗಿಜ್‌ಬಾಟ್‌ಗೆ ಭೇಟಿ ಕೊಡುತ್ತಿರಿ!

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot