ಆಂಡ್ರಾಯ್ಡ್ ಒನ್ ಇರುವ ಕಾರ್ಬನ್ ಸ್ಪಾರ್ಕಲ್ V ಮಾರುಕಟ್ಟೆಗೆ

Written By:

ಏಷ್ಯಾದಲ್ಲೇ ಭಾರತವು ಹೆಚ್ಚು ಶಕ್ತಿಯುತ ದೇಶವಾಗಿ ರೂಪುಗೊಂಡಿದ್ದು, ಇಲ್ಲಿ ಕಡಿಮೆ ಬಜೆಟ್‌ನ ಫೋನ್‌ಗಳು ಮಾರಾಟವಾಗುತ್ತಿದೆ ಮತ್ತು ಗ್ರಾಹಕರೂ ಕೂಡ ಇಂತಹುದೇ ಫೋನ್‌ಗಳನ್ನು ಖರೀದಿಸಲು ಆಸಕ್ತರಾಗುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆಯಷ್ಟೇ, ಗೂಗಲ್ ಹೊಸ ಮೂರು ಆಂಡ್ರಾಯ್ಡ್ ಒನ್ ಪ್ಲಾಟ್‌ಫಾರ್ಮ್‌ನ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಇದರ ಬೆಲೆ ರೂ 6,399 ರಿಂದ ಆರಂಭವಾಗುತ್ತಿದೆ. ಇದು ಅತ್ಯಾಧುನಿಕ ಆಂಡ್ರಾಯ್ಡ್ ಎಸ್ ಅನ್ನು ಚಾಲನೆ ಮಾಡುತ್ತಿದ್ದು, ಸ್ಥಳೀಯ ಡೊಮೆಸ್ಟಿಕ್ ಮೊಬೈಲ್ ತಯಾರಕರಾದ ಮೈಕ್ರೋಮ್ಯಾಕ್ಸ್, ಸ್ಪೈಸ್ ಮತ್ತು ಕಾರ್ಬನ್ ಈ ಆಂಡ್ರಾಯ್ಡ್ ಒನ್ ಪ್ಲಾಟ್‌ಫಾರ್ಮ್‌ ಅನ್ನು ತಮ್ಮ ಡಿವೈಸ್‌ಗಳಲ್ಲಿ ಬಳಸಿ ಫೋನ್‌ಗಳ ಲಾಂಚ್ ಅನ್ನು ಮಾಡುತ್ತಿವೆ.

ಕಾರ್ಬನ್ ಕಂಪೆನಿಯು ತನ್ನ ಹೊಸ ಡಿವೈಸ್ ಆದ ಕಾರ್ಬನ್ ಸ್ಪಾರ್ಕಲ್ ವಿ ಯನ್ನು ಲಾಂಚ್ ಮಾಡಿದ್ದು ಇದು ಕಡಿಮೆ ಆಂಡ್ರಾಯ್ಡ್ ಪವರ್ ಉಳ್ಳ ಸ್ಮಾರ್ಟ್‌ಫೋನ್ ಆಗಿದ್ದು ಇದು ನಿಜಕ್ಕೂ ಮನಮೋಹಕವಾಗಿದೆ. ಈ ಫೋನ್‌ನ ಹಿಂಭಾಗ ಕವರ್ ಅನ್ನು ಸುಲಭವಾಗಿ ತೆರೆಯಬಹುದಾಗಿದ್ದು, ಇದರಲ್ಲಿ ಅಂತರ್ನಿರ್ಮಿತ ಬ್ಯಾಟರಿಯನ್ನು ತೆಗೆಯಬಹುದಾಗಿದೆ. ಇದು ಡ್ಯುಯಲ್ ಸಿಮ್ ಸ್ಲಾಟ್ ಅನ್ನು ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಕೂಡ ಇದರಲ್ಲಿದೆ. ಇದು 3.5mm ಹೆಡ್‌ಫೋನ್ ಜಾಕ್ ಅನ್ನು ಹೊಂದಿದ್ದು, 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಇದರಲ್ಲಿದೆ ಮತ್ತು 2 ಮೆಗಾಪಿಕ್ಸೆಲ್ ಅನ್ನು ಮುಂಭಾಗದಲ್ಲಿ ಪಡೆದುಕೊಂಡಿದೆ.

ಕಾರ್ಬನ್‌ನ ಸ್ಪಾರ್ಕಲ್ V ಹ್ಯಾಂಡ್‌ಸೆಟ್ ಸೂಪರ್ ಡಿವೈಸ್ ಹೇಗೆ?

ಕಾರ್ಬನ್ ಸ್ಪಾರ್ಕಲ್ V ಇತ್ತೀಚಿನ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ನೊಂದಿಗೆ ಬಂದಿದ್ದು ಉತ್ತಮ ಬ್ಯಾಟರಿ ಜೀವನವನ್ನು ಪಡೆದುಕೊಂಡಿದೆ. ಇದು 1.2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಹೊಂದಿದ್ದು, 1 ಜಿಬಿ RAM ಹಾಗೂ 4 ಜಿಬಿ ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಒಳಗೊಂಡಿದೆ. ಇದರ ಸಂಗ್ರಹಣೆಯನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಕೂಡ ವಿಸ್ತರಿಸಬಹುದು. ಇದರ ಸಂಪರ್ಕ ವಿಶೇಷತೆಗಳು 3 ಜಿ, ವೈಫೈ, ಡ್ಯುಯಲ್ ಸಿಮ್, ಎಫ್‌ಎಮ್ ರೇಡಿಯೊ, USB 2.0, ಬ್ಲ್ಯೂಟೂತ್ ಮತ್ತು ಇತರ ವಿಶೇಷತೆಗಳನ್ನು ಪಡೆದುಕೊಂಡಿದೆ.

<center><iframe width="100%" height="360" src="//www.youtube.com/embed/a-oX2zUVPS0?feature=player_detailpage" frameborder="0" allowfullscreen></iframe></center>

English summary
This article tells about Karbonn Sparkle V Android One Smartphone First Look: A Cool Budget Phone For Your Money.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot