Subscribe to Gizbot

ರೆಡ್‌ಮಿ ನೋಟ್ 5 ಸೆಡ್ಡು ಹೊಡೆಯುವ ಭಾರತದ ಸ್ಮಾರ್ಟ್‌ಫೋನ್ ಬೆಲೆ ರೂ.3,999..!

Written By:

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿ ವೃಂದವನ್ನು ಕಟ್ಟಿಕೊಂಡಿರುವ ಕಾರ್ಬನ್ ಮೊಬೈಲ್ಸ್. ಈ ಬಾರಿ ಮಾರುಕಟ್ಟೆಗೆ ಹೊಸದೊಂದು ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಕಾರ್ಬನ್ ಟೈಟಿನಿಯಮ್ ಜಂಬೊ 2 ಸ್ಮಾರ್ಟ್‌ಫೋನ್ ಹೊಸ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನುವ ಮಾತು ಮಾರುಕಟ್ಟೆಯಲ್ಲಿ ಕೇಳಿಬಂದಿದೆ.

ಸದ್ಯ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿಗೆ ಸೆಡ್ಡು ಹೊಡೆಯುವ ಈ ಸ್ಮಾರ್ಟ್‌ ಫೋನ್, ರೂ.3999ಕ್ಕೆ ಮಾರಾಟವಾಗಲಿದೆ. ಈ ಹಿನ್ನಲೆಯಲ್ಲಿ ನಿಮ್ಮ ಬಜೆಟೆಗೆ ಸೆರಿ ಹೊಂದುವ ಕಾರ್ಬನ್ ಟೈಟಿನಿಯಮ್ ಜಂಬೊ 2 ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4000mAh ಬ್ಯಾಟರಿ:

4000mAh ಬ್ಯಾಟರಿ:

ಕಾರ್ಬನ್ ಟೈಟಿನಿಯಮ್ ಜಂಬೊ 2 ಸ್ಮಾರ್ಟ್‌ಫೋನ್ ನಲ್ಲಿ ಹೆಸರಿಗೆ ತಕ್ಕಂತೆ ಜಂಬೋ ಬ್ಯಾಟರಿಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿಯನ್ನು ನೀಡಲಾಗಿದ್ದು, ಎರಡು ದಿನ ಬ್ಯಾಟರಿ ಬ್ಯಾಕಪ್ ನೀಡಲಿದೆ.

5.5 ಇಂಚಿನ ಡಿಸ್‌ಪ್ಲೇ:

5.5 ಇಂಚಿನ ಡಿಸ್‌ಪ್ಲೇ:

ಕಾರ್ಬನ್ ಟೈಟಿನಿಯಮ್ ಜಂಬೊ 2 ಸ್ಮಾರ್ಟ್‌ಫೋನ್ ನಲ್ಲಿ 5.5 ಇಂಚಿನ HD ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ 2.5D ಕರ್ವಡ್ ಗ್ಲಾಸ್ ಸಹ ಅಳವಡಿಸಲಾಗಿದೆ.

2GB RAM:

2GB RAM:

ಕಾರ್ಬನ್ ಟೈಟಿನಿಯಮ್ ಜಂಬೊ 2 ಸ್ಮಾರ್ಟ್‌ಫೋನ್ ನಲ್ಲಿ 2GB RAM ಕಾಣಬಹುದಾಗಿದ್ದು, ಇದರೊಂದಿಗೆ 16GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ. ಇದಲ್ಲದೇ 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಈ ಸ್ಮಾರ್ಟ್‌ಫೋನಿನಲ್ಲಿ 13MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗದೆ. ಅಲ್ಲದೇ ಹಿಂಭಾಗದಲ್ಲಿ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ.

ಕ್ಯಾಷ್ ಬ್ಯಾಕ್

ಕ್ಯಾಷ್ ಬ್ಯಾಕ್

ಕಾರ್ಬನ್ ಟೈಟಿನಿಯಮ್ ಜಂಬೊ 2 ಸ್ಮಾರ್ಟ್‌ಫೋನ್ ನಲ್ಲಿ ಸ್ಮಾರ್ಟ್‌ಫೋನ್ ಬೆಲೆ ರೂ.5,999ಆಗಿದ್ದು, ಏರ್‌ಟೆಲ್ ಈ ಸ್ಮಾರ್ಟ್‌ಫೋನ್ ಕೊಳ್ಳುವರಿಗೆ ರೂ.2000 ಕ್ಯಾಷ್ ಬ್ಯಾಕ್ ನೀಡಲಿದೆ. ಮೊದಲ 18 ತಿಂಗಳ ನಂತರದ ರೂ.500 ಹಾಗೂ ಮತ್ತೆ 18 ತಿಂಗಳ ನಂತರ ರೂ.1500 ನೀಡಲಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಏರ್‌ಟೆಲ್ ಪ್ಯಾಕ್:

ಏರ್‌ಟೆಲ್ ಪ್ಯಾಕ್:

ಈ ಸ್ಮಾರ್ಟ್‌ಫೋನ್ ಗಾಗಿಯೇ ಏರ್‌ಟೆಲ್ ರೂ.169 ಪ್ಲಾನ್ ಘೋಷಣೆ ಮಾಡಿದ್ದು, ರೂ.1 GB ಡೇಟಾ ಪ್ರತಿ ನಿತ್ಯ ಮತ್ತು ಉಚಿತ ಕರೆಗಳನ್ನು ಮಾಡಬಹುದಾಗಿದೆ. ಇದಲ್ಲದೇ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Karbonn Titanium Jumbo 2 at an Effective Price of INR 3,999. to know more visit kannada.gibot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot