Ken Xin Da ಜೇಮ್ಸ್ ಬಾಂಡ್ ಮೊಬೈಲ್

Posted By: Varun
Ken Xin Da ಜೇಮ್ಸ್ ಬಾಂಡ್ ಮೊಬೈಲ್

ನೀವು ಅಣ್ಣಾ ಬಾಂಡ್, ಕ್ಷಮಿಸಿ, ಜೇಮ್ಸ್ ಬಾಂಡ್ ಚಿತ್ರ ನೋಡಿದ್ದೀರ ತಾನೇ? ಬಾಂಡ್ ಉಪಯೋಗಿಸುವ ಕಾರ್, ಗನ್, ಕ್ಯಾಮರಾ, ಪತ್ತೇದಾರಿ ಉಪಕರಣಗಳು ಒಂದು ರೀತಿ ಡಿಫರೆಂಟ್ ಆಗಿರುತ್ತವೆ. ಅವುಗಳನ್ನು ನೋಡಿದರೆ ನಮಗೂ ಕೊಳ್ಳಲು ಆಸೆ ಆಗುತ್ತದೆ. ಆದರೆ ಏನ್ ಮಾಡೋದು ಅವೆಲ್ಲ ಫಿಲಂಗೆ ಅಂತಾ ಉಪಯೋಗಿಸೋದು .

ಆದರೆ ಈ ರೀತಿಯ ಕಲ್ಪನೆ ಇರುವ ಚೀನಾ ದೇಶದ Ken Xin Da ಎಂಬ ಕಂಪನಿಯೊಂದು ಸಿಗರೆಟ್ ಲೈಟರ್ ನಷ್ಟೇ ಚಿಕ್ಕದಾದ ದ್ವಿ-ಸಿಮ್ ಇರುವ ಫೋನ್ ಒಂದನ್ನು ಮಾರುಕಟ್ಟೆಗೆ ಬಿಟ್ಟಿದೆ. ಮತ್ತಷ್ಟು ಖುಷಿತರುವ ವಿಚಾರ ಏನೆಂದರೆ ಇದರ ಬೆಲೆ ಕೇವಲ 1,200 ರೂಪಾಯಿ.

ಜಗತ್ತಿನ ಅತಿ ಚಿಕ್ಕದಾದ ಫೋನುಗಳಲ್ಲಿ ಒಂದಾದ ಈ M2 ಮಾಡಲ್ ಸ್ಲಿಮ್ ಆಗಿದ್ದು, ನಿಮ್ಮ ಅಂಗೈ ನಲ್ಲಿ ಆಟಿಕೆಯಂತೆ ಕಾಣುತ್ತದೆ. ನಿಮ್ಮ ಬ್ಲೂಟೂತ್ ಹೆಡ್ ಸೆಟ್ ನಂತೆಯೇ ಚಿಕ್ಕದಾಗಿ ಕಾಣುವ ಈ ಫೋನನ್ನು ಕಿವಿಯ ಹತ್ತಿರ ಇಟ್ಟುಕೊಂಡು ಮಾತನಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ. ಸೈಜ್ ನಲ್ಲಿ ಚಿಕ್ಕದಾಗಿದ್ದರೂ, ಹಲವಾರು ಫೀಚರುಗಳನ್ನು ಹೊಂದಿದ್ದು ಏನೇನಿದೆ ನೋಡಿ:

  • ದ್ವಿ ಸಿಮ್

  • 240 ನಿಮಿಷದ ಟಾಕ್ ಟೈಮ್

  • MP3, AVI, MP4, 3GP ಫಾರ್ಮ್ಯಾಟ್ ಗಳನ್ನು ಪ್ಲೇ ಮಾಡುವ ಆಡಿಯೋ, ವೀಡಿಯೋ ಪ್ಲೇಯರ್

  • ಕೀಪ್ಯಾಡ್

  • VGA

  • ಕ್ಯಾಮರಾ.

  • ಮೈಕ್ರೋ USB ಚಾರ್ಜರ್

  • ಮೈಕ್ರೋ SD ಕಾರ್ಡ್ ಸ್ಲಾಟ್

  • 2.5 mm ಹೆಡ್ ಫೋನ್ ಜ್ಯಾಕ್ ಹಾಗು ಲೌಡ್ ಸ್ಪೀಕರ್

  • 2 GB ಮೆಮೊರಿ ಕಾರ್ಡ್
 

ನೀವು ಡಿಫರೆಂಟ್ ವ್ಯಕ್ತಿತ್ವ ಹೊಂದಿದ್ದರೆ, ನಿಮಗೆ ಈ Ken Xin Da M2 ಮೊಬೈಲ್ ಒಂದು ಒಳ್ಳೆಯ ಚಾಯ್ಸ್ ಆಗಲಿದೆ.

Please Wait while comments are loading...
Opinion Poll

Social Counting