ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ Poco M7 5G ಫೋನಿನ ವೈಶಿಷ್ಟ್ಯಗಳು ಅನಾವರಣ!
ಡಿಸೆಂಬರ್ 2023 ರಲ್ಲಿ ಭಾರತದಲ್ಲಿ ಅನಾವರಣಗೊಂಡು ಯಶಸ್ವಿಯಾಗಿದ್ದ Poco M6 5G ಯ ಉತ್ತರಾಧಿಕಾರಿಯಾಗಿ ಬರುತ್ತಿರುವ ಬಹುನಿರೀಕ್ಷಿತ 'Poco M7 5G' ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಯಲ್ಲಿ ಇದೇ ಮಾರ್ಚ್ 3 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಗೊಳ್ಳುತ್ತಿರುವುದು ಈಗಾಗಲೇ ನಿಮಗೆ ತಿಳಿದಿರಬಹುದು. ಇದೀಗ ಬಿಡುಗಡೆಗೂ ಎರಡು ದಿನಗಳ ಮೊದಲೇ Poco ಕಂಪನಿಯು ತನ್ನ ಮುಂಬರುವ Poco M7 5G ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ, ಕ್ಯಾಮೆರಾ, ಬ್ಯಾಟರಿ, ಚಾರ್ಜಿಂಗ್ ಮತ್ತು ಬಿಲ್ಡ್ ವಿವರಗಳನ್ನು ಒಳಗೊಂಡಂತೆ ಹಲವಾರು ಇತರ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ.! ಈ ಮೂಲಕ ದೇಶದಲ್ಲಿ Poco M7 5G ಸ್ಮಾರ್ಟ್‌ಫೋನ್ ಕುರಿತು ಜನರ ಗಮನಸೆಳೆಯಲು ಕಂಪೆನಿ ಮುಂದಾಗಿದೆ. ಹಾಗಾದರೆ, ಮುಂಬರುವ 'Poco M7 5G' ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು ಹೇಗಿವೆ ಮತ್ತು ಬೆಲೆ ಎಷ್ಟಿರಲಿದೆ ಎಂಬುದನ್ನು ನೋಡೋಣ ಬನ್ನಿ.
Poco M7 5G ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳು
ಮಾರುಕಟ್ಟೆಗೆ ಬರುವುದಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವ Poco M7 5G ಸ್ಮಾರ್ಟ್‌ಫೋನ್, ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್ ಅನ್ನು ಹೊಂದಿರುವುದನ್ನು ಕಂಪನಿಯು ದೃಢಪಡಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಪ್ರಕಟಿತ ಜಾಹಿರಾತು ಪ್ರಕಾರ, Poco M7 5G ಸ್ಮಾರ್ಟ್‌ಫೋನ್ 6.88-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.
ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒದಗಿಸುತ್ತದೆ, ಇದು ಸುಗಮವಾದ ಸ್ಕ್ರೋಲಿಂಗ್ ಮತ್ತು ಸ್ಪಂದನಶೀಲ ಟಚ್ ಇನ್‌ಪುಟ್‌ಗಳನ್ನು ಖಚಿತಪಡಿಸುತ್ತದೆ. 600 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಮತ್ತು TÜV ರೈನ್‌ಲ್ಯಾಂಡ್‌ನಿಂದ ಮೂರು ಪ್ರಮಾಣೀಕರಣಗಳನ್ನು ಹೊಂದಿರುವ ಈ ಡಿಸ್ಪ್ಲೇ ಉತ್ತಮ ಗುಣಮಟ್ಟವನ್ನು ಒದಗಿಸುತ್ತದೆ ಎಂದು ಕಂಪನಿಯು ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, Poco M7 5G ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಸೋನಿ IMX852 ಮುಖ್ಯ ಸಂವೇದಕವನ್ನು ಒಳಗೊಂಡ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಜೊತೆಗೆ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇದೆ. ಈ ಕ್ಯಾಮೆರಾಗಳು 30fps ನಲ್ಲಿ 1080p ವೀಡಿಯೊವನ್ನು ರೆಕಾರ್ಡ್ ಮಾಡಲು ಸಹಾಯ ಮಾಡುತ್ತವೆ ಎಂದು ಕಂಪನಿಯು ತಿಳಿಸಿದೆ.
ಈ ಸ್ಮಾರ್ಟ್‌ಫೋನಿನಲ್ಲಿ 5,160mAh ಸಾಮರ್ಥ್ಯದ ಬ್ಯಾಟರಿ ಇದೆ, ಇದು 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 5,160mAh ಬ್ಯಾಟರಿಯು ಈ ಸ್ಮಾರ್ಟ್‌ಫೋನ್ ಒಂದೇ ಚಾರ್ಜ್‌ನಲ್ಲಿ 12 ಗಂಟೆಗಳ ವೀಡಿಯೊ ಸ್ಟ್ರೀಮಿಂಗ್ ಅಥವಾ 56 ಗಂಟೆಗಳ ಧ್ವನಿ ಕರೆ ನೀಡುತ್ತದೆ ಎಂದು ಕಂಪನಿಯು ಹೇಳಿದೆ.
ಉತ್ತಮ ಕಾರ್ಯಕ್ಷಮತೆ ಮತ್ತು 5G ಸಂಪರ್ಕವನ್ನು ಒದಗಿಸುವ Poco M7 5G ಸ್ಮಾರ್ಟ್‌ಫೋನ್, ಧೂಳು ಮತ್ತು ನೀರಿನ ವಿರುದ್ಧ IP52 ರೇಟಿಂಗ್ ಹೊಂದಿದ್ದು, ಇದರಿಂದ ಇದರ ಬಾಳಿಕೆ ಮತ್ತು ದೀರ್ಘಾಯುಷ್ಯ ಖಚಿತವಾಗುತ್ತದೆ ಎಂದು ಕಂಪನಿಯು ತಿಳಿಸಿದೆ.
Poco M7 5G ಸ್ಮಾರ್ಟ್‌ಫೋನಿನ ಬೆಲೆ ಎಷ್ಟು ಇರಬಹುದು?
ಇದೇ ಮಾರ್ಚ್ 3 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಗೊಳ್ಳುವ ಹೊಸ Poco M7 5G ಸ್ಮಾರ್ಟ್‌ಫೋನಿನ ಬೆಲೆ 10,000 ರೂ. ಕ್ಕಿಂತ ಕಡಿಮೆ ಇರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ದೇಶದಲ್ಲಿ ಖರೀದಿಸಲು ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಮಿಂಟ್ ಗ್ರೀನ್, ಓಷನ್ ಬ್ಲೂ ಮತ್ತು ಸ್ಯಾಟಿನ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ದೊರೆಯಲಿದೆ.


Click it and Unblock the Notifications








