ವರ್ಝೊ ಪರಿಚಯಿಸಿದೆ ಸೂಪರ್ ಸ್ಮಾರ್ಟ್ ಫೋನ್

Posted By: Staff
ವರ್ಝೊ ಪರಿಚಯಿಸಿದೆ ಸೂಪರ್ ಸ್ಮಾರ್ಟ್ ಫೋನ್

ಮೊಬೈಲ್ ಮಾರುಕಟ್ಟೆ ಸಾಕಷ್ಟು ಬೆಳೆಯುತ್ತಿದೆ. ಈ ಸಮಯದಲ್ಲಿ ವಿವಿಧ ಕಂಪನಿಗಳು ಗ್ರಾಹಕರನ್ನು ಆಕರ್ಷಣೆಗೊಳಿಸಲು ವಿಶೇಷ ವಿನ್ಯಾಸಗಳೊಂದಿಗೆ ಅತ್ಯುತ್ತಮ ಆಯ್ಕೆಗಳನ್ನೂ ಹೊಂದಿರುವ ಮೊಬೈಲ್ ಗಳನ್ನು ಪರಿಚಯಿಸುತ್ತಿದೆ. ಇದೀಗ ಆ ಸಾಲಿಗೆ ವರ್ಝೊ ಕಂಪನಿ ಸೇರಿಕೊಂಡಿದೆ.

ಅಮೆರಿಕದ ಮೊಬೈಲ್ ತಯಾರಕ ವರ್ಝೊ ಕಂಪನಿ ಆಂಡ್ರಾಯ್ಡ್ ಬೆಂಬಲಿತವಾಗಿರುವ ಕಿಂಝೊ ಎಂಬ ಮೊಬೈಲ್ ಮೂಲಕ ಮಾರುಕಟ್ಟೆಯಲ್ಲಿ ಸುದ್ದಿ ಮಾಡಲು ಹೊರಟಿದೆ. ಆಂಡ್ರಾಯ್ಡ್ ಫ್ರೊಯೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ಗ್ರಾಹಕರನ್ನು ತೃಪ್ತಿ ಪಡಿಸುವುದರಲ್ಲಿ ಸಂಶಯವಿಲ್ಲ ಎನ್ನುವುದು ಕಂಪನಿ ಮಾತು. ಈ ಕಿಂಝೊ ಮೊಬೈಲ್ ಟೆಕ್ಸಾಸ್ ಇನ್ಸ್ ಟ್ರುಮೆಂಟ್ OMAP3630 1GHz ಸಿಂಗಲ್ ಕೋರ್ ಪ್ರೊಸೆಸರ್ ಪಡೆದುಕೊಂಡಿದೆ.

ಸಾಮಾಜಿತ ತಾಣಗಳನ್ನು ಗಮನದಲ್ಲಿಟ್ಟುಕೊಂಡು ಈ ಫೋನನ್ನು ಪರಿಚಯಿಸಿರುವುದರಿಂದ ಕಿಂಝೊ ಮೊಬೈಲನ್ನು 'ಕಮ್ಯುನಿಟಿ ಡ್ರೈವನ್ ಸ್ಮಾರ್ಟ್ ಫೋನ್' ಎಂದು ಕರೆಯಲಾಗಿದೆ. ಟೆಲ್ ಮಿ ಎಂಬ ಅಪ್ಲಿಕೇಶನ್ ಇರುವುದು ಈ ಫೋನ್ ನ ಇನ್ನೊಂದು ವಿಶೇಷತೆ. ನೇವಿಗೆಶನ್ ಗೆಂದು ಆಫ್ ಲೈನ್ ಸಾಫ್ಟ್ ವೇರ್ ಸೈಜಿಕ್ ಕೂಡ ಇದರಲ್ಲಿ ಲಭ್ಯವಿದೆ.

ಕಿಂಝೊ ಮೊಬೈಲ್ ವಿಶೇಷತೆ:

* WVGA 4.3 ಇಂಚಿನ ಡಿಸ್ಪ್ಲೇ

* 512ಎಂಬಿ RAM ಸಾಮರ್ಥ್ಯ

* 5 ಮೆಗಾ ಪಿಕ್ಸಲ್ ಕ್ಯಾಮೆರಾ , ಆಟೊ ಫೋಕಸ್

*  VGA 0.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ

* ಬ್ಲೂಟೂಥ್, ವೈ-ಫೈ, ಟ್ರೈ-ಬ್ಯಾಂಡ್ UMTS ಮತ್ತು GSM ಕ್ವಾಡ್ ಬ್ಯಾಂಡ್

* ಪ್ರಾಕ್ಸಿಮಿಟಿ ಸೆನ್ಸಾರ್, ಲೈಟ್ ಸೆನ್ಸಾರ್, ಅಕ್ಸೆಲೆರೊಮೀಟರ್

1590 mAh ಬ್ಯಾಟರಿ ಹೊಂದಿರುವ ಕಿಂಝೊ ಮೊಬೈಲ್ 9 ಗಂಟೆ ಟಾಕ್ ಟೈಂ ಮತ್ತು 360 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಮೊಬೈಲೊಂದಿಗೆ ಕಾರ್ ಚಾರ್ಜರ್, ಕಾರ್ ಹೋಲ್ಡರ್, ಇಯರ್ ಫೋನ್ ಮತ್ತು ಲೆದರ್ ಕೇಸ್ ಕೂಡ ನೀಡಲಾಗುತ್ತದೆ.

ಆದರೆ ಭಾರತಕ್ಕೆ ಕಿಂಝೋ ಎಂದು ಬರಲಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಜೊತೆಗೆ ಇದರ ಬೆಲೆಯೂ ಭಾರತಕ್ಕೆ ಬಂದ ನಂತರವಷ್ಟೇ ನಿಖರವಾಗಿ ತಿಳಿದುಬರಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot