ಕೆಎಸ್‌ಆರ್‌ಟಿಸಿಯಿಂದ ಆಂಡ್ರಾಯ್ಡ್ ಆಪ್‌ ಬಿಡುಗಡೆ

Posted By:

ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡಿಕೊಂಡು ಬಂದಿರುವ ಕೆಎಸ್‌ಆರ್‌ಟಿಸಿ ಈಗ ಮತ್ತೊಂದು ಸೇವೆಯನ್ನು ಆರಂಭಿಸಿದೆ. ಕೆಎಸ್‌ಆರ್‌ಟಿಸಿ ಸುಲಭವಾಗಿ ಆನ್‌ಲೈನ್‌ಲ್ಲಿ ಟಿಕೆಟ್‌ ಬುಕ್‌ ಮಾಡಲು ಗೂಗಲ್‌ ಆಂಡ್ರಾಯ್ಡ್ ಆಪ್‌ನ್ನು ಬಿಡುಗಡೆ ಮಾಡಿದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇದುವರೆಗೆ ಕೆಎಸ್‌ಆರ್‌ಟಿಸಿ ಹೆಸರಿನಲ್ಲಿ ಬೇರೆ ಬೇರೆ ಆಪ್‌ಗಳಿದ್ದು ಇದರಲ್ಲಿ ಕೆಎಸ್‌ಆರ್‌ಟಿಸಿಯ ಅಧಿಕೃತ ಆಪ್‌ ಯಾವುದು ಎನ್ನುವುದರ ಬಗ್ಗೆ ಗೊಂದಲವಿತ್ತು. ಈಗ ಈ ಗೊಂದಲವನ್ನು ಕೆಎಸ್‌ಆರ್‌ಟಿಸಿ ನಿವಾರಿಸಿದೆ. ಪ್ರಯಾಣಿಕರು ಈ ಆಪ್‌ ಡೌನ್‌ಲೋಡ್‌ ಮಾಡಿಕೊಂಡು ಟಿಕೆಟ್‌ ಬುಕ್ಕಿಂಗ್‌, ಇದುವರಗಿನ ಟಿಕೆಟ್‌ ಬುಕ್ಕಿಂಗ್‌ ಜೊತೆಗೆ ಇಲ್ಲೇ ಟಿಕೆಟ್‌ನ್ನು ರದ್ದು ಸಹ ಮಾಡಬಹುದಾಗಿದೆ.

ಕೆಎಸ್‌ಆರ್‌ಟಿಸಿಯಿಂದ ಆಂಡ್ರಾಯ್ಡ್ ಆಪ್‌ ಬಿಡುಗಡೆ

ಪ್ರಯಾಣಿಕರನ್ನು ಸೆಳೆಯಲು ನಾನಾ ಯೋಜನೆಗಳನ್ನು ಹಮ್ಮಿಕೊಂಡಿರುವ ಕೆಎಸ್‌ಆರ್‌ಟಿಸಿ ಇತ್ತೀಚಿಗಷ್ಟೇ ಆನ್‌ಲೈನ್‌ನಲ್ಲಿ ಅತೀ ಹೆಚ್ಚು ಟಿಕೆಟ್‌ ಬುಕ್ಕಿಂಗ್‌ ಮಾಡಿರುವ ಪ್ರಯಾಣಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಹ ಆಯೋಜಿಸಿತ್ತು. ಅಷ್ಟೇ ಅಲ್ಲದೇ ಟ್ವೀಟರ್‌,ಫೇಸ್‌ಬುಕ್‌, ಮಾಹಿತಿ ನೀಡಿ ಜನರನ್ನು ಸೆಳೆಯುತ್ತಿರುವ ಕೆಎಸ್‌ಆರ್‌ಟಿಸಿ ಈಗ ಆಪ್‌ ಬಿಡುಗಡೆ ಮಾಡಿ ಪ್ರಯಾಣಿಕರಿಗೆ ಟಿಕೆಟ್‌ ಬುಕ್ಕಿಂಗ್‌ ಕೆಲಸವನ್ನು ಸುಲಭಗೊಳಿಸಿದೆ.

ಕೆಎಸ್‌ಆರ್‌ಟಿಸಿ ಆಂಡ್ರಾಯ್ಡ್ ಆಪ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ: KSRTC Official App

ಇದನ್ನೂ ಓದಿ: ಒನ್ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot