Subscribe to Gizbot

ಕೂಲ್‌ ಡಿವೈಸ್ ಆಗಿ ಲಾವಾ 3 ಜಿ

Written By:

ಕಳೆದ ತಿಂಗಳಷ್ಟೇ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಲಾವಾ ತನ್ನ ಭಾರೀ ನಿರೀಕ್ಷೆಯ ಲಾವಾ ಐರಿಸ್ 406Q ಅನ್ನು ಹೊರತಂದಿತ್ತು ಮತ್ತು ಇದರ ಬೆಲೆಯನ್ನು ನಿಗದಿಪಡಿಸಿರಲಿಲ್ಲ ಆದರೆ ಈಗ ಮಾರುಕಟ್ಟೆಯಲ್ಲಿ ಇದೆ ಬೆಲೆ ನಿಶ್ಚಯವಾಗಿದ್ದು ರೂ. 6,999 ಕ್ಕೆ ಇದು ನಿಮ್ಮ ಕೈಗೆಟುಕಲಿದೆ.

ಇದೇ ಹೊತ್ತಿಗೆ ಕಂಪೆನಿ ಕೂಡ ಇನ್ನೊಂದು ಹೊಸದಾದ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಬಗ್ಗೆ ಮಾಹಿತಿಯನ್ನು ನೀಡಿದೆ. ಇದು ಬಿಳಿ ಹಾಗೂ ಚಿನ್ನದ ಬಣ್ಣದ ಕೇಸಿಂಗ್‌ನಲ್ಲಿ ಲಭ್ಯವಾಗಲಿದ್ದು ಇದು ಇನ್ನೂ ಮಾರಾಟಕ್ಕೆ ಬಂದಿಲ್ಲ.

ಕೂಲ್‌ ಡಿವೈಸ್ ಆಗಿ ಲಾವಾ 3 ಜಿ

ಈ ಫೋನ್ ಅನ್ನು ಕಂಪೆನಿಯ ಹಿಂದಿನ ಯಶಸ್ವಿ ಫೋನ್ ಆದ ಐರಿಸ್ 354ಇ ನ ಹೆಗ್ಗಳಿಕೆಯ ಗುರುತಾಗಿ ಹೊರತರಲಾಗಿದೆ. ಇದು 3 ಜಿ ವಿಶೇಷತೆಯನ್ನು ಹೊಂದಿದ್ದು ನೋಡಲು ಕೂಲ್ ಆಗಿದೆ. ಲಾವಾ 3ಜಿ 354 ಸಣ್ಣ 3.5 ಇಂಚಿನ (320 x 480 pixels) ಸಾಮರ್ಥ್ಯವುಳ್ಳ ಪರದೆಯನ್ನು ಹೊಂದಿದ್ದು 1GHz ಡ್ಯುಯೆಲ್ ಕೋರ್ ಪ್ರೊಸೆಸರ್ ಇದರಲ್ಲಿದೆ. 256 ಎಂಬಿ ರ್‌ಯಾಮ್ ಇದರ ವಿಶೇಷತೆಯಾಗಿದ್ದು ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್) ಓಎಸ್ ಇದರಲ್ಲಿ ಚಾಲನೆಯಾಗುತ್ತದೆ.

ಲಾವಾ ಈ ಫೋನ್‌ನಲ್ಲಿ ಡ್ಯುಯೆಲ್ ಕ್ಯಾಮೆರಾವನ್ನು ನೀಡಿದ್ದು ಬಳಕೆದಾರರಿಗೆ ಇದರಿಂದ ಉತ್ತಮ ಫೋಟೋಗಳನ್ನು ತೆಗೆಯಬಹುದಾಗಿದೆ. ಆಂತರಿಕ ಸಾಮರ್ಥ್ಯ 2ಜಿಬಿಯಾಗಿದ್ದು ಮೆಮೊರಿ ಸ್ಲಾಟ್ ಅನ್ನು ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು. ಫೋನ್‌ನ ಸಂಪರ್ಕ ವ್ಯವಸ್ಥೆಗಳು 3ಜಿ, ವೈಫೈ 802.11 b/g/n ಹಾಗೂ ಬ್ಲೂಟೂತ್ ಆಗಿದೆ. ಇದರಲ್ಲಿ ನೀವು ಡ್ಯುಯೆಲ್ ಸಿಮ್ ಅನ್ನು ಕೂಡ ಬಳಸಬಹುದಾಗಿದ್ದು ಇದು ನಿಜಕ್ಕೂ ಕೂಲ್ ಆಗಿದೆ.

ಇದರ ದಪ್ಪ 11.8 mm ಆಗಿದ್ದು ತೂಕ 103.8 ಗ್ರಾಮ್ ಆಗಿದೆ ಹಾಗೂ 1400 mAh ಬ್ಯಾಟರಿ ಇದರಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot