ಲಾವಾದಿಂದ ಬರಲಿದೆ MTV ಮೊಬೈಲ್

Posted By: Staff
ಲಾವಾದಿಂದ ಬರಲಿದೆ MTV ಮೊಬೈಲ್

ಲಾವಾ ಕಂಪನಿ ಮಾರುಕಟ್ಟೆಗೆ ಹಲವು ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದೆ. ಉತ್ತಮ ಬೆಲೆಗೆ ಅನೇಕ ಆಯ್ಕೆಗಳನ್ನು ನೀಡುತ್ತಿರುವುದೇ ಕಂಪನಿಯ ಯಶಸ್ಸಿಗೆ ಕಾರಣವೆನ್ನಬಹುದು.

ಲಾವಾ ಮೊಬೈಲ್ ಕಂಪನಿ MTV ಇಂಡಿಯಾ ಜೊತೆಗೂಡಿ ಲಾವಾ A16 MTV ಎಂಬ ಮೊಬೈಲನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಈ ಮೊಬೈಲ್ ನಲ್ಲಿ ಆನಿಮೇಟೆಡ್ ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ ನೀಡಲಾಗಿದೆ.

ಲಾವಾ A16 MTV ಮೊಬೈಲ್ ವಿಶೇಷತೆ:

* 2.6 ಇಂಚಿನ IPS ಸ್ಕ್ರೀನ್

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* ಯಮಾಹಾ ಪೋರ್ಟಬಲ್ ಆಡಿಯೋ ಸಿಸ್ಟಮ್

* SRS WOW HD ಹೊಂದಿರುವ ಇಯರ್ ಫೋನ್

* ಸಾಮಾಜಿಕ ತಾಣಗಳ ಅಪ್ಲಿಕೇಶನ್

ತುಂಬಾ ಸ್ಟೈಲಿಶ್ ಮತ್ತು ಸುಂದರವಾಗಿರುವ ಈ ಲಾವಾ ಮೊಬೈಲ್ ಬಾರ್ ಫೋನ್ ಮಾದರಿಯಲ್ಲಿದೆ. ಈ ಲಾವಾ A16 MTV ಮೊಬೈಲ್ 4,000 ರೂಪಾಯಿಗೆ ನಿಮಗೆ ಲಭ್ಯವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot