Home
ಮೊಬೈಲ್

Lava: ಬರ್ತಿದೆ ಹೊಸ 5G ಫೋನ್; ಬಿಡುಗಡೆ ದಿನಾಂಕ ಘೋಷಣೆ.. ಬೆಲೆ, ವಿಶೇಷತೆಗಳೇನು?

ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿ ಲಾವಾ (Lava) ಶೀಘ್ರದಲ್ಲೇ ಅಗ್ನಿ (Agni) ಸರಣಿಯಲ್ಲಿ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಮೊಬೈಲ್ ಲಾವಾ ಅಗ್ನಿ 3 (Lava Agni 3 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಫೋನ್ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕಂಪನಿಯು ಇತ್ತೀಚೆಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ವೈಶಿಷ್ಟ್ಯಗಳು ಮತ್ತು ಬಿಡುಗಡೆ ದಿನಾಂಕವನ್ನು ತಿಳಿಯೋಣ.

ಲಾವಾ ಅಗ್ನಿ 3 5G ಫೋನ್ MediaTek Dimensity 7200 ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಇದು 6.78 ಇಂಚಿನ 1.5K ಕರ್ವ್ಡ್ OLED ಡಿಸ್ಪ್ಲೇಯನ್ನು ಒಳಗೊಂಡೊದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಕಂಪನಿಯು ನೂತನ ಫೋನನ್ನು 4,700mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಇದು 67 ವ್ಯಾಟ್ ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಲಾಂಚ್‌ಗೆ ಸಿದ್ಧವಾಗಿದೆ.

Lava: ಬರ್ತಿದೆ ಹೊಸ 5G ಫೋನ್; ಬಿಡುಗಡೆ ದಿನಾಂಕ ಘೋಷಣೆ.. ಬೆಲೆ ಎಷ್ಟು?

ಲಾವಾ ಅಗ್ನಿ 3 5G ಫೋನಿನ ಭಾರತ ಬಿಡುಗಡೆ ದಿನಾಂಕ

ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್ ಅಕ್ಟೋಬರ್ 4 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ ಬಿಡುಗಡೆ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ಇದೇ ಸಮಾರಂಭದಲ್ಲಿ ಲಾವಾ ಅಗ್ನಿ 3 5G (Lava Agni 3 5G) ಬೆಲೆ, ಲಭ್ಯತೆ ಮತ್ತು ಫೀಚರ್ಸ್‌ಗಳನ್ನು ಬಹಿರಂಗಪಡಿಸಲಾಗುವುದು.

ಲಾವಾ ಅಗ್ನಿ 3 5G ಬಿಡುಗಡೆ ಕಾರ್ಯಕ್ರಮವು ಅಕ್ಟೋಬರ್ 4 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಲಾವಾ ಕಂಪನಿಯ ವೆಬ್‌ಸೈಟ್, ಯೂಟ್ಯೂಬ್ ಪ್ಲಾಟ್‌ಫಾರ್ಮ್ ಮತ್ತು ಕಂಪನಿಯ ಎಲ್ಲಾ ಇತರೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಾಂಚ್ ಈವೆಂಟ್ ಅನ್ನು ಲೈವ್ ಆಗಿ ವೀಕ್ಷಿಸಬಹುದು.

ಲಾವಾ ಅಗ್ನಿ 3 5G ಬೆಲೆ ಎಷ್ಟಿರಲಿದೆ?

ಕಂಪನಿಯು ಲಾವಾ ಅಗ್ನಿ 3 5G ಫೋನಿನ ಬೆಲೆ ವಿವರಗಳನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ, ಸೋರಿಕೆಯ ಪ್ರಕಾರ ಲಾವಾ ಅಗ್ನಿ 3 5G ಫೋನಿನ ಆರಂಭಿಕ ಬೆಲೆ 21,990 ರೂ. ಇರಲಿದೆ. ರಿಯಾಯಿತಿ ಮತ್ತು ಬ್ಯಾಂಕ್ ಕಾರ್ಡ್ ಆಫರ್‌ಗಳೊಂದಿಗೆ ಈ ಫೋನ್ 19,999 ರೂ.ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಲಾವಾ ಅಗ್ನಿ 3 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಲಾವಾ ಅಗ್ನಿ 3 5G ಫೋನ್ 6.78 ಇಂಚಿನ ಪಂಚ್-ಹೋಲ್ OLED ಡಿಸ್ಪ್ಲೇಯನ್ನು ಹೊಂದಿದೆ. 1.5K ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ.

ಪ್ರೊಸೆಸರ್: ಲಾವಾ ಅಗ್ನಿ 3 5G ಮೊಬೈಲ್ MediaTek Dimension 7200 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗುತ್ತದೆ. ಇದರ ಗರಿಷ್ಠ ಗಡಿಯಾರದ ವೇಗ 2.5 GHz ಆಗಿದೆ.

ಸ್ಟೋರೇಜ್: ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್ 8GB LPDDR4X RAM, 256GB UFS 3.1 ಸ್ಟೋರೇಜ್, 8GB ವರ್ಚುವಲ್ RAM ನೊಂದಿಗೆ ಬಿಡುಗಡೆಯಾಗಲಿದೆ.

ಕ್ಯಾಮೆರಾ: ಲಾವಾ ಅಗ್ನಿ 3 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದು 50 ಮೆಗಾಪಿಕ್ಸೆಲ್ ಸೋನಿ OIS ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: ಲಾವಾ ಅಗ್ನಿ 3 5G ಫೋನ್ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 67 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ಸಾಧ್ಯತೆಯಿದೆ.

Best Mobiles in India

English summary
lava agni 3 5g india launch date confirmed: price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+