Lava: ಹೊಸ 5G ಫೋನ್ ಲಾಂಚ್: ಡ್ಯುಯಲ್ ಡಿಸ್ಪ್ಲೇ, 50MP ಕ್ಯಾಮೆರಾ.. ಬೆಲೆ ಎಷ್ಟು?
ಲಾವಾ (Lava) ಕಂಪನಿಯು ತನ್ನ ಅಗ್ನಿ (Agni) ಸರಣಿಯಲ್ಲಿ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಲಾವಾ ಅಗ್ನಿ 3 5G (Lava Agni 3 5G) ಹೆಸರಿನೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಲಾವಾ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಸೆಕೆಂಡರಿ ಸ್ಕ್ರೀನ್ ಜೊತೆಗೆ ಡ್ಯುಯಲ್ ಡಿಸ್ಪ್ಲೇ ಹೊಂದಿದೆ. ವಿಶೇಷವೆಂದರೆ, ಐಫೋನ್ 15 ಪ್ರೊ ಮತ್ತು ಐಫೋನ್ 16 ಸರಣಿಯಂತೆಯೇ ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಕೀಯನ್ನು ಒಳಗೊಂಡಿದೆ. ಬನ್ನಿ, ಹೊಸ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಅಧಿಕೃತವಾಗಿ ಲಾವಾ ಅಗ್ನಿ 3 5G ಬೆಲೆ ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಫೋನ್ 6.78 ಇಂಚಿನ 3D ಕರ್ವ್ಡ್ ಪ್ರಾಥಮಿಕ ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಜೊತೆಗೆ, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 5000mAh ಬ್ಯಾಟರಿ, 66W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೀಶೇಷತೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಲಾವಾ ಅಗ್ನಿ 3 5G ಫೋನಿನ ಬೆಲೆ ಮತ್ತು ಲಭ್ಯತೆ
8GB + 128GB (ಚಾರ್ಜರ್ ಇಲ್ಲದೆ) = 20,999 ರೂ.
8GB + 128GB (ಚಾರ್ಜರ್‌ನೊಂದಿಗೆ) = 22,999 ರೂ.
8GB + 256GB (ಚಾರ್ಜರ್‌ನೊಂದಿಗೆ) = 24,999 ರೂ.
ಲಾವಾ ಅಗ್ನಿ 3 5G ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಫೋನಿನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 20,998 ರೂ. ಆಗಿದೆ. 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 24,998 ರೂ. ಇದೆ. ನೀವು, ಅಮೆಜಾನ್‌ನಲ್ಲಿ 499 ರೂ.ಗಳಲ್ಲಿ ಮುಂಗಡ ಬುಕಿಂಗ್ ಮಾಡಬಹುದು. ಈ ಫೋನ್ ಅಕ್ಟೋಬರ್ 9 ರಂದು ಮಾರಾಟವಾಗಲಿದೆ. ನೀವು ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಬಣ್ಣಗಳಲ್ಲಿ ಖರೀದಿಸಬಹುದು.
ಲಾವಾ ಅಗ್ನಿ 3 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ನೂತನ ಲಾವಾ ಅಗ್ನಿ 3 5G ಫೋನ್ 6.78 ಇಂಚಿನ 1.5K 3D ಕರ್ವ್ಡ್ ಪ್ರಾಥಮಿಕ ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಹಿಂಭಾಗದಲ್ಲಿ 1.74 ಇಂಚಿನ AMOLED ಡಿಸ್ಪ್ಲೇಯನ್ನು ನೀಡಲಾಗಿದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಚಿಪ್‌ಸೆಟ್ ಮೊಟೊರೊಲಾ ರೇಜರ್ 50 ಫೋಲ್ಡಬಲ್‌ನಲ್ಲಿ ಕಾಣಬಹುದು. ಈ ಫೋನ್ 8GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು 8GB ವರ್ಚುವಲ್ RAM ಅನ್ನು ಸಹ ಹೊಂದಿದೆಎ.
ಈ ಸುದ್ದಿ ಓದಿದ್ದೀರಾ?: ಇಲ್ಲಿ ಕೇಳಿ! ಇನ್ಮುಂದೆ 60 ಸೆಕೆಂಡ್ ಅಲ್ಲ.. 3 ನಿಮಿಷಗಳ YouTube Shorts ಹಾಕಬಹುದು!
ಕ್ಯಾಮೆರಾ: ಲಾವಾ ಅಗ್ನಿ 3 5G ಮೊಬೈಲ್ OIS + EIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. 3X ಆಪ್ಟಿಕಲ್ ಜೂಮ್ + EIS ಜೊತೆಗೆ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ EIS ಜೊತೆಗೆ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಕಂಪನಿಯು ಲಾವಾ ಅಗ್ನಿ 3 5G ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 66W ವೇಗದ ಚಾರ್ಜಿಂಗ್ ಬೆಂಬಲ ನೀಡಲಾಗಿದೆ.
ಸಾಫ್ಟ್‌ವೇರ್: ಈ ಹೊಸ ಲಾವಾ ಫೋನ್ ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ. ನೀವು, ಎರಡು ಆಂಡ್ರಾಯ್ಡ್ ನವೀಕರಣಗಳನ್ನು (ಆಂಡ್ರಾಯ್ಡ್ 15, 16, 17) ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯಬಹುದು. ಇತರೆ ವೈಶಿಷ್ಟ್ಯಗಳಲ್ಲಿ ಈ ಫೋನ್ Dolby Atmos, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು ದೊಡ್ಡ ವೇಪರ್ ಚೇಂಬರ್ ಕೂಲಿಂಗ್ ಜೊತೆಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.


Click it and Unblock the Notifications








