ಶೀಘ್ರದಲ್ಲೇ Lava Agni 4 5G ಫೋನ್ ಆಗಮನ ಖಚಿತ!..ಏನೆಲ್ಲಾ ಫೀಚರ್ಸ್ ಇವೆ ನೋಡಿ!
ಭಾರತೀಯ ಮೊಬೈಲ್ ಬ್ರಾಂಡ್ ಲಾವಾ (Lava) ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್ Lava Agni 4 5G ಬಿಡುಗಡೆಗೆ ಸಜ್ಜಾಗಿದೆ. ಕಂಪನಿಯು ಅಧಿಕೃತವಾಗಿ ದಿನಾಂಕವನ್ನು ಘೋಷಿಸದಿದ್ದರೂ, ವರದಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್ ಮುಂದಿನ ತಿಂಗಳಲ್ಲಿ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಇತ್ತೀಚೆಗೆ ಈ Lava Agni 4 5G ಫೋನ್ BIS (Bureau of Indian Standards) ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ LXX525 ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದ್ದು, ಅದರ ಬಿಡುಗಡೆ ಸಮೀಪದಲ್ಲಿದೆ ಎಂಬುದನ್ನು ಸೂಚಿಸುತ್ತದೆ.
ಸರಿಸುಮಾರು ಒಂದು ವರ್ಷದ ಹಿಂದೆ 20 ಸಾವಿರ ಬೆಲೆಯಲ್ಲಿ Lava Agni 3 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಇದು 1.5K ಬಾಗಿದ AMOLED ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಪ್ರೊಸೆಸರ್ ಮತ್ತು 8MP ಟೆಲಿಫೋಟೋ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಹೊಂದಿರುವ 50MP ಟ್ರಿಪಲ್ ಹಿಂಬದಿಯ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ, 66W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ, ಡಾಲ್ಬಿ ಅಟ್ಮಾಸ್ ಸೌಂಡ್ ಮತ್ತು IP64 ಧೂಳು ಮತ್ತು ನೀರಿನ ಪ್ರತಿರೋಧ ರೇಟಿಂಗ್‌ನಂತಹ ಅತ್ಯುತ್ತಮ ಒಳಗೊಂಡಿತ್ತು.
ಇದೀಗ Lava Agni 4 5G ಸ್ಮಾರ್ಟ್‌ಫೋನ್ ಇನ್ನೂ ಹೆಚ್ಚಿನ ಫೀಚರ್ಸ್ ಹೊಂದಿರಬಹುದು. ಕೆಲವು ವರದಿಗಳಂತೆ, ಈ ಸ್ಮಾರ್ಟ್‌ಪೋನ್ ಹೊಂದಿರಬಹುದಾದ ಪ್ರಮುಖ ವೈಶಿಷ್ಟ್ಯಗಳು ಬಹಿರಂಗವಾಗಿವೆ. ಹಾಗಾದರೆ, ಮುಂಬರುವ Lava Agni 4 5G 5G ಸ್ಮಾರ್ಟ್‌ಫೋನ್ ಹೇಗಿರಲಿದೆ?, ಬೆಲೆ ಎಷ್ಟಿರಬಹುದು ಎಂಬುದನ್ನು ನೋಡೋಣ ಬನ್ನಿ.

Lava Agni 4 5G: ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳು
- ಹೊಸ Lava Agni 4 5G ಫೋನ್‌ನ ವಿನ್ಯಾಸವು ಹಳೆಯ LG ಸ್ಮಾರ್ಟ್‌ಫೋನ್‌ಗಳ ಹಾರಿಜಾಂಟಲ್ ಕ್ಯಾಮೆರಾ ಸೆಟಪ್ ನಂತಿರಲಿದೆ ಎಂದು ಹಲವಾರು ಟೆಕ್ ವರದಿಗಳು ಹೇಳುತ್ತವೆ.
- ಈ ಡಿಸೈನ್‌ನಲ್ಲಿ ಮಧ್ಯದಲ್ಲಿ LED ಫ್ಲ್ಯಾಶ್ ಜೊತೆಗೆ ಎರಡೂ ಬದಿಗಳಲ್ಲಿ ಕ್ಯಾಮೆರಾ ಸೆನ್ಸರ್‌ಗಳು ಇರಲಿವೆ ಎನ್ನಲಾಗಿದೆ.
- Lava Agni 4 5G ಫೋನ್‌ನಲ್ಲಿ 6.7 ಇಂಚಿನ FHD+ AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಇರಲಿದೆ.
- ಹಿಂದಿನ Lava Agni 3 ನಲ್ಲಿ ಇದ್ದ ಕರ್ವ್‌ಡ್ ಡಿಸ್ಪ್ಲೇ ಬದಲಿಗೆ, ಈ ಬಾರಿ ಫ್ಲಾಟ್ ಸ್ಕ್ರೀನ್ ವಿನ್ಯಾಸ ನೀಡಲಾಗುವ ಸಾಧ್ಯತೆ ಇದೆ.
- ಕಾರ್ಯಕ್ಷಮತೆ ವಿಭಾಗದಲ್ಲಿ, Lava Agni 4 5G 5G ನಲ್ಲಿ MediaTek Dimensity 8350 ಚಿಪ್‌ಸೆಟ್ ಬಳಸಲಾಗುತ್ತದೆ ಎಂದು ವರದಿಗಳು ಸೂಚಿಸುತ್ತವೆ.
- Lava Agni 4 5G ಫೋನ್‌ನಲ್ಲಿ ಬ್ಯಾಟರಿ ವಿಭಾಗದಲ್ಲಿ ದೊಡ್ಡ ಅಪ್‌ಗ್ರೇಡ್ ನಿರೀಕ್ಷಿಸಲಾಗಿದೆ . ಇದರಲ್ಲಿ 7,000mAh ಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಇರಬಹುದು ಎಂದು ಹೇಳಲಾಗಿದೆ.
- ಫೋಟೋಗ್ರಫಿ ಪ್ರಿಯರಿಗೆ, Lava Agni 4 5G ನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸರ್ ಇರಬಹುದು. ಸೆಲ್ಫಿ ಕ್ಯಾಮೆರಾ ಹಾಗೂ ವೀಡಿಯೊ ರೆಕಾರ್ಡಿಂಗ್ ವಿಭಾಗದಲ್ಲಿಯೂ ಉತ್ತಮ ಸುಧಾರಣೆ ನಿರೀಕ್ಷಿಸಲಾಗಿದೆ.
- ಇಷ್ಟೇ ಅಲ್ಲದೆ, ಈ ಫೋನ್ AI ಆಧಾರಿತ ಫೋಟೋ ಸಂಸ್ಕರಣಾ ತಂತ್ರಜ್ಞಾನ ಮತ್ತು ಇತರೆ AI ಪೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.
Lava Agni 4 5G: ಬಿಡುಗಡೆ ಮತ್ತು ಬೆಲೆ
ಲಾವಾ ಈಗಾಗಲೇ ತನ್ನ Agni ಸರಣಿಯ ಮೂಲಕ ಮಧ್ಯಮ ದರದ 5G ವಿಭಾಗದಲ್ಲಿ ಉತ್ತಮ ಹೆಸರನ್ನು ಗಳಿಸಿದೆ. ಇದೀಗ Agni 4 ಮೂಲಕ ಕಂಪನಿ ಈ ವಿಭಾಗದಲ್ಲಿ ಮತ್ತೊಂದು ಬಲಿಷ್ಠ ಆಯ್ಕೆಯನ್ನು ನೀಡುವ ತಯಾರಿಯಲ್ಲಿದೆ. ಲಾವಾ ನವೆಂಬರ್ 2025 ರಲ್ಲಿ ಅಗ್ನಿ 4 5G ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಧಿಕೃತ ಉಡಾವಣಾ ದಿನಾಂಕವನ್ನು ಘೋಷಿಸಲಾಗಿಲ್ಲವಾದರೂ, BIS ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಅದರ ಆಗಮನವು ಮುಂದಿನ ಕೆಲವು ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇನ್ನು ನಿರೀಕ್ಷಿತ ಬೆಲೆಯು ಸುಮಾರು 20 ರಿಂದ 25 ಸಾವಿರದ ವರೆಗೂ ಇರಬಹುದು.
ಒಟ್ಟಿನಲ್ಲಿ, Lava Agni 4 5G ಒಂದು ಭಾರತೀಯ ಕಂಪೆನಿಯ ತಯಾರಿಕೆಯ ಬಲಿಷ್ಠ ಫೋನ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ. ಉತ್ತಮ ಡಿಸ್ಪ್ಲೇ, ವೇಗದ ಪ್ರೊಸೆಸರ್ ಮತ್ತು ದೀರ್ಘಕಾಲ ಬ್ಯಾಟರಿಯ ಸಂಯೋಜನೆಯಿಂದ ಇದು ಮಧ್ಯಮ ದರದ 5G ವಿಭಾಗದಲ್ಲಿ ಸ್ಪರ್ಧೆಯನ್ನು ಹೆಚ್ಚಿಸಬಹುದು. ಅಲ್ಲವೇ?


Click it and Unblock the Notifications








