Home
ಮೊಬೈಲ್

Lava Agni 4: ಕಡಿಮೆ ಬೆಲೆಗೆ ಬರುತ್ತಿದೆ ಫ್ಲ್ಯಾಗ್‌ಶಿಪ್ ಲೆವೆಲ್ ಫೋನ್!

ಭಾರತೀಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Lava ತನ್ನ ಮುಂದಿನ ಪೀಳಿಗೆಯ Lava Agni 4 ಸ್ಮಾರ್ಟ್‌ಫೋನ್ ಅನ್ನು ಇದೇ ನವೆಂಬರ್ 20ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದಕ್ಕೂ ಮೊದಲೇ, ಕಂಪೆನಿಯು ಕಳೆದ ಕೆಲವು ದಿನಗಳಿಂದ ಈ Lava Agni 4 ಸ್ಮಾರ್ಟ್‌ಫೋನಿನ ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳ ಕುರಿತು ಹಂತ ಹಂತವಾಗಿ ಮಾಹಿತಿ ಹಂಚಿಕೊಂಡಿದ್ದು, ಇದೀಗ ಪ್ರೊಸೆಸರ್, RAM ಮತ್ತು ಸ್ಟೋರೇಜ್‌ ಬಗ್ಗೆ ಸಂಪೂರ್ಣ ವಿವರವನ್ನು ಬಹಿರಂಗಪಡಿಸಿದೆ. ಈ ಮೂಲಕ ಇದು ಕಂಪೆನಿಯ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ ಆಗಿ ಬರುವ ಸೂಚನೆ ದೊರೆತಿದೆ.

Lava ತನ್ನ ಅಧಿಕೃತ X (ಹಳೆಯ Twitter) ಖಾತೆಯ ಮೂಲಕ ತಿಳಿಸಿದಂತೆ, Lava Agni 4 ಸ್ಮಾರ್ಟ್‌ಫೋನಿನಲ್ಲಿ ಅತ್ಯಾಧುನಿಕ MediaTek Dimensity 8350 ಚಿಪ್‌ಸೆಟ್ ಬಳಸಲಾಗಿದೆ. ಇದರೊಂದಿಗೆ LPDDR5x RAM ಮತ್ತು UFS 4.0 ಸ್ಟೋರೇಜ್ ಲಭ್ಯವಿರಲಿದೆ. ಈ ತಂತ್ರಜ್ಞಾನವನ್ನು ಸಾಮಾನ್ಯವಾಗಿ ಮಿಡ್‌ರೇಂಜ್ ಮೇಲಿನ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಮಾತ್ರ ಕಾಣಬಹುದು. ಇದರಿಂದಾಗಿ Lava Agni 4 ಸ್ಮಾರ್ಟ್‌ಫೋನ್ ಲಾವಾ ಕಂಪೆನಿಯ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಲಿದೆ ಎಂದು ಹೇಳಬಹುದು. ಇದಕ್ಕೆ ಇನ್ನೂ ಹಲವಾರು ಕಾರಣಗಳಿವೆ.

ಈ Lava Agni 4 ಸ್ಮಾರ್ಟ್‌ಫೋನಿನ ಪ್ರೊಸೆಸರ್, RAM ಮತ್ತು ಸ್ಟೋರೇಜ್‌ ಮಾಹಿತಿ ಬಹಿರಂಗವಾಗುವ ಮೊದಲೇ, ಈ ಸ್ಮಾರ್ಟ್‌ಪೋನ್ 6.78 ಇಂಚಿನ Full HD+ ಡಿಸ್‌ಪ್ಲೇ ಹೊಂದಿರುವುದನ್ನು ಮತ್ತು ಇದು 120Hz ರಿಫ್ರೆಶ್ ರೇಟ್ ಬೆಂಬಲಿಸುವುದನ್ನು ಖಚಿತಪಡಿಸಲಾಗಿದೆ. ಇದರಿಂದ ಗೇಮಿಂಗ್‌ಗೂ ಸಹ ಈ ಫೋನ್ ತಯಾರಾಗಿದೆ ಎಂದು ಹೇಳಲಾಗುತ್ತಿದೆ. ವಿನ್ಯಾಸದ ವಿಷಯದಲ್ಲಿ, ಈ Lava Agni 4 ಫೋನ್, ಈ ಹಿಂದಿನ ಮಾದರಿಗಳಲ್ಲಿ ಇದ್ದ ಪ್ಲಾಸ್ಟಿಕ್ ಬಾಡಿಯಿಗಿಂತ ವಿಭಿನ್ನವಾಗಿ ಈ ಬಾರಿ ಹೆಚ್ಚು ಪ್ರೀಮಿಯಂ ಫೀಲ್ ನೀಡುವ ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿದೆ ಎಂದು ತಿಳಿಸಲಾಗಿದೆ.

Lava Agni 4: ಕಡಿಮೆ ಬೆಲೆಗೆ ಬರುತ್ತಿದೆ ಫ್ಲ್ಯಾಗ್‌ಶಿಪ್ ಲೆವೆಲ್ ಫೋನ್!

ಫೋಟೊಗ್ರಫಿ ಪ್ರಿಯರಿಗಾಗಿ, Lava Agni 4 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಈ ಸೆನ್ಸರ್‌ಗಳು ಹೋರಿಜಂಟಲ್ ಪಿಲ್ ಆಕಾರದ ಕೇಮೆರಾ ಮೌಂಟ್‌ನಲ್ಲಿ ಇರಲಿದ್ದು, ಅದರ ಮೇಲ್ಭಾಗದಲ್ಲಿ ಡುಯಲ್ LED ಫ್ಲ್ಯಾಶ್ ಇರಲಿದೆ. ಮಧ್ಯಭಾಗದಲ್ಲಿ "AGNI" ಬ್ರಾಂಡಿಂಗ್ ಕೂಡ ಕಾಣಿಸಿಕೊಳ್ಳಲಿದೆ. ಈ ಫೋನಿನಲ್ಲಿ ಮೀಸಲಾದ ಕ್ಯಾಮೆರಾ ಬಟನ್ ಇರುವುದು ಖಚಿತವಾಗಿದೆ. ಬ್ಯಾಟರಿಯ ವಿಷಯದಲ್ಲಿ, ಈ ಫೋನ್‌ನಲ್ಲಿ 5,000mAh ಅಥವಾ 7,000 mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇರಲಿದ್ದು, ಇದು 66W ಫಾಸ್ಟ್ ಚಾರ್ಜಿಂಗ್‌ ಸಪೋರ್ಟ್ ಹೊಂದಿರಬಹುದು.

ಬೆಲೆ ವಿಭಾಗದಲ್ಲಿ, Lava Agni 4 ಸ್ಮಾರ್ಟ್‌ಫೋನ್ ಎಷ್ಟು ಬೆಲೆ ಹೊಂದಿರಬಹುದು ಎಂಬ ಕುರಿತು ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಆದರೆ, ಈ ಪೋನ್ 25 ಸಾವಿರ ಆಸುಪಾಸಿನಲ್ಲಿ ಬೆಲೆ ಹೊಂದಿರಲಿದೆ ಎಂದು ಹಲವಾರು ವರದಿಗಳು ಸೂಚಿಸಿವೆ. ಇತ್ತೀಚಿಗೆ, ಪ್ರಸಿದ್ಧ ಲೀಕ್ಸ್ಟರ್ ಪರಸ್ ಗುಗ್ಲಾನಿ (@passionategeekz) ಅವರು ಈ ಫೋನ್ ₹30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಲಿದೆ ಎಂದು ಹೇಳಿದ್ದಾರೆ. ಹಾಗಾಗಿ, ಮುಂಬರುವ Lava Agni 4 ಫೋನ್ ಕಡಿಮೆ ಬೆಲೆಗೆ ಬರುತ್ತಿರುವ ಹೊಸ ಫ್ಲ್ಯಾಗ್‌ಶಿಪ್ ಲೆವೆಲ್ ಫೋನ್ ಆಗಿರಬಹುದು ಎಂಬುದು ನನ್ನ ಅಭಿಪ್ರಾಯ.

ಇನ್ನು ಈ ಪೋನ್ ಬಿಡುಗಡೆಯಾದಾಗ Lunar Mist ಮತ್ತು Phantom Black ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ. Lava ತನ್ನ ದೇಶೀಯ ಬ್ರ್ಯಾಂಡ್ ಇಮೇಜ್‌ನ್ನು ಮತ್ತಷ್ಟು ಬಲಪಡಿಸಲು ಈ ಹೊಸ Agni 4 ಫೋನ್ ಮೂಲಕ ದೊಡ್ಡ ಹೆಜ್ಜೆ ಇಡುತ್ತಿದೆ. ಶಕ್ತಿಶಾಲಿ Dimensity 8350 ಚಿಪ್‌ಸೆಟ್, ದೊಡ್ಡ ಬ್ಯಾಟರಿ, ಮತ್ತು ಉನ್ನತ ಮಟ್ಟದ ವಿನ್ಯಾಸವು Made in India ಪವರ್‌ಹೌಸ್ ಮಾಡಬಹುದು. ವೆಂಬರ್ 20, 202 ರಂದು ನಡೆಯಲಿರುವ ಅಧಿಕೃತ ಲಾಂಚ್‌ನಲ್ಲಿ ಬೆಲೆ ಮತ್ತು ಇತರ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ಮಾಹಿತಿ ಹೊರಬರಲಿದೆ. ಅಲ್ಲಿಯವರೆಗೂ ಕಾಯೋಣ.!

Best Mobiles in India

English summary
Lava has confirmed on its official X (formerly Twitter) handle that the upcoming Lava Agni 4 will feature the latest MediaTek Dimensity 8350 chipset. The phone will also come equipped with LPDDR5X RAM and UFS 4.0 storage hardware usually seen only in mid-range and premium flagship devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+