Home
ಮೊಬೈಲ್

Lava Agni 4 ಹಿಂಭಾಗದ ವಿನ್ಯಾಸ: Nothing Phone 2a ತರಹ ಕ್ಯಾಮೆರಾ ಸೆಟ್‌ಅಪ್!

ಭಾರತೀಯ ಮೊಬೈಲ್ ಬ್ರ್ಯಾಂಡ್ ಲಾವಾ (Lava) ತನ್ನ ಮುಂದಿನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ Lava Agni 4 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ ಹಿಂದಿನ Lava Agni 3 5G ಮಾದರಿಯ ಮುಂದಿನ ಆವೃತ್ತಿಯಾಗಿದ್ದು, ಇದು ಹೊಸ ಸಂಪೂರ್ಣ ಮೆಟಲ್ ಬಾಡಿ ವಿನ್ಯಾಸ, ದೊಡ್ಡ ಬ್ಯಾಟರಿ ಮತ್ತು ಸುಧಾರಿತ ವೈಶಿಷ್ಟ್ಯಗಳಿಗಾಗಿ ಈಗಾಗಲೇ ಚರ್ಚೆಯಲ್ಲಿದೆ. ಇದೀಗ ಹೊಸದೊಂದು ವಿಷಯ ಬಹಿರಂಗವಾಗಿದ್ದು, ಈ ಫೋನ್ ಹಾರಿಜಾಂಟಲ್ ಪಿಲ್-ಶೇಪ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ವಿನ್ಯಾಸ ಹೊಂದಿರುವ ಟೀಸರ್ ಬಿಡುಗಡೆಯಾಗಿದೆ.

ಲಾವಾ ತನ್ನ ಅಧಿಕೃತ X (ಹಳೆಯ Twitter) ಖಾತೆಯಲ್ಲಿ ಹೊಸದಾಗಿ ಟೀಸರ್ ಹಂಚಿಕೊಂಡಿದೆ. ಇದರಲ್ಲಿ Lava Agni 4 ಫೋನ್‌ನ ಹಿಂಭಾಗದ ವಿನ್ಯಾಸ ಬಹಿರಂಗವಾಗಿದೆ. ಈ ಫೋನ್ ಹಾರಿಜಾಂಟಲ್ ಪಿಲ್-ಶೇಪ್ ಮಾದರಿಯ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಈ ವಿನ್ಯಾಸವು ಒಂದು ಕ್ಷಣ Nothing Phone 2a ಫೋನ್ ಮಾದರಿಯ ವಿನ್ಯಾಸವನ್ನು ನೆನಪಿಸುವಂತಿದೆ. ಇನ್ನು ಈ ಫೋನಿನ ಕ್ಯಾಮೆರಾ ವಿಭಾಗದಲ್ಲಿ ಡ್ಯುಯಲ್ LED ಫ್ಲ್ಯಾಶ್ ಮತ್ತು ಮಧ್ಯದಲ್ಲಿ ಸ್ಪಷ್ಟವಾಗಿ ಕಾಣುವ "AGNI" ಬ್ರ್ಯಾಂಡಿಂಗ್ ಇದೆ, ಇದು ಫೋನ್‌ಗೆ ಪ್ರೀಮಿಯಂ ಲುಕ್ ನೀಡುತ್ತಿದೆ.

ಇದಕ್ಕಿಂತಲೂ ಮೊದಲು ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ, ಈ Lava Agni 4 ಸ್ಮಾರ್ಟ್‌ಫೋನ್ ಸಂಪೂರ್ಣ ಮೆಟಲ್ ಫಿನಿಷ್ ಹೊಂದಿರುವುದನ್ನು ಕಂಪೆನಿ ತೋರಿಸಿತ್ತು. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ "Forged from metal-because plastic dreams shatter" ಎಂದು ಹೇಳಿತ್ತು. ಈ ಹೇಳಿಕೆಯಿಂದ ಪೋನ್ ಮೆಟಲ್‌ನಿಂದ ನಿರ್ಮಿತವಾಗಿರುವುದು ದೃಢವಾಗುತ್ತದೆ. ಟೀಸರ್ ಚಿತ್ರದಲ್ಲಿ ಸಂಪೂರ್ಣ ಮೆಟಲ್ ಬಟನ್‌ಗಳು ಕಾಣಿಸುತ್ತವೆ. ಇದು ಈ ಹಿಂದಿನ ಮಾದರಿಗಳಿಗಿಂತ ಹೆಚ್ಚು ಪ್ರೀಮಿಯಂ ಲುಕ್ ಅನ್ನು ನೀಡುತ್ತಿದೆ.

Lava Agni 4 ಹಿಂಭಾಗದ ವಿನ್ಯಾಸ: Nothing Phone 2a ತರಹ ಕ್ಯಾಮೆರಾ ಸೆಟ್‌ಅಪ್!

Lava ಕಂಪನಿಯು ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲದಿದ್ದರೂ, ಕೆಲವು ಲೀಕ್‌ಗಳ ಪ್ರಕಾರ Lava Agni 4 5G ಫೋನಿನ ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳು ಈ ಕೆಳಕಂಡಂತಿವೆ.

  1. ಹೊಸ Lava Agni 4 5G ಫೋನ್‌ನ ವಿನ್ಯಾಸವು ಹಳೆಯ LG ಸ್ಮಾರ್ಟ್‌ಫೋನ್‌ಗಳ ಹಾರಿಜಾಂಟಲ್ ಕ್ಯಾಮೆರಾ ಸೆಟಪ್ ನಂತಿರಲಿದೆ ಎಂದು ಹಲವಾರು ಟೆಕ್ ವರದಿಗಳು ಹೇಳುತ್ತವೆ.
  2. ಈ ಡಿಸೈನ್‌ನಲ್ಲಿ ಮಧ್ಯದಲ್ಲಿ LED ಫ್ಲ್ಯಾಶ್ ಜೊತೆಗೆ ಎರಡೂ ಬದಿಗಳಲ್ಲಿ ಕ್ಯಾಮೆರಾ ಸೆನ್ಸರ್‌ಗಳು ಇರಲಿವೆ ಎನ್ನಲಾಗಿದೆ.
  3. Lava Agni 4 5G ಫೋನ್‌ನಲ್ಲಿ 6.7 ಇಂಚಿನ FHD+ AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಇರಲಿದೆ.
  4. ಹಿಂದಿನ Lava Agni 3 ನಲ್ಲಿ ಇದ್ದ ಕರ್ವ್‌ಡ್ ಡಿಸ್ಪ್ಲೇ ಬದಲಿಗೆ, ಈ ಬಾರಿ ಫ್ಲಾಟ್ ಸ್ಕ್ರೀನ್ ವಿನ್ಯಾಸ ನೀಡಲಾಗುವ ಸಾಧ್ಯತೆ ಇದೆ.
  5. ಕಾರ್ಯಕ್ಷಮತೆ ವಿಭಾಗದಲ್ಲಿ, Lava Agni 4 5G 5G ನಲ್ಲಿ MediaTek Dimensity 8350 ಚಿಪ್‌ಸೆಟ್ ಬಳಸಲಾಗುತ್ತದೆ ಎಂದು ವರದಿಗಳು ಸೂಚಿಸುತ್ತವೆ.
  6. Lava Agni 4 5G ಫೋನ್‌ನಲ್ಲಿ ಬ್ಯಾಟರಿ ವಿಭಾಗದಲ್ಲಿ ದೊಡ್ಡ ಅಪ್‌ಗ್ರೇಡ್ ನಿರೀಕ್ಷಿಸಲಾಗಿದೆ . ಇದರಲ್ಲಿ 7,000mAh ಸಾಮರ್ಥ್ಯದ ಲಿಥಿಯಂ ಬ್ಯಾಟರಿ ಇರಬಹುದು.
  7. ಫೋಟೋಗ್ರಫಿ ಪ್ರಿಯರಿಗೆ, Lava Agni 4 5G ನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸರ್ ಇರಬಹುದು. ಸೆಲ್ಫಿ ಕ್ಯಾಮೆರಾ ಹಾಗೂ ವೀಡಿಯೊ ರೆಕಾರ್ಡಿಂಗ್ ವಿಭಾಗದಲ್ಲಿಯೂ ಉತ್ತಮ ಸುಧಾರಣೆ ನಿರೀಕ್ಷಿಸಲಾಗಿದೆ.
  8. ಇಷ್ಟೇ ಅಲ್ಲದೆ, ಈ ಫೋನ್ AI ಆಧಾರಿತ ಫೋಟೋ ಸಂಸ್ಕರಣಾ ತಂತ್ರಜ್ಞಾನ ಮತ್ತು ಇತರೆ AI ಪೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.

ಲಾವಾ ಈಗಾಗಲೇ ತನ್ನ Agni ಸರಣಿಯ ಮೂಲಕ ಮಧ್ಯಮ ದರದ 5G ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಯಶಸ್ವಿಯಾಗಿದೆ ಎನ್ನಬಹುದು. ಸುಮಾರು ಒಂದು ವರ್ಷದ ಹಿಂದೆ, ಕಂಪನಿಯು ₹20,000 ಬೆಲೆಯ ಶ್ರೇಣದಲ್ಲಿ Lava Agni 3 5G ಮಾದರಿಯನ್ನು ಪರಿಚಯಿಸಿತ್ತು. ಈ ಫೋನ್‌ನಲ್ಲಿ 1.5K ಬಾಗಿದ AMOLED ಡಿಸ್ಪ್ಲೇ, MediaTek Dimensity 7300X ಚಿಪ್‌ಸೆಟ್, 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ (8MP ಟೆಲಿಫೋಟೋ + 8MP ಅಲ್ಟ್ರಾ-ವೈಡ್ ಲೆನ್ಸ್), 16MP ಸೆಲ್ಫಿ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಜೊತೆಗೆ 66W ಫಾಸ್ಟ್ ಚಾರ್ಜಿಂಗ್ ಬೆಂಬಲ ದೊರಕುತ್ತಿತ್ತು. ಇದಲ್ಲದೆ, ಡಾಲ್ಬಿ ಅಟ್ಮಾಸ್ ಆಡಿಯೋ ಮತ್ತು IP64 ಧೂಳು/ನೀರಿನ ರಕ್ಷಣೆಯಂತಹ ಪ್ರೀಮಿಯಂ ವೈಶಿಷ್ಟ್ಯಗಳು ಕೂಡ ಸೇರಿಕೊಂಡಿದ್ದವು. ಇದೀಗ ಹೊಸ Lava Agni 4 ಬಿಡುಗಡೆಯ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Best Mobiles in India

English summary
The design of the rear of the Lava Agni 4 phone has been disclosed, featuring a horizontal pill-shaped dual camera configuration. This design bears a resemblance to that of the Nothing Phone 2a.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+