Home
ಮೊಬೈಲ್

Lava Agni 4 ಆಫರ್: ಬಳಸಿದ ಮೇಲೆ ಇಷ್ಟವಾದರೆ ಮಾತ್ರ ಪೇಮೆಂಟ್!

ಭಾರತದ ಮೊಬೈಲ್ ಮಾರುಕಟ್ಟೆಗೆ ಬಹುನಿರೀಕ್ಷೆ ಮೂಡಿಸಿ ಆಗಮಿಸುತ್ತಿರುವ ಲಾವಾದ ಫ್ಲ್ಯಾಗ್‌ಶಿಪ್ ಫೋನ್ 'Lava Agni 4' ಇನ್ನೇನು ಬಿಡುಗಡೆಯಾಗುತ್ತಿದೆ. ಆದರೆ, ಇದಕ್ಕೂ ಮೊದಲೇ ಗ್ರಾಹಕರಿಗೆ ಹೊಸ ಅನುಭವ ಒದಗಿಸಲು ಲಾವಾ ಮುಂದಾಗಿದೆ. ಲಾವಾ ಹೊಸದಾಗಿ 'Demo@Home' ಎಂಬ ಹೆಸರಿನ ವಿಶೇಷ ಸೇವೆಯನ್ನು ಆರಂಭಿಸುತ್ತಿದ್ದು, ಈ ಸೇವೆಯು Lava Agni 4 ಫೋನ್ ಖರೀದಿಸುವ ಗ್ರಾಹಕರಿಗೆ ಮೊದಲೇ ಅದರ ಕುರಿತ ಸಂಪೂರ್ಣ ದರ್ಶನವನ್ನು ನೀಡುತ್ತಾರೆ. ಇದರಿಂದ ಗ್ರಾಹಕರು ಫೋನ್ ಖರೀದಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದನ್ನು ಅನುಭವಿಸಬಹುದು.!

ಹೌದು, 'Demo@Home' ಎಂಬ ಹೆಸರಿನ ಈ ವಿಶೇಷ ಸೇವೆಯ ಮೂಲಕ, ಗ್ರಾಹಕರ ಮನೆಗೆ ಲಾವಾ ಎಂಜಿನಿಯರ್ ಬರುತ್ತಾರೆ ಮತ್ತು ಫೋನ್‌ನ ವಿನ್ಯಾಸದಿಂದ ಹಿಡಿದು ಎಲ್ಲಾ ವೈಶಿಷ್ಟ್ಯಗಳವರೆಗೆ ನೇರ ಪ್ರದರ್ಶನ ನೀಡುತ್ತಾರೆ. ಇದು ಖರೀದಿ ಮಾಡುವ ಮೊದಲು ಫೋನ್ ಅನ್ನು ಅನುಭವಿಸಲು ಬೇಕಾದವರಿಗೆ ಉತ್ತಮ ಅವಕಾಶ. ಈ ಸೇವೆಯ ಬೆಂಗಳೂರು, ದೆಹಲಿ ಮತ್ತು ಮುಂಬೈ ಮೂರು ಪ್ರಮುಖ ನಗರಗಳಲ್ಲಿ ನವೆಂಬರ್ 20 ರಿಂದ 24 ರವರೆಗೆ ಆಯೋಜನೆಯಾಗಿದೆ. ಮನೆಗೆ ಬರುವ ಡೆಮೊ ಸೇವೆಯನ್ನು ಅನುಭವಿಸಲು ಗ್ರಾಹಕರು ಲಾವಾ ನೀಡಿರುವ ವಿಶೇಷ ಫಾರ್ಮ್ ಅನ್ನು ತುಂಬಬೇಕಿದೆ.

ಲಾವಾ ಕಂಪೆನಿಯು ಹೊಡಿಸಿರುವ ಪತ್ರಿಕಾ ಟಿಪ್ಪಣಿಯಲ್ಲಿ, ಬೆಂಗಳೂರು, ದೆಹಲಿ ಮತ್ತು ಮುಂಬೈ ಗ್ರಾಹಕರು ಈ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ, ಗ್ರಾಹಕರು ಲಾವಾ ನೀಡಿರುವ ವಿಶೇಷ ಫಾರ್ಮ್ ಅನ್ನು ತುಂಬಬೇಕು. ನಂತರ ಆಯ್ದ ಕಡಿಮೆ ಸಂಖ್ಯೆಯ ಬಳಕೆದಾರರಿಗೆ ಆಹ್ವಾನ ನೀಡಲಾಗುತ್ತದೆ. ಮನೆಗೆ ಬಂದ ಎಂಜಿನಿಯರ್ ಫೋನ್‌ನ್ನು ಕೈಯಲ್ಲಿ ಹಿಡಿದು ಬಳಕೆ ಮಾಡುವ ಅನುಭವ ನೀಡುತ್ತಾರೆ. ಮುಖ್ಯವಾಗಿ, ಈ ಡೆಮೊ ಪೂರ್ಣವಾಗಿ ಉಚಿತ ಹಾಗೂ ಖರೀದಿ ಮಾಡುವ ಒತ್ತಡವಿಲ್ಲ ಎಂದು ಕಂಪನಿ ತಿಳಿಸಿದೆ. ಇದು ಬಳಕೆದಾರರಿಗೆ ಉತ್ಪನ್ನದ ಬಗ್ಗೆ ಸ್ಪಷ್ಟ ಕಲ್ಪನೆ ನೀಡುವ ಉದ್ದೇಶ ಹೊಂದಿದೆ.

Lava Agni 4 ಆಫರ್: ಬಳಸಿದ ಮೇಲೆ ಇಷ್ಟವಾದರೆ ಮಾತ್ರ ಪೇಮೆಂಟ್!

Lava Agni 4: ನಿರೀಕ್ಷಿತ ವೈಶಿಷ್ಟ್ಯಗಳು
ಮುಂಬರಲಿರುವ Lava Agni 4 ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ AMOLED ಪರದೆಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 8350 ಚಿಪ್‌ಸೆಟ್‌ನಿಂದ ಚಾಲಿತವಾಗಲಿದ್ದು, ಇದರನ್ನು LPDDR5X RAM ಮತ್ತು UFS 4.0 ಸಂಗ್ರಹಣೆಯೊಂದಿಗೆ ಜೋಡಿಸಿರುವ ಸಾಧ್ಯತೆ ಇದೆ.

ಕ್ಯಾಮೆರಾ ವಿಭಾಗದಲ್ಲಿ, Lava Agni 4 ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಪಡೆಯಬಹುದು, ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ಗೆ ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಇದು ಪಡೆಯಲಿದೆ ಎಂದು ಹೇಳಲಾಗಿದೆ.

ಬ್ಯಾಟರಿ ವಿಭಾಗದಲ್ಲಿ, ಈ Lava Agni 4 ಫೋನಿನಲ್ಲಿ 66W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 5,000mAh ಬ್ಯಾಟರಿ ಇರಬಹುದು ಎಂದು ವದಂತಿಗಳಿವೆ. ಸಂಪರ್ಕ ಆಯ್ಕೆಗಳಲ್ಲಿ, 5G ಸೇರಿದಂತೆUSB 3.2, ಇನ್ಫ್ರಾರೆಡ್ (IR) ಮತ್ತು Wi-Fi 6E ಅನ್ನು ಒಳಗೊಂಡಿರಬಹುದು

Lava Agni 4: ಭಾರತದಲ್ಲಿ ಬಿಡುಗಡೆ ದಿನಾಂಕ ಮತ್ತು ಬೆಲೆ
ಈಗಾಗೆಲೇ ನಾವು ತಿಳಿದಿರುವಂತೆ, ಬಹುನಿರೀಕ್ಷಿತ ಈ Lava Agni 4 ಅನ್ನು ನವೆಂಬರ್ 20 ರಂದು ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮತ್ತು ವರದಿಗಳ ಪ್ರಕಾರ ಈ Lava Agni 4 ಫೋನ್ ಭಾರತದಲ್ಲಿ ರೂ. 30,000 ಕ್ಕಿಂತ ಕಡಿಮೆ ಬೆಲೆಯನ್ನು ಹೊಂದುವ ಸಾಧ್ಯತೆಯಿದೆ. ನವೆಂಬರ್ 20ರಂದು ಅಧಿಕೃತ ಲಾಂಚ್ ನಂತರ ಫೋನ್ ಬಗ್ಗೆ ಇನ್ನಷ್ಟು ವಿವರಗಳು ತಿಳಿಯಲಿವೆ.

Best Mobiles in India

English summary
Lava has launched a new ‘Demo@Home’ service where a company engineer visits your home and gives a full live demo of the phone. It’s a great option for those who want to experience the device before buying.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+