ಬಹುನಿರೀಕ್ಷಿತ Lava Agni 4 ಫೋನ್ ಬಿಡುಗಡೆಯ ಅಧಿಕೃತ ದಿನಾಂಕ ಪ್ರಕಟ!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬಹುನಿರೀಕ್ಷೆ ಮೂಡಿಸಿರುವ ಮಿಡ್‌ರೇಂಜ್ 'Lava Agni 4' ಸ್ಮಾರ್ಟ್‌ಫೋನ್ ಬಿಡುಗಡೆಯ ಅಧಿಕೃತ ದಿನಾಂಕ ಹೊರಬಿದ್ದಿದೆ. Lava ತನ್ನ ಅತ್ಯಂತ ಯಶಸ್ವಿಯಾದ Agni ಸರಣಿಯ ಹೊಸ ಸದಸ್ಯವಾಗಿರುವ ಈ Lava Agni 4 ಫೋನ್ ಅನ್ನು ದೇಶದಲ್ಲಿ ನವೆಂಬರ್ 20ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.! ಈ ಬಾರಿ ಸಂಪೂರ್ಣ ಮೆಟಲ್ ಫ್ರೇಮ್ ವಿನ್ಯಾಸದಲ್ಲಿ ಬಿಡುಗಡೆಯಾಗಲಿರುವ ಈ ಫೋನ್ ಪ್ರೀಮಿಯಂ ವಿನ್ಯಾಸ, ದೊಡ್ಡ ಬ್ಯಾಟರಿ ಮತ್ತು ಅತ್ಯುಉತ್ತಮ ಕಾರ್ಯಕ್ಷಮತೆಯೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಈಗಾಗಲೇ ನಾವು ತಿಳಿದಿರುವಂತೆ, ಈ ಬಾರಿ Lava Agni ಸರಣಿ ಫೋನಿನ ವಿನ್ಯಾಸದಲ್ಲಿ ದೊಡ್ಡ ಬದಲಾವಣೆ ತರಲಾಗಿದೆ. ಹೊಸದಾಗಿ ಬರುತ್ತಿರುವ ಈ Lava Agni 4 ಫೋನ್ ಸಂಪೂರ್ಣ ಮೆಟಲ್ ಫ್ರೇಮ್ ವಿನ್ಯಾಸದೊಂದಿಗೆ ಬರುತ್ತಿದ್ದು, ಹಿಂಭಾಗದಲ್ಲಿ ಪಿಲ್ ಆಕಾರದ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಜೊತೆಗೆ ಈ ಫೋನಿನ ಮುಂಭಾಗದಲ್ಲಿ ಫ್ಲಾಟ್ ಡಿಸ್ಪ್ಲೇ ಮತ್ತು ಡ್ಯುಯಲ್ ಸ್ಪೀಕರ್ ಸಿಸ್ಟಮ್ ಇರುವುದು ಅಧಿಕೃತವಾಗಿ ದೃಢಪಟ್ಟಿದೆ. ಇದು ಸಧ್ಯಕ್ಕೆ ಅಧಿಕೃತವಾಗಿ ದೃಢಪಟ್ಟಿರುವ ವಿವರಗಳಾಗಿವೆ. ಆದರೆ, ಸೋರಿಕೆಯ ಮಾಹಿತಿಗಳಂತೆ ಈ ಫೋನಿನ ಬಹುತೇಕ ಎಲ್ಲಾ ಫೀಚರ್ಸ್ ಮಾಹಿತಿ ಹೊರಬಿದ್ದಿವೆ.
Lava Agni 4 ಫೋನ್: ನಿರೀಕ್ಷಿತ ವೈಶಿಷ್ಟ್ಯಗಳು
ಸೋರಿಕೆಯ ವರದಿಗಳ ಪ್ರಕಾರ, ಮುಂಬರುವ 'Lava Agni 4 ಫೋನ್‌ನಲ್ಲಿ 6.67 ಇಂಚಿನ 1.5K OLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಇರಬಹುದು. ಇದು ಗೇಮಿಂಗ್ ಹಾಗೂ ಹೈ-ರೆಸಲ್ಯೂಶನ್ ವೀಡಿಯೋ ವೀಕ್ಷಣೆಗೆ ಸೂಕ್ತ ಅನುಭವ ನೀಡಲಿದೆ ಎಂದು ಹೇಳಲಾಗಿದೆ. ಲಾವಾ ಅಧಿಕೃತವಾಗಿ ಚಿಪ್‌ಸೆಟ್‌ನ್ನು ಬಹಿರಂಗಪಡಿಸದಿದ್ದರೂ, ವರದಿಗಳ ಪ್ರಕಾರ Lava Agni 4 ನಲ್ಲಿ MediaTek Dimensity 8350 ಚಿಪ್‌ಸೆಟ್ ಇರಬಹುದು. ಜೊತೆಗೆ, UFS 4.0 ಸ್ಟೋರೇಜ್ ತಂತ್ರಜ್ಞಾನವಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಫೋನ್ ಸ್ಟಾಕ್ ಆಂಡ್ರಾಯ್ಡ್ ಆಧಾರಿತ ಸ್ವಚ್ಛ UI ಜೊತೆ ಬರಲಿದೆ. ಯಾವುದೇ ಬ್ಲೋಟ್ವೇರ್ ಇಲ್ಲದೆ, ವೇಗವಾದ ಮತ್ತು ಕ್ಲೀನ್ ಅನುಭವ ನೀಡುವ ಸಾಫ್ಟ್‌ವೇರ್ ಆಗಿರಲಿದೆ. ಲಾವಾ ಹಿಂದಿನ ಫೋನ್‌ಗಳಂತೆ ಸುರಕ್ಷತಾ ಅಪ್‌ಡೇಟ್‌ಗಳಿಗೂ ಆದ್ಯತೆ ನೀಡುವ ನಿರೀಕ್ಷೆ ಇದೆ.

ಈ Lava Agni 4 ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆ ಎಂದರೆ 7,000mAh ಬ್ಯಾಟರಿ.! ಹೌದು, ಈ ಪೋನ್ ಲಾವಾ ಕಂಪನಿಯ ಅತ್ಯಂತ ದೊಡ್ಡ 7,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದೆ ಮತ್ತು ಕಳೆದ Agni 3 ಮಾದರಿಯಂತೆಯೇಇಲ್ಲಿ 66W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಇರಬಹುದು ಎಂದು ಅಂದಾಜಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ, ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಇರಬಹುದು. ಸೆಲ್ಫಿ ಕ್ಯಾಮೆರಾ ಕುರಿತು ವಿವರಗಳು ಇನ್ನೂ ಬಹಿರಂಗವಾಗಿಲ್ಲ, ಆದರೆ ಲಾವಾ ತನ್ನ ಹಿಂದಿನ ಫೋನ್‌ಗಳಂತೆಯೇ ಉತ್ತಮ ಸೆಲ್ಫಿ ಗುಣಮಟ್ಟ ನೀಡುವ ನಿರೀಕ್ಷೆ ಇದೆ.ಲಾವಾ ಬೆಲೆಯನ್ನು ಇನ್ನೂ ಘೋಷಿಸದಿದ್ದರೂ, ಹಿಂದಿನ Agni 3 ₹20,999 ರೂ.ಗೆ ಬಿಡುಗಡೆಯಾಗಿದ್ದ ಕಾರಣ, Agni 4 ಬೆಲೆ ₹25,000 ಒಳಗೆ ಇರಬಹುದು ಎಂದು ಹಲವು ವರದಿಗಳು ಸೂಚಿಸಿವೆ.
ಗಮನಿಸುವುದಾದರೆ, Lava Agni 4 ನಲ್ಲಿ MediaTek Dimensity 8350 ಚಿಪ್‌ಸೆಟ್ ಇರಬಹುದು. ಇದೇ ಪ್ರೊಸೆಸರ್ OnePlus Nord CE 5 ಮತ್ತು Infinix GT 30 Pro ಮಾದರಿಗಳಲ್ಲಿಯೂ ಇದೆ. ಜೊತೆಗೆ ಬೆಲೆಯ ಶ್ರೇಣಿಯಲ್ಲಿ ಇದು OnePlus Nord CE 5, Infinix GT 30, ಮತ್ತು Poco X7 ಫೋನ್‌ಗಳಿಗೆ ನೇರ ಸ್ಪರ್ಧಿಯಾಗಲಿದೆ ಎನ್ನಲಾಗಿದೆ. ಒಟ್ಟಾರೆಯಾಗಿ, ಈ ಬಾರಿ ಲಾವಾ ತನ್ನ ಗ್ರಾಹಕರಿಗೆ ಪ್ರೀಮಿಯಂ ವಿನ್ಯಾಸ, ದೊಡ್ಡ ಬ್ಯಾಟರಿ, ಮತ್ತು ಹೈ-ಪರ್ಫಾರ್ಮೆನ್ಸ್ ಚಿಪ್‌ಸೆಟ್ ಅನ್ನು ಕೈಗೆಟುಕುವ ಬೆಲೆಯಲ್ಲಿ ನೀಡಲು ಸಜ್ಜಾಗಿದೆ ಎನ್ನಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ನವೆಂಬರ್ 20ರ ಲಾಂಚ್ ಉತ್ತರ ನೀಡಲಿದೆ ಮತ್ತು Lava Agni 4 ಮಿಡ್-ರೇಂಜ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








