Home
ಮೊಬೈಲ್

Lava Agni 4 ಎರಡು ಬಣ್ಣಗಳಲ್ಲಿ!..7,000mAh ಬ್ಯಾಟರಿ, ಕ್ಯಾಮೆರಾ ಬಟನ್ ಜೊತೆ!

ಭಾರತೀಯ ಮೊಬೈಲ್ ಬ್ರ್ಯಾಂಡ್ ಲಾವಾ (Lava) ತನ್ನ ಹೊಸ ತಲೆಮಾರಿನ ಸ್ಮಾರ್ಟ್‌ಫೋನ್ Lava Agni 4 ಅನ್ನು ಇದೇ ನವೆಂಬರ್ 20 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇದಕ್ಕೂ ಮೊದಲೇ ಕಂಪೆನಿಯು ಈ ಹೊಸ Lava Agni 4 ಸ್ಮಾರ್ಟ್‌ಫೋನ್ ಕುರಿತು ಹಲವಾರು ಮಾಹಿತಿಗಳನ್ನು ಬಹಿರಂಗಪಡಿಸಿಸುತ್ತಿದ್ದು, ಇದೀಗ ಈ Lava Agni 4 ಸ್ಮಾರ್ಟ್‌ಫೋನ್ ಹೊಂದಿರಲಿರುವ ಡಿಸ್‌ಪ್ಲೇ ಮತ್ತು ಬಿಡುಗಡೆಯಾಗಲಿರುವ ಬಣ್ಣ ಆಯ್ಕೆಗಳನ್ನು ಬಹಿರಂಗಪಡಿಸಿದೆ.

ಲಾವಾ ಕಂಪನಿಯ ಇತ್ತೀಚಿನ ಎಕ್ಸ್ (ಹಳೆಯ Twitter) ಪೋಸ್ಟ್ ಪ್ರಕಾರ, ಹೊಸ Lava Agni 4 ಸ್ಮಾರ್ಟ್‌ಫೋನ್ Lunar Mist ಮತ್ತು Phantom Black ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ 6.78 ಇಂಚಿನ Full HD+ AMOLED ಡಿಸ್ಪ್ಲೇ ಇರಲಿದ್ದು, ಇದು 120Hz ರಿಫ್ರೆಶ್ ರೇಟ್ ಸಪೋರ್ಟ್ ನೀಡಲಿದೆ ಎಂದು ತಿಳಸಲಾಗಿದೆ. ಇದರಿಂದ ಗೇಮಿಂಗ್, ವೀಡಿಯೋ ಮತ್ತು ಸಾಮಾಜಿಕ ಮಾಧ್ಯಮ ಬಳಕೆಗೆ ಫೋನ್ ಸೂಕ್ತವಾದಂತೆ ಕಾಣಿಸುತ್ತಿದೆ.

ಪ್ರೀಮಿಯಂ ವಿನ್ಯಾಸ ಮತ್ತು ಹೊಸ ಬಟನ್ ವೈಶಿಷ್ಟ್ಯ
ನಾವು ಈಗಾಗಲೇ ತಿಳಿದಿರುವಂತೆ, ಈ ಹೊಸ Lava Agni 4 ನಲ್ಲಿ ಪ್ಲಾಸ್ಟಿಕ್ ಬಾಡಿಯ ಬದಲು ಅಲ್ಯೂಮಿನಿಯಂ ಫ್ರೇಮ್ ನೀಡಲಾಗಿದೆ, ಇದು ಫೋನ್‌ಗೆ ಹೆಚ್ಚು ಪ್ರೀಮಿಯಂ ಲುಕ್ ಹಾಗೂ ಬಲಿಷ್ಠ ಬಿಲ್ಡ್ ನೀಡುತ್ತದೆ. ಫೋನ್‌ನ ಬಲ ಭಾಗದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳ ಜೊತೆಗೆ ಹೊಸ ಕ್ಯಾಮೆರಾ ಕಂಟ್ರೋಲ್ ಬಟನ್ ನೀಡಲಾಗಿದೆ. ಇದು ಆಪಲ್‌ನ ಹೊಸ ಕ್ಯಾಮೆರಾ ಕೀ ಹೋಲಿಕೆಯಂತೆ ಕಾರ್ಯನಿರ್ವಹಿಸಲಿದೆ ಎಂಬ ನಿರೀಕ್ಷೆ ಇದೆ. ಆದರೆ, ಅಧಿಕೃತವಾಗಿಲ್ಲ.

Lava Agni 4 ಎರಡು ಬಣ್ಣಗಳಲ್ಲಿ!..7,000mAh ಬ್ಯಾಟರಿ, ಕ್ಯಾಮೆರಾ ಬಟನ್ ಜೊತೆ!

Zero Bloatware ಇರುವುದು ಸಹ ಖಚಿತ!
ಹಾಗೆಯೇ, ಲಾವಾ ಕಂಪನಿಯು ತನ್ನ ಹೊಸ Lava Agni 4 ಫೋನಿನಲ್ಲಿ 'Zero Bloatware UI" ನೀಡುವುದಾಗಿ ದೃಢಪಡಿಸಿದೆ, ಅಂದರೆ ಅನಗತ್ಯ ಆ್ಯಪ್‌ಗಳಿಲ್ಲದ ಕ್ಲೀನ್ ಮತ್ತು ವೇಗದ ಸಾಫ್ಟ್‌ವೇರ್ ಅನುಭವ ಗ್ರಾಹಕರಿಗೆ ದೊರೆಯಲಿದೆ. ಜೊತೆಗೆ, ಗ್ರಾಹಕರಿಗೆ Free Home Replacement Service ಲಭ್ಯವಿರುತ್ತದೆ. ಅಂದರೆ, ಈ ಸ್ಮಾರ್ಟ್‌ಪೋನಿನಲ್ಲಿ ಯಾವುದೇ ತೊಂದರೆ ಉಂಟಾದರೆ ಕಂಪನಿಯೇ ನೇರವಾಗಿ ಮನೆಯಲ್ಲೇ ಬದಲಾವಣೆಯ ಸೇವೆಯನ್ನು ನೀಡಲಿದೆ.

Lava Agni 4: ನಿರೀಕ್ಷಿತ ವೈಶಿಷ್ಟ್ಯಗಳು
ಹಲವಾರು ಸೋರಿಕೆಯ ವರದಿಗಳ ಪ್ರಕಾರ, ಮುಂಬರುವ Lava Agni 4 ನಲ್ಲಿ MediaTek Dimensity 8350 ಪ್ರೊಸೆಸರ್ ಇರಬಹುದು. ಹಾಗೂ ಈ ಫೋನ್ LPDDR5X RAM ಮತ್ತು USB 3.1 ಸ್ಟೋರೇಜ್ ಸಪೋರ್ಟ್ ಹೊಂದಿರಬಹುದು ಎಂದು ಹೇಳಲಾಗಿದೆ. ಇದರ ಜೊತೆಗೆ, ದೊಡ್ಡ 7,000mAh ಬ್ಯಾಟರಿ ನೀಡಲಾಗುವ ಸಾಧ್ಯತೆ ಇದೆ. ಟಿಪ್‌ಸ್ಟರ್ ಪರಾಸ್ ಗುಗ್ಲಾನಿ (@passionategeekz) ನೀಡಿದ ಮಾಹಿತಿಯ ಪ್ರಕಾರ, Lava Agni 4 ಬೆಲೆ ₹30,000 ಕ್ಕಿಂತ ಕಡಿಮೆ ಇರಬಹುದು ಎಂದು ಹೇಳಲಾಗಿದೆ.

ಒಟ್ಟಾರೆ ಸಾರಾಂಶವಾಗಿ, Lava Agni 4 ಸ್ಮಾರ್ಟ್‌ಫೋನ್ ಪ್ರೀಮಿಯಂ ವಿನ್ಯಾಸ, ದೊಡ್ಡ ಬ್ಯಾಟರಿ ಮತ್ತು ನವೀಕರಿತ ತಂತ್ರಜ್ಞಾನಗಳೊಂದಿಗೆ ಶಕ್ತಿಶಾಲಿ ಆಯ್ಕೆಯ ಸ್ಮಾರ್ಟ್‌ಫೋನ್ ಆಗಿರುವುದು ಖಚಿತವಾದಂತಿದೆ. ಈ ಫೋನ್ ಕಳೆದ ವರ್ಷದ ಜನಪ್ರಿಯ Lava Agni 3 5G ಗೆ ಉತ್ತರಾಧಿಕಾರಿ ಆಗಿದ್ದು, ವಿನ್ಯಾಸ ಮತ್ತು ತಾಂತ್ರಿಕ ಗುಣಗಳಲ್ಲಿ ಮಹತ್ವದ ನವೀಕರಣಗಳನ್ನು ತರುತ್ತಿದೆ. ಅಲ್ಯೂಮಿನಿಯಂ ಫ್ರೇಮ್, AI-ಆಧಾರಿತ ವೈಶಿಷ್ಟ್ಯಗಳು, ಕ್ಲೀನ್ UI ಮತ್ತು ಉತ್ತಮ ಸೇವಾ ಭರವಸೆಯೊಂದಿಗೆ, Lava Agni 4 ಸ್ಮಾರ್ಟ್‌ಫೋನ್ ಮಧ್ಯಮ ಶ್ರೇಣಿ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಬಹುದು.

Best Mobiles in India

English summary
Lava has been gradually teasing key features of its upcoming Agni 4 smartphone. The company has now officially confirmed the display specifications and the color variants that will be available at launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+