Home
ಮೊಬೈಲ್

ನಾಳೆ Lava 5G ಫೋನ್‌ ಸೇಲ್: ಅಗ್ಗದ ಬೆಲೆ.. ಖರೀದಿಗೆ ಕ್ಯೂ ಖಚಿತ!

ಲಾವಾ ಕಂಪನಿಯು ಇತ್ತೀಚೆಗೆ ಹೊಸ 5G ಫೋನನ್ನು ಬಿಡುಗಡೆ ಮಾಡಿದೆ. ಅದುವೇ, ಲಾವಾ ಬ್ಲೇಜ್ 3 5G (Lava Blaze 3 5G) ಆಗಿದೆ. ಇದನ್ನು ಲಾವಾ ತನ್ನ ಬ್ಲೇಜ್ ಸರಣಿಯ ಅಡಿಯಲ್ಲಿ ಪರಿಚಯಿಸಿದೆ. ಅಂದಹಾಗೆ, ಈ ಫೋನ್ ನಾಳೆ (ಸೆಪ್ಟೆಂಬರ್ 18) ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ತನ್ನ ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್ಸ್‌ ಹೊಂದಿರುವ ಲಾವಾ ಬ್ಲೇಜ್ 3 5G ಮೊಬೈಲ್ ಅನ್ನು ಖರೀದಿಸಲು ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ.

ಹೌದು, ಲಾವಾ ಬ್ಲೇಜ್ 3 5G ಫೋನ್ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಮಾರಾಟವಾಗಲಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಇದು 6.56 ಇಂಚಿನ ಹೆಚ್‌ಡಿ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಫೋನ್ 6GB RAM, 128GB ಸ್ಟೋರೇಜ್, 5,000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಆಫರ್‌ಗಳು ಮತ್ತು ಇನ್ನಿತರ ಫೀಚರ್ಸ್‌ ತಿಳಿಯೋಣ.

ನಾಳೆ Lava 5G ಫೋನ್‌ ಸೇಲ್: ಅಗ್ಗದ ಬೆಲೆ.. ಖರೀದಿಗೆ ಕ್ಯೂ ಖಚಿತ!

ಲಾವಾ ಬ್ಲೇಜ್ 3 5G ಫೋನಿನ ಬೆಲೆ ಮತ್ತು ಆಫರ್‌

6GB RAM + 128GB ಸ್ಟೋರೇಜ್ ಬೆಲೆ = 11,499 ರೂ.
ಆಫರ್‌ ಬೆಲೆ = 9,999 ರೂ. (1,500 ರೂ. ಡಿಸ್ಕೌಂಟ್)

ಕಂಪನಿಯು ನೂತನ ಫೋನನ್ನು ಕೇವಲ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಮಾರಾಟ ಮಾಡಲಿದೆ. ಇದರ ಬೆಲೆ 11,499 ರೂ. ಆಗಿದೆ. ಮೊದಲ ಮಾರಾಟದ ಭಾಗವಾಗಿ 1,500 ರೂಪಾಯಿ ಬ್ಯಾಂಕ್ ಆಫರ್ ನೀಡಲಾಗುತ್ತದೆ. ಡಿಸ್ಕೌಂಟ್‌ನೊಂದಿಗೆ ಕೇವಲ 9,999 ರೂ.ಗೆ ಈ ಫೋನನ್ನು ಕೊಳ್ಳಬಹುದು. ನಾಳೆ (ಸೆಪ್ಟೆಂಬರ್ 18) ರಿಂದ ಅಮೆಜಾನ್ ಮತ್ತು ಇತರೆ ಚಿಲ್ಲರೆ ಅಂಗಡಿಗಳ ಮೂಲಕ ಅಧಿಕೃತವಾಗಿ ಮಾರಾಟವಾಗಲಿದೆ.

ಲಾವಾ ಬ್ಲೇಜ್ 3 5G ಫೋನಿನ ವೈಶಿಷ್ಟ್ಯಗಳು

ಕಂಪನಿಯು ಲಾವಾ ಬ್ಲೇಜ್ 3 5G ಫೋನನ್ನು 6.56 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯೊಂದಿಗೆ ಪರಿಚಯಿಸಿದೆ. ಇದು ಪಂಚ್ ಹೋಲ್ ಕಟೌಟ್ ವಿನ್ಯಾಸ, 90Hz ರಿಫ್ರೆಶ್ ದರದೊಂದಿಗೆ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಒಳಗೊಂಡಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. Antutu ಸೈಟ್‌ನಲ್ಲಿ 410K ಗಿಂತ ಹೆಚ್ಚಿನ ಸ್ಕೋರ್ ಪಡೆದಿದೆ ಎಂದು ಕಂಪನಿ ತಿಳಿಸಿದೆ. ಇದು ಕ್ಲೀನ್ ಸಾಫ್ಟ್‌ವೇರ್ ಅನುಭವದೊಂದಿಗೆ ಆಂಡ್ರಾಯ್ಡ್ 14 ನಲ್ಲಿ ಕೆಲಸ ಮಾಡುತ್ತದೆ.

ಲಾವಾ ಬ್ಲೇಜ್ 3 5G ಫೋನ್ ವರ್ಚುವಲ್ ತಂತ್ರಜ್ಞಾನದ ಸಹಾಯದಿಂದ ಫೋನ್ 6GB ಬೆಂಬಲವನ್ನು ಹೊಂದಿದೆ. ಇದರ ಸಹಾಯದಿಂದ ನೀವು 12GB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದು. ಲಾವಾ ಬ್ಲೇಜ್ 3 5G ಹಿಂಭಾಗದ ಪ್ಯಾನೆಲ್‌ನಲ್ಲಿ ವೈಬ್ ಎಲ್‌ಇಡಿ ಲೈಟ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯಮತ್ತು 2 ಮೆಗಾಪಿಕ್ಸೆಲ್ ಎಐ (AI) ಕ್ಯಾಮೆರಾವನ್ನು ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ನಾಳೆ Lava 5G ಫೋನ್‌ ಸೇಲ್: ಅಗ್ಗದ ಬೆಲೆ.. ಖರೀದಿಗೆ ಕ್ಯೂ ಖಚಿತ!

ದೊಡ್ಡ ಬ್ಯಾಟರಿ, 18 ವ್ಯಾಟ್ ಫಾಸ್ಟ್ ಚಾರ್ಜಿಂಗ್

ಲಾವಾ ಬ್ಲೇಜ್ 3 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 18 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ. ಈ ಮೊಬೈಲ್ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಉತ್ತಮ ಆಡಿಯೋ ಅನುಭವಕ್ಕಾಗಿ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇದು ಡ್ಯುಯಲ್ ಸಿಮ್ 5G, 4G, ವೈಫೈ, ಬ್ಲೂಟೂತ್ ನಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Lava Blaze 3 5G Goes on First Sale in India Tomorrow Via Amazon: Price, Offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+