Home
ಮೊಬೈಲ್

Lava: ಅಗ್ಗದ ಬೆಲೆಯಲ್ಲಿ ಹೊಸ 5G ಫೋನ್.. 50MP ಕ್ಯಾಮೆರಾ.. 5000mAh ಬ್ಯಾಟರಿ.. ಯಾವುದು?

ಲಾವಾ (Lava) ಕಂಪನಿಯು ಶೀಘ್ರದಲ್ಲೇ ಹೊಸ 5G ಫೋನ್‌ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಅದುವೇ, ಲಾವಾ ಬ್ಲೇಜ್ 3 5G (Lava Blaze 3 5G) ಸ್ಮಾರ್ಟ್‌ಫೋನ್. ಈ ಫೋನನ್ನು ಕೈಗೆಟುಕುವ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಮುಂಬರುವ ವಾರಗಳಲ್ಲಿ ಈ ಹೊಸ ಫೋನ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಮಧ್ಯೆಯೇ, ಲಾವಾ ಬ್ಲೇಜ್ 3 5G ಫೋನ್ ಬಿಡುಗಡೆಗೆ ಮುನ್ನ, ಪ್ರಮುಖ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಲಾವಾ ಬ್ಲೇಜ್ 3 5G ಫೋನಿನ ಮೈಕ್ರೋಸೈಟ್ ಅಮೆಜಾನ್ ಇಂಡಿಯಾದಲ್ಲಿ ಲೈವ್ ಆಗಿದೆ. ಇದರಲ್ಲಿ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಖಚಿತಪಡಿಸಲಾಗಿದೆ. ಇದು ಹಿಂಭಾಗದಲ್ಲಿ ಪ್ರೀಮಿಯಂ ಗಾಜಿನ ವಿನ್ಯಾಸವನ್ನು ಹೊಂದಿರುತ್ತದೆ. ಮುಂಬರುವ ಈ ಫೋನ್ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರುತ್ತದೆ. ಇದು ಎರಡು ಪ್ರತ್ಯೇಕ ಕ್ಯಾಮೆರಾ ರಿಂಗ್‌ಗಳು ಮತ್ತು LED ಫ್ಲ್ಯಾಷ್ ಅನ್ನು ಹೊಂದಿರುತ್ತದೆ. ಈ ಫೋನ್‌ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರಲಿದೆ.

Lava: ಅಗ್ಗದ ಬೆಲೆಯಲ್ಲಿ ಹೊಸ 5G ಫೋನ್.. 50MP ಕ್ಯಾಮೆರಾ.. 5000mAh ಬ್ಯಾಟರಿ!

ಲಾವಾ ಬ್ಲೇಜ್ 3 5G ಫೋನಿನ ನಿರೀಕ್ಷಿತ ಬೆಲೆ

ಲಾವಾ ಬ್ಲೇಜ್ 3 5G ಫೋನ್ ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಗೋಲ್ಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ವಿಶೇಷವಾಗಿ ಲಾವಾ ಬ್ಲೇಜ್ 3 5G ಫೋನ್ 9,999 ರೂ.ಗಳ ಬೆಲೆಗೆ ಬಿಡುಗಡೆಯಾಗಲಿದೆ. ಈ ಫೋನ್ ಅಮೆಜಾನ್‌ ಮೂಲಕ ಖರೀದಿಗೆ ಲಭ್ಯವಿರುತ್ತದೆ ಎಂದು ಹೇಳಲಾಗುತ್ತಿದೆ. ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕ ಮತ್ತು ಬೆಲೆಯನ್ನು ಇನ್ನೂ ಖಚಿತಪಡಿಸಿಲ್ಲ.

ಲಾವಾ ಬ್ಲೇಜ್ 3 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಹೊಸ ಲಾವಾ ಬ್ಲೇಜ್ 3 5G ಸ್ಮಾರ್ಟ್‌ಫೋನ್ 6.56 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ. ಈ ಡಿಸ್ಪ್ಲೇಯು 90Hz ರಿಫ್ರೆಶ್ ರೇಟ್, 600 ನೀಟ್ಸ್‌ಗಳ ಬ್ರೈಟ್‌ನೆಸ್ ಮತ್ತು ಉತ್ತಮ ಭದ್ರತೆಯನ್ನು ಹೊಂದಿದೆ. ವಿಶೇಷವಾಗಿ ಫೋನ್ ದೊಡ್ಡ ಡಿಸ್ಪ್ಲೇಯೊಂದಿಗೆ ಬಂದಿರುತ್ತದೆ.

ಪ್ರೊಸೆಸರ್: ಈ ಲಾವಾ ಬ್ಲೇಜ್ 3 5G ಫೋನ್ MediaTek ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಡೈಮೆನ್ಸಿಟಿ ಚಿಪ್‌ಸೆಟ್ ಸುಧಾರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಜೊತೆಗೆ, ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಸೌಲಭ್ಯದೊಂದಿಗೆ ಹೊರಬರಲಿದೆ. ಈ ಫೋನಿಗೆ Android ನವೀಕರಣಗಳು ಮತ್ತು ಭದ್ರತಾ ನವೀಕರಣಗಳು ಲಭ್ಯವಿರುತ್ತದೆ.

ಸ್ಟೋರೇಜ್: ಲಾವಾ ಬ್ಲೇಜ್ 3 5G ಸ್ಮಾರ್ಟ್‌ಫೋನ್ 6GB RAM (6GB ವರ್ಚುವಲ್ RAM) ಮತ್ತು 128GB ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಲಿದೆ. ಹೆಚ್ಚುವರಿಯಾಗಿ, ಈ ಫೋನ್ ಮೆಮೊರಿ ವಿಸ್ತರಣೆಗೆ ಬೆಂಬಲವನ್ನು ಹೊಂದಿದೆ. ನೀವು ಮೆಮೊರಿ ಕಾರ್ಡ್ ಅನ್ನು ಬಳಸಲು ಈ ಫೋನ್ ಮೈಕ್ರೋ SD ಕಾರ್ಡ್ ಸ್ಲಾಟ್ ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ: ಈ ಹೊಸ ಲಾವಾ ಬ್ಲೇಜ್ 3 5G ಮೊಬೈಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹೊಂದಿರಲಿದೆ. ಈ ಫೋನಿನ ಸಹಾಯದಿಂದ ನೀವು ಅದ್ಭುತ ಚಿತ್ರಗಳನ್ನು ತೆಗೆಯಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸಹ ಹೊಂದಿದೆ.

ಬ್ಯಾಟರಿ: ಲಾವಾ ಬ್ಲೇಜ್ 3 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ನೀವು, ಫೋನ್ ಖರೀದಿಸುವ ಚಾರ್ಜಿಂಗ್‌ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಫೋನ್ ದೀರ್ಘ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು 18 ವ್ಯಾಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.

ಇತರೆ ವೈಶಿಷ್ಟ್ಯಗಳು: ಲಾವಾ ಬ್ಲೇಜ್ 3 5G ಫೋನ್ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಈ ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು 3.5 ಎಂಎಂ ಆಡಿಯೊ ಜ್ಯಾಕ್‌ನೊಂದಿಗೆ ಬರುತ್ತದೆ. ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Lava Blaze 3 5G price, key specifications officially revealed before launch: what to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+