ಭಾರತಕ್ಕೆ Lava Blaze AMOLED 2 5G ಎಂಟ್ರಿ: ಬೆಲೆ ಹಾಗೂ ಫೀಚರ್ಸ್ ನೋಡಿ!
ಭಾರತೀಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Lava, ತನ್ನ ಹೊಸ ಸ್ಮಾರ್ಟ್‌ಫೋನ್ Lava Blaze AMOLED 2 5G ಅನ್ನು ದೇಶದಲ್ಲಿಂದು (ಆಗಸ್ಟ್ 13) ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆಯೇ, 120Hz ರಿಫ್ರೆಶ್ ರೇಟ್ ಸಾಮರ್ಥ್ಯದ ಫುಲ್-HD+ AMOLED ಡಿಸ್‌ಪ್ಲೇ, ಟೆಕ್ ಡೈಮೆನ್ಸಿಟಿ 7060 SoC ಪ್ರೊಸೆಸರ್ ಮತ್ತು 5,000mAh ಬ್ಯಾಟರಿಯಂತಹ ಫೀಚರ್ಸ್ ಹೊತ್ತು ಈ ಸ್ಮಾರ್ಟ್‌ಫೋನ್ ಪರಿಚಯಗೊಂಡಿದ್ದು, ಬೆಲೆ ಕೂಡ ಉತ್ತಮವಾಗಿ ಕಾಣುತ್ತಿದೆ. ಹಾಗಾದರೆ, ಹೊಸ Lava Blaze AMOLED 2 5G ಸ್ಮಾರ್ಟ್‌ಪೋನ್ ಹೇಗಿದೆ?, ಬೆಲೆ ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ
Lava Blaze AMOLED 2 5G: ಪ್ರಮುಖ ವೈಶಿಷ್ಟ್ಯಗಳು
ಹೆಸರಿನಲ್ಲೇ ಸೂಚಿಸಿರುವಂತೆ ಈ ಹೊಸ Lava Blaze AMOLED 2 5G ಸ್ಮಾರ್ಟ್‌ಫೋನ್‌ನ 6.67-ಇಂಚಿನ ಫುಲ್-HD+ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೆಯು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಮತ್ತು ಇದರ ಹೋಲ್-ಪಂಚ್ ವಿನ್ಯಾಸವು ಉತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಭದ್ರತೆಯ ದೃಷ್ಟಿಯಿಂದ, ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಇದರ ಜೊತೆಗೆ, ಇದು ಧೂಳು ಮತ್ತು ಸ್ಪ್ಲಾಶ್‌ಗಳಿಂದ ರಕ್ಷಣೆಗಾಗಿ IP64 ರೇಟಿಂಗ್ ಅನ್ನು ಪಡೆದುಕೊಂಡಿದೆ.

ಕಾರ್ಯನಿರ್ವಹಣೆ ವಿಭಾಗದಲ್ಲಿ, ಈ ಫೋನ್ 6GB LPDDR5 RAM ಮತ್ತು 128GB UFS 3.1 ಸಂಗ್ರಹಣೆಯೊಂದಿಗೆ ಜೋಡಿಸಲಾದ ಶಕ್ತಿಯುತ ಮೀಡಿಯಾ ಟೆಕ್ ಡೈಮೆನ್ಸಿಟಿ 7060 SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಭವಿಷ್ಯದಲ್ಲಿ ಆಂಡ್ರಾಯ್ಡ್ 16 ಗೆ ಅಪ್‌ಗ್ರೇಡ್ ಆಗುತ್ತದೆ. ಇದರೊಂದಿಗೆ ಎರಡು ವರ್ಷಗಳ ಕಾಲ ಭದ್ರತಾ ನವೀಕರಣಗಳನ್ನು ಸಹ ಒದಗಿಸಲಾಗುವುದು ಎಂದು ಕಂಪನಿ ಖಚಿತಪಡಿಸಿದ್ದು, ಕಾರ್ಯಕ್ಷಮತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ Lava Blaze AMOLED 2 5G ಫೋನಿನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದ್ದು, ಇದು ಸೋನಿ IMX752 ಸೆನ್ಸಾರ್ ಮತ್ತು LED ಫ್ಲ್ಯಾಶ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಬ್ಯಾಟರಿ ಬಾಳಿಕೆಯ ವಿಷಯದಲ್ಲಿ, ಈ ಫೋನ್ ದೀರ್ಘಕಾಲ ಬಾಳಿಕೆ ಬರುವಂತಹ 5,000mAh ಬ್ಯಾಟರಿಯನ್ನು ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇನ್ನುಳಿದಂತೆ, ಇದರ ಸ್ಟೀರಿಯೊ ಸ್ಪೀಕರ್‌ಗಳು ಉತ್ತಮ ಆಡಿಯೊ ಅನುಭವ ನೀಡಿದರೆ, ಇದರ ವಿಶೇಷ ಕೂಲಿಂಗ್ ಚೇಂಬರ್ ಫೋನ್ ಬಿಸಿಯಾಗುವುದನ್ನು ತಡೆಯುತ್ತದೆ. ಈ ಫೋನ್ 7.55mm ದಪ್ಪ ಮತ್ತು 174g ತೂಕವನ್ನು ಹೊಂದಿದ್ದು, ಹಗುರ ಮತ್ತು ಬಳಸಲು ಸುಲಭವಾಗಿದೆ ಎಂದು ಕಂಪೆನಿ ತಿಳಿಸಿದೆ.
Lava Blaze AMOLED 2 5G: ಬೆಲೆ ಎಷ್ಟು?
ಭಾರತದಲ್ಲಿ Lava Blaze AMOLED 2 5G ಫೋನ್ 6GB RAM ಮತ್ತು 128GB ಸಂಗ್ರಹಣೆಯೊಂದಿಗೆ ಕೇವಲ ಒಂದು ಮಾದರಿಯಲ್ಲಿ ಪರಿಚಯಗೊಂಡಿದ್ದು, ಇದರ ಬೆಲೆ ₹13,499 ಗಳಾಗಿವೆ. ಗ್ರಾಹಕರು ಆಗಸ್ಟ್ 16 ರಿಂದ ಅಮೆಜಾನ್ ಮೂಲಕ ಈ ಫೋನ್ ಅನ್ನು ಫೆದರ್ ವೈಟ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಎರಡು ಬಣ್ಣಗಳಲ್ಲಿ ಖರೀದಿಸಬಹುದು. ನಿರೀಕ್ಷೆಯಂತೆಯೇ, Lava ಕಂಪನಿಯು ಈ ಹೊಸ ಫೋನ್‌ಗೆ ಮನೆ ಬಾಗಿಲಿಗೆ ಮಾರಾಟದ ನಂತರದ ಸೇವೆಯನ್ನು (after-sales service) ಒದಗಿಸುವುದಾಗಿ ಖಚಿತಪಡಿಸಿದೆ
ಈ ಹೊಸ Lava Blaze AMOLED 2 5G ಸ್ಮಾರ್ಟ್‌ಫೋನ್ ಆಕರ್ಷಕ ವೈಶಿಷ್ಟ್ಯಗಳು, ಉತ್ತಮ ಕಾರ್ಯಕ್ಷಮತೆ ಮತ್ತು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಒಂದು ಉತ್ತಮ ಆಯ್ಕೆಯಾಗಬಹುದು. ಮತ್ತು ಮನೆ ಬಾಗಿಲಿಗೆ ಮಾರಾಟದ ನಂತರದ ಸೇವೆ ಗ್ರಾಹಕರಿಗೆ ಒಂದು ಉತ್ತಮ ಅನುಭವವನ್ನು ನೀಡಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








