Home
ಮೊಬೈಲ್

3000 ರಿಯಾಯಿತಿ! 64MP ಕ್ಯಾಮೆರಾ, 32MP ಸೆಲ್ಫಿ ಕ್ಯಾಮೆರಾ; ಕಡಿಮೆ ಬೆಲೆಗೆ Lava ಫೋನ್

ಲಾವಾ ಮೊಬೈಲ್‌ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ. ಈ ಸೊಗಸಾದ 5G ಫೋನನ್ನು ಬೊಂಬಾಟ್‌ ರಿಯಾಯಿತಿಯೊಂದಿಗೆ ಖರೀದಿ ಲಭ್ಯವಿದೆ. ಹೌದು, ಲಾವಾ ಬ್ಲೇಜ್ ಕರ್ವ್ 5G (Lava Blaze Curve 5G) ಸ್ಮಾರ್ಟ್‌ಫೋನ್ ಬೆಲೆ ಭಾರೀ ಇಳಿಕೆಯಾಗಿದೆ. ಲಾವಾ ಕಂಪನಿಯು ಮಾರ್ಚ್‌ ತಿಂಗಳಲ್ಲಿ ಈ ಫೋನನ್ನು ಬಿಡುಗಡೆ ಮಾಡಿತು. ಇದು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಭಾರೀ ಸದ್ದು ಮಾಡಿತ್ತು. ನೀವು ಅಮೇಜಾನ್‌ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಬನ್ನಿ ಈ ಫೋನಿನ ಮೂಲ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ.

ಲಾವಾ ಬ್ಲೇಜ್ ಕರ್ವ್ 5G ಖರೀದಿ ಮೇಲೆ 3,000 ರೂ. ರಿಯಾಯಿತಿ ಮತ್ತು ಬ್ಯಾಂಕ್ ಆಫರ್‌ ನೀಡಲಾಗುತ್ತಿದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 8GB RAM + 256GB ಸ್ಟೋರೇಜ್‌, 5000mAh ಸಾಮರ್ಥ್ಯ ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಬಿಡುಗಡೆ ಬೆಲೆಗಿಂತ ಕಡಿಮೆಗೆ ಮಾರಾಟವಾಗುತ್ತಿದೆ.

3000 ರಿಯಾಯಿತಿ! 64MP ಕ್ಯಾಮೆರಾ, 32MP ಸೆಲ್ಫಿ ಕ್ಯಾಮೆರಾ; ಕಡಿಮೆ ಬೆಲೆಗೆ..

ಲಾವಾ ಬ್ಲೇಜ್ ಕರ್ವ್ 5G ಹೊಸ ಬೆಲೆ ಮತ್ತು ಆಫರ್‌ಗಳು

8GB RAM + 128GB ಸ್ಟೋರೇಜ್‌ ಬೆಲೆ = 17,999 ರೂ.
ಆಫರ್ ಬೆಲೆ = 14,999 ರೂ.

8GB RAM + 256GB ಸ್ಟೋರೇಜ್‌ ಬೆಲೆ = 18,999 ರೂ.
ಆಫರ್ ಬೆಲೆ = 15,999 ರೂ.

ಲಾವಾ ಬ್ಲೇಜ್ ಕರ್ವ್ 5G ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್‌, 8GB RAM + 256GB ಸ್ಟೋರೇಜ್‌ ಪಾಂತರಗಳಲ್ಲಿ ಲಭ್ಯವಿದೆ. ಈ ಫೋನ್ ಬೆಲೆಗಳು 17,999 ರೂ. ಮತ್ತು 18,999 ರೂ. ಆಗಿದೆ. ಪ್ರಸ್ತುತ, ಈ ಫೋನ್ ಅನ್ನು ಅಮೆಜಾನ್‌ನಲ್ಲಿ 3,000 ರೂ. ರಿಯಾಯಿತಿಯಲ್ಲಿ ಖರೀದಿಸಬಹುದು. ರಿಯಾಯಿತಿಯೊಂದಿಗೆ ಈ ಫೋನ್‌ನ 128GB ಸ್ಟೋರೇಜ್ ರೂಪಾಂತರದ ಬೆಲೆ 14,999 ರೂ.ಗೆ ಇಳಿಕೆಯಾಗಿದೆ. ಹಾಗೆಯೇ 256GB ಸ್ಟೋರೇಜ್ ರೂಪಾಂತರದ ಬೆಲೆ 15,999 ರೂ.ಗೆ ಮಾರಾಟವಾಗುತ್ತಿದೆ. ಈ ಫೋನ್ ಗ್ಲಾಸ್ ಐರನ್ ಮತ್ತು ಗ್ಲಾಸ್ ವಿರಿಡಿಯನ್ ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯು ಈ ಫೋನ್‌ಗೆ ಒಂದು ವರ್ಷದ ವ್ಯಾರಂಟಿ ನೀಡುತ್ತಿದೆ.

ಲಾವಾ ಬ್ಲೇಜ್ ಕರ್ವ್ 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ: ಲಾವಾ ಬ್ಲೇಜ್ ಕರ್ವ್ 5G ಫೋನ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಅಮೋಲೆಡ್ 3D ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 800 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ.

ಮೀಡಿಯಾ ಟೆಕ್ ಪ್ರೊಸೆಸರ್: ಲಾವಾ ಬ್ಲೇಜ್ ಕರ್ವ್ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ನೊಂದಿಗೆ ಬಂದಿದೆ. ಇದು ಎರಡು ವರ್ಷಗಳ OS ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ. ಇದು 8GB RAM + 256GB ವರೆಗಿನ ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದರೊಂದಿಗೆ, 8GB ವರ್ಚುವಲ್ RAM ತಂತ್ರಜ್ಞಾನವನ್ನು ಒದಗಿಸಲಾಗಿದೆ.

ಬೊಂಬಾಟ್‌ ಕ್ಯಾಮೆರಾ ಸೆಟಪ್: ಲಾವಾ ಬ್ಲೇಜ್ ಕರ್ವ್ 5G ಮೊಬೈಲ್ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಹಿಂದಿನ ಪ್ಯಾನೆಲ್‌ನಲ್ಲಿ 20X ಆಪ್ಟಿಕಲ್ ಜೂಮ್, 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜರ್: ಲಾವಾ ಬ್ಲೇಜ್ ಕರ್ವ್ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಇತರೆ ವೈಶಿಷ್ಟ್ಯಗಳು: ಲಾವಾ ಬ್ಲೇಜ್ ಕರ್ವ್ 5G ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಉತ್ತಮ ಆಡಿಯೋಗಾಗಿ ಡಾಲ್ಬಿ ಅಟ್ಮಾಸ್ ಸ್ಪೀಕರ್‌ಗಳನ್ನು ಸಹ ಹೊಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+