ಲಾವಾ ಡ್ರ್ಯಾಗನ್ 5G ಬಿಡುಗಡೆಗೆ ಇನ್ನು ಎರಡು ದಿನ: ಬೆಲೆ ಹಾಗೂ ಸ್ಪೆಕ್ಸ್ ನೋಡಿ!
ಭಾರತೀಯ ಮಾರುಕಟ್ಟೆಯಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಲಾವಾ ಕಂಪೆನಿಯು ಸಜ್ಜಾಗಿದ್ದು, 'ಲಾವಾ ಬ್ಲೇಜ್ ಡ್ರ್ಯಾಗನ್ 5G' (Lava Blaze Dragon 5G) ಹೆಸರಿನ ಹೊಸ ಫೋನ್ ಅನ್ನು ಇದೇ ಜುಲೈ 25 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಅನಾವರಣಗೊಳಿಸಲಿದೆ. ಈ ಫೋನ್‌ನ ಬಿಡುಗಡೆಗೂ ಮುನ್ನವೇ ಕಂಪನಿಯು ಇದರ ಪ್ರಮುಖ ವೈಶಿಷ್ಟ್ಯಗಳು, ವಿನ್ಯಾಸ, ಬಣ್ಣ ಆಯ್ಕೆಗಳು ಮತ್ತು ಬೆಲೆ ಶ್ರೇಣಿಯನ್ನು ಈಗಾಗಲೇ ಬಹಿರಂಗಪಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
ಲಾವಾ ಬ್ಲೇಜ್ ಡ್ರ್ಯಾಗನ್ 5G: ಬೆಲೆ ಮತ್ತು ಲಭ್ಯತೆ
ಮುಂಬರುವ ಲಾವಾ ಬ್ಲೇಜ್ ಡ್ರ್ಯಾಗನ್ 5G ಫೋನ್ ಬೆಲೆ ಕುರಿತು ಅಮೆಜಾನ್ ಮೈಕ್ರೋಸೈಟ್ ಮಾಹಿತಿ ನೀಡಿದ್ದು, ಇದು ₹10,000 ಕ್ಕಿಂತ ಕಡಿಮೆ ಇರಲಿದೆ ಎಂದು ತಿಳಿಸಿದೆ. ಪ್ರಚಾರದ ಪೋಸ್ಟರ್ ಕೂಡ "₹X,999" ಎಂದು ಟೀಸರ್ ಬಿಡುಗಡೆ ಮಾಡಿದೆ, ಇದು ಫೋನ್‌ನ ಆಕರ್ಷಕ ಆರಂಭಿಕ ಬೆಲೆಯನ್ನು ಸೂಚಿಸುತ್ತದೆ. ಗ್ರಾಹಕರು ಈ ಫೋನ್ ಅನ್ನು ಗೋಲ್ಡನ್ ಮಿಸ್ಟ್ ಮತ್ತು ಮಿಡ್‌ನೈಟ್ ಮಿಸ್ಟ್ ಎಂಬ ಎರಡು ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು.
ಲಾವಾ ಬ್ಲೇಜ್ ಡ್ರ್ಯಾಗನ್ 5G: ಪ್ರಮುಖ ವೈಶಿಷ್ಟ್ಯಗಳು
ಅಮೆಜಾನ್ ಮೈಕ್ರೋಸೈಟ್ ಬಹಿರಂಗಪಡಿಸಿರುವಂತೆ, ಲಾವಾ ಬ್ಲೇಜ್ ಡ್ರ್ಯಾಗನ್ 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 4 Gen 2 SoC ನಿಂದ ಚಾಲಿತವಾಗಲಿದೆ ಮತ್ತು 4GB LPDDR4x RAM ಮತ್ತು 128GB UFS 3.1 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಒಳಗೊಂಡಿರುತ್ತದೆ. ಅಲ್ಲದೆ, ಬಳಕೆದಾರರು 4GB ವರೆಗೆ ವರ್ಚುವಲ್ RAM ವಿಸ್ತರಣೆಯನ್ನು ಪಡೆಯಬಹುದು. ಸಾಫ್ಟ್‌ವೇರ್ ವಿಭಾಗದಲ್ಲಿ, ಲಾವಾ ಬ್ಲೇಜ್ ಡ್ರ್ಯಾಗನ್ 5G ಸ್ಟಾಕ್ ಆಂಡ್ರಾಯ್ಡ್ 15 ಔಟ್-ಆಫ್-ದಿ-ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಕ್ಲೀನ್ ಮತ್ತು ಅಪ್‌ಡೇಟೆಡ್ ಆಂಡ್ರಾಯ್ಡ್ ಅನುಭವವನ್ನು ನೀಡುತ್ತದೆ.
ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್ 20:9 ಆಕಾರ ಅನುಪಾತದ 6.74-ಇಂಚಿನ HD+ (720x1,612 ಪಿಕ್ಸೆಲ್‌ಗಳು) 2.5D ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್, 450 nits ಬ್ರೈಟ್‌ನೆಸ್ ಬೆಂಬಲಿಸುತ್ತದೆ. ಇದು ಸ್ಮೂತ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಅನುಭವವನ್ನು ನೀಡುತ್ತದೆ ಎಂದು ತಿಳಿಸಲಾಗಿದೆ. ವಿನ್ಯಾಸದ ದೃಷ್ಟಿಯಿಂದ, ಡಿಸ್ಪ್ಲೇ ತೆಳುವಾದ ಬೆಜೆಲ್‌ಗಳು, ಸ್ವಲ್ಪ ದಪ್ಪವಾದ ಚಿನ್ ಮತ್ತು ಮೇಲ್ಭಾಗದಲ್ಲಿ ಮಧ್ಯಕ್ಕೆ ಜೋಡಿಸಲಾದ ವಾಟರ್‌ಡ್ರಾಪ್-ಶೈಲಿಯ ನಾಚ್ ಅನ್ನು ಹೊಂದಿರುವಂತೆ ಕಾಣುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ 50-ಮೆಗಾಪಿಕ್ಸೆಲ್ ಸಂವೇದಕದಿಂದ ನಡೆಸಲ್ಪಡುವ ಅನಿರ್ದಿಷ್ಟ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿರುತ್ತದ. ಬ್ಯಾಟರಿ ವಿಭಾಗದಲ್ಲಿ, 5,000mAh ಬ್ಯಾಟರಿಯೊಂದಿಗೆ ಬರಲಿದೆ. ಇದು USB ಟೈಪ್-ಸಿ ಪೋರ್ಟ್ ಮೂಲಕ 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ, ಈ ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ ಎಂದು ತಿಳಿಸಲಾಗಿದೆ. ಸಧ್ಯಕ್ಕೆ ಇವಿಷ್ಟು ಪ್ರಮುಖ ವೈಶಿಷ್ಟ್ಯಗಳು ಅಧಿಕೃತವಾಗಿ ಬಹಿರಂಗವಾಗಿವೆ.
ಒಟ್ಟಾರೆಯಾಗಿ, ಲಾವಾ ಬ್ಲೇಜ್ ಡ್ರ್ಯಾಗನ್ 5G ಕೈಗೆಟುಕುವ ಬೆಲೆಯಲ್ಲಿ 5G ಕನೆಕ್ಟಿವಿಟಿ, ಉತ್ತಮ ಕಾರ್ಯಕ್ಷಮತೆ ಮತ್ತು ಆಕರ್ಷಕ ಕ್ಯಾಮೆರಾ ವೈಶಿಷ್ಟ್ಯಗಳನ್ನು ಬಯಸುವವರಿಗೆ ಉತ್ತಮ ಆಯ್ಕೆಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟು ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಲಾವಾ ಬ್ಲೇಜ್ ಡ್ರ್ಯಾಗನ್ 5G ಕುರಿತು ನಿಮ್ಮ ನಿರೀಕ್ಷೆಗಳೇನು? ಈ ಕೆಳಗೆ ಕಾಮೆಂಟ್ ಮಾಡಿ ನಮಗೆ ತಿಳಿಸಿ.


Click it and Unblock the Notifications