Home
ಮೊಬೈಲ್

ಲಾವಾ ಬ್ಲೇಜ್ ಡ್ರ್ಯಾಗನ್ 5G: ಕಡಿಮೆ ಬೆಲೆಯಲ್ಲಿ ಶಕ್ತಿಶಾಲಿ ಫೋನ್ ಬಿಡುಗಡೆ!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಲಾವಾ ಬ್ಲೇಜ್ ಡ್ರ್ಯಾಗನ್ 5G ಸ್ಮಾರ್ಟ್‌ಫೋನ್ ಇಂದು (ಜುಲೈ 25) ದೇಶದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ ಸ್ನಾಪ್‌ಡ್ರಾಗನ್ ಪ್ರೊಸೆಸರ್, 120Hz HD+ ಡಿಸ್ಪ್ಲೇ, LPDDR4x RAM, UFS 3.1 ಸ್ಟೋರೇಜ್ ಮತ್ತು 5,000mAh ಬ್ಯಾಟರಿಯಂತಹ ವೈಶಿಷ್ಟ್ಯಗಳೊಂದಿಗೆ ಈ ಫೋನ್ ಬಿಡುಗಡೆಯಾಗಿದ್ದು, ₹10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. ಹಾಗಾದರೆ, ಹೊಸ ಲಾವಾ ಬ್ಲೇಜ್ ಡ್ರ್ಯಾಗನ್ 5G ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ಲಾವಾ ಬ್ಲೇಜ್ ಡ್ರ್ಯಾಗನ್ 5G: ಪ್ರಮುಖ ವೈಶಿಷ್ಟ್ಯಗಳು,

ಈ ಹೊಸ ಲಾವಾ ಬ್ಲೇಜ್ ಡ್ರ್ಯಾಗನ್ 5G ಫೋನ್ 6.74-ಇಂಚಿನ HD+ (720x1,612 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 450 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ.

ಈ ಫೋನಿನಲ್ಲಿ 4GB LPDDR4x RAM ಮತ್ತು 128GB UFS 3.1 ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾದ, TSMC 4nm ಪ್ರಕ್ರಿಯೆಯನ್ನು ಆಧರಿಸಿದ ಸ್ನಾಪ್‌ಡ್ರಾಗನ್ 4 Gen 2 SoC ಪ್ರೊಸೆಸರ್ ಇದ್ದು, ಇದು 4GB ವರೆಗೆ ವರ್ಚುವಲ್ RAM ವಿಸ್ತರಣೆಯನ್ನು ಸಹ ಬೆಂಬಲಿಸುತ್ತದೆ. ಇಲ್ಲಿ ಗಮನಿಸಬೇಕಿರುವ ವಿಷಯವೆಂದರೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ನಿಂದ ಚಾಲಿತವಾಗಿರುವ ಮೊದಲ ಲಾವಾ ಫೋನ್ ಇದಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, ಲಾವಾ ಬ್ಲೇಜ್ ಡ್ರ್ಯಾಗನ್ 5G ಫೋನ್ ಹಿಂಭಾಗದಲ್ಲಿ AI-ಬೆಂಬಲಿತ 50-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ, ಜೊತೆಗೆ ಸೆಲ್ಫಿಗಾಗಿ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಈ ಹ್ಯಾಂಡ್‌ಸೆಟ್ 5,000mAh ಬ್ಯಾಟರಿಯನ್ನು ಹೊಂದಿದ್ದು, 18W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ (ಬಾಕ್ಸ್‌ನಲ್ಲಿ ಚಾರ್ಜರ್ ಲಭ್ಯವಿದೆ).

ಲಾವಾ ಬ್ಲೇಜ್ ಡ್ರ್ಯಾಗನ್ 5G: ಕಡಿಮೆ ಬೆಲೆಯಲ್ಲಿ ಶಕ್ತಿಶಾಲಿ ಫೋನ್ ಬಿಡುಗಡೆ!

ಸಾಫ್ಟ್‌ವೇರ್ ವಿಷಯದಲ್ಲಿ, ಬ್ಲೇಜ್ ಡ್ರ್ಯಾಗನ್ 5G ಆಂಡ್ರಾಯ್ಡ್ 15 ನಲ್ಲಿ ಸ್ಟಾಕ್ ಆಂಡ್ರಾಯ್ಡ್ ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ, ಇದು ಯಾವುದೇ ಬ್ಲೋಟ್‌ವೇರ್ ಅಥವಾ ಜಾಹೀರಾತುಗಳನ್ನು ಒಳಗೊಂಡಿಲ್ಲ. ಲಾವಾ ಒಂದು ಪ್ರಮುಖ OS ನವೀಕರಣ ಮತ್ತು ಎರಡು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಭರವಸೆ ನೀಡಿದೆ. ಸುರಕ್ಷತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ.

ಲಾವಾ ಬ್ಲೇಜ್ ಡ್ರ್ಯಾಗನ್ 5G:ಬೆಲೆ ಮತ್ತು ಲಭ್ಯತೆ

ಲಾವಾ ಬ್ಲೇಜ್ ಡ್ರ್ಯಾಗನ್ 5G ಯ 4GB RAM ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆ ₹9,999. ಆದಾಗ್ಯೂ, ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸಮಯದಲ್ಲಿ, ಲಾವಾ ₹1,000 ಬ್ಯಾಂಕ್ ರಿಯಾಯಿತಿ ನೀಡುವುದಾಗಿ ಘೋಷಿಸಿದೆ, ಇದರಿಂದ ಫೋನ್‌ನ ಪರಿಣಾಮಕಾರಿ ಬೆಲೆ ₹8,999 ಕ್ಕೆ ಇಳಿಯುತ್ತದೆ.

ಇದೇ ಅವಧಿಯಲ್ಲಿ ಯಾವುದೇ ಸ್ಮಾರ್ಟ್‌ಫೋನ್ ವಿನಿಮಯದ ಮೇಲೆ ಹೆಚ್ಚುವರಿ ₹1,000 ರಿಯಾಯಿತಿಯನ್ನು ಸಹ ಕಂಪನಿ ನೀಡಲಿದೆ. ಈ ಹೊಸ ಲಾವಾ ಬ್ಲೇಜ್ ಡ್ರ್ಯಾಗನ್ 5G ಗೋಲ್ಡನ್ ಮಿಸ್ಟ್ ಮತ್ತು ಮಿಡ್‌ನೈಟ್ ಮಿಸ್ಟ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಮತ್ತು ಇದು ಆಗಸ್ಟ್ 1 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ನಲ್ಲಿ ಮಾರಾಟಕ್ಕೆ ಬರಲಿದೆ ಎಂದು ಕಂಪೆನಿಯು ತಿಳಿಸಿದೆ.

ನೀವು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿರುವ ಹಾಗೂ ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಒಂದು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ, ಈ ಹೊಸ ಲಾವಾ ಬ್ಲೇಜ್ ಡ್ರ್ಯಾಗನ್ 5G ಫೋನ್ ನಿಮ್ಮ ಆಯ್ಕೆಯಾಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Lava Blaze Dragon 5G phone is equipped with a 6.74-inch HD+ display, measuring 720 by 1,612 pixels, and provides a refresh rate of 120Hz along with a peak brightness of 450 nits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+