Home
ಮೊಬೈಲ್

Lava Blaze Duo 3 ಫೋನ್ ಬಿಡುಗಡೆ: ಡ್ಯುಯಲ್-ಸ್ಕ್ರೀನ್, ಆಕರ್ಷಕ ಬೆಲೆ!

ಭಾರತೀಯ ಮೊಬೈಲ್ ಬ್ರ್ಯಾಂಡ್ Lava ತನ್ನ ಬಹುನಿರೀಕ್ಷಿತ Lava Blaze Duo 3 ಸ್ಮಾರ್ಟ್‌ಫೋನ್ ಅನ್ನು ಇಂದು ಬಿಡುಗಡೆಗೊಳಿಸಿದೆ. ಮಧ್ಯಮ ಬೆಲೆ ವಿಭಾಗದಲ್ಲಿ ಹೊಸ ಆಯ್ಕೆಯಾಗಿ ಬಂದಿರುವ ಈ ಫೋನ್, ಡ್ಯುಯಲ್-ಸ್ಕ್ರೀನ್ ವಿನ್ಯಾಸದೊಂದಿಗೆ ಪರಿಚಯಗೊಂಡಿದ್ದು, ಸಾಮಾನ್ಯ ಬಳಕೆದಾರರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದಂತೆ ಕಾಣುತ್ತಿದೆ. ಹಾಗಾದರೆ, ಹೊಸ Lava Blaze Duo 3 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಮತ್ತು ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

Lava Blaze Duo 3: ಪ್ರಮುಖ ವೈಶಿಷ್ಟ್ಯಗಳು
Lava Blaze Duo 3 ನಲ್ಲಿ 6.67 ಇಂಚಿನ ಫುಲ್ HD+ AMOLED ಡಿಸ್‌ಪ್ಲೇ ಅಳವಡಿಸಲಾಗಿದ್ದು, ಇದು 120Hz ರಿಫ್ರೆಶ್ ರೇಟ್‌ ಅನುಭವವನ್ನು ನೀಡುತ್ತದೆ. ಇದರ ಪ್ರಮುಖ ಆಕರ್ಷಣೆಯಾಗಿಹಿಂಭಾಗದ 1.6 ಇಂಚಿನ AMOLED ಸೆಕೆಂಡರಿ ಸ್ಕ್ರೀನ್, ನೋಟಿಫಿಕೇಶನ್‌ಗಳನ್ನು ತ್ವರಿತವಾಗಿ ಪರಿಶೀಲಿಸಲು, ಮ್ಯೂಸಿಕ್ ಕಂಟ್ರೋಲ್ ಮತ್ತು ಸೆಲ್ಫಿ ಪ್ರಿವ್ಯೂ ಪಡೆಯಲು ಸಹಾಯ ಮಾಡುತ್ತದೆ. ಈ ಫೀಚರ್‌ನಿಂದ ಫೋನ್ ಬಳಕೆ ಇನ್ನಷ್ಟು ಸುಲಭ ಮತ್ತು ಸಮಯ ಉಳಿತಾಯವಾಗುತ್ತದೆ ಎಂದು ಕಂಪೆನಿಯು ತಿಳಿಸಿದೆ.

ಕಾರ್ಯಕ್ಷಮತೆಯ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ MediaTek Dimensity 7060 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 2.6GHz ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ 6GB LPDDR5 ರ್ಯಾಮ್ ಮತ್ತು 128GB UFS 3.1 ಸ್ಟೋರೇಜ್ ಬೆಂಬಲ ನೀಡಲಾಗಿದೆ. ಈ ಸಂಯೋಜನೆ ದಿನನಿತ್ಯದ ಬಳಕೆ, ಮಲ್ಟಿಟಾಸ್ಕಿಂಗ್ ಮತ್ತು ಲೈಟ್ ಗೇಮಿಂಗ್‌ಗೆ ಸೂಕ್ತವಾಗಿದೆ. ಬ್ಯಾಟರಿ ವಿಭಾಗದಲ್ಲಿ, 5,000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿದ್ದು, ದೀರ್ಘಕಾಲದ ಬಳಕೆಯನ್ನು ನೀಡುವ ಶಕ್ತಿ ಹೊಂದಿದೆ.

Lava Blaze Duo 3 ಫೋನ್ ಬಿಡುಗಡೆ: ಡ್ಯುಯಲ್-ಸ್ಕ್ರೀನ್, ಆಕರ್ಷಕ ಬೆಲೆ!

ಕ್ಯಾಮೆರಾ ವಿಭಾಗದಲ್ಲಿ Lava Blaze Duo 3 50 ಮೆಗಾಪಿಕ್ಸೆಲ್ Sony IMX752 ಸೆನ್ಸಾರ್ ಹೊಂದಿರುವ AI ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ವಿಶೇಷವಾಗಿ, ಸೆಕೆಂಡರಿ ರಿಯರ್ ಡಿಸ್‌ಪ್ಲೇ ಮೂಲಕ ಮುಖ್ಯ ಕ್ಯಾಮೆರಾದಿಂದಲೇ ಸೆಲ್ಫಿ ತೆಗೆಯುವ ಅವಕಾಶ ದೊರಕುತ್ತದೆ, ಇದು ಫೋಟೋಗ್ರಫಿ ಪ್ರಿಯರಿಗೆ ಹೆಚ್ಚುವರಿ ಲಾಭ ಎಂದು ಕಂಪೆನಿಯು ಹೇಳಿಕೊಂಡಿದೆ.

ಇದಲ್ಲದೆ, ಈ Lava Blaze Duo 3 ಫೋನಿನಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್‌ಲಾಕ್, ಸ್ಟೀರಿಯೋ ಸ್ಪೀಕರ್‌ಗಳು, IR ಬ್ಲಾಸ್ಟರ್ ಮತ್ತು USB Type-C ಪೋರ್ಟ್ ಮುಂತಾದ ಫೀಚರ್‌ಗಳಿವೆ. ಸಾಫ್ಟ್‌ವೇರ್ ದೃಷ್ಟಿಯಿಂದ ಇದು Android 15 ನಲ್ಲಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ Android 16 ಅಪ್‌ಡೇಟ್ ದೊರೆಯಲಿದೆ. ಜೊತೆಗೆ ಎರಡು ವರ್ಷಗಳ ಭದ್ರತಾ ಅಪ್‌ಡೇಟ್ ಭರವಸೆ ಕೂಡ ಒದಗಿಸಲಾಗಿದೆ.

Lava Blaze Duo 3: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Lava Blaze Duo 3 ಸ್ಮಾರ್ಟ್‌ಫೋನ್ ಅನ್ನು ₹16,999 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದ್ದು, Imperial Blue ಮತ್ತು Moonlight Black ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಮಾರಾಟಕ್ಕೆ ಬರಲಿದೆ. Amazon ಮೂಲಕ ಈ ಫೋನ್ ಖರೀದಿಸಬಹುದಾಗಿದ್ದು, ಮಾರಾಟವು ಜನವರಿ 19, 2026 ರಿಂದ ಪ್ರಾರಂಭವಾಗಿದೆ. ಒಟ್ಟಾರೆಯಾಗಿ, ಡ್ಯುಯಲ್ AMOLED ಡಿಸ್‌ಪ್ಲೇ ಮತ್ತು ಪ್ರೀಮಿಯಂ ಫೀಚರ್‌ಗಳೊಂದಿಗೆ ಈ ಬೆಲೆ ವಿಭಾಗದಲ್ಲಿ Lava Blaze Duo 3 ಗಮನಾರ್ಹ ಆಯ್ಕೆಯಾಗಿ ಕಾಣಿಸುತ್ತಿದೆ.

Best Mobiles in India

English summary
Lava Blaze Duo 3 has been launched in India as an affordable mid-range smartphone featuring a unique dual-screen design, aimed at offering practical features and a stylish experience for everyday users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+