ಡ್ಯುಯಲ್ ಡಿಸ್ಪ್ಲೆಯ 5G ಫೋನ್: Lava Blaze Duo 3 ಲಾಂಚ್ ಡೇಟ್ ಫಿಕ್ಸ್!
ದೇಶೀಯ ಮೊಬೈಲ್ ಬ್ರ್ಯಾಂಡ್ Lava ತನ್ನ ಡ್ಯುಯಲ್ ಡಿಸ್ಪ್ಲೆಯ 5G ಫೋನ್ Lava Blaze Duo 3 ಅನ್ನು ಇದೇ ಜನವರಿ 19ರಂದು ಬಿಡುಗಡೆಗೊಳಿಸುವುದಾಗಿ ದೃಢಪಡಿಸಿದೆ. Lava Blaze Duo 3 ಮೂಲಕ ದೇಶದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಕಂಪೆನಿಯುಹೊಸ ಪ್ರಯೋಗಕ್ಕೆ ಸಜ್ಜಾಗಿದ್ದು, ಬಿಡುಗಡೆಯ ಮುನ್ನವೇ ಟೀಸರ್ಗಳು ಮತ್ತು ಆನ್ಲೈನ್ ಲಿಸ್ಟಿಂಗ್ಗಳ ಮೂಲಕ ಫೋನ್ನ ವಿನ್ಯಾಸ, ಡಿಸ್ಪ್ಲೇ ಮತ್ತು ಕಾರ್ಯಕ್ಷಮತೆ ಕುರಿತ ಪ್ರಮುಖ ಮಾಹಿತಿಗಳು ಗಮನೆಳೆಯುತ್ತಿವೆ. ಡ್ಯುಯಲ್ ಡಿಸ್ಪ್ಲೇ ತಂತ್ರಜ್ಞಾನ ಮತ್ತು ಹೊಸ ಆಂಡ್ರಾಯ್ಡ್ ಆವೃತ್ತಿಯೊಂದಿಗೆ ಈ ಫೋನ್ ಕುತೂಹಲ ಮೂಡಿಸಿದೆ.
Lava Blaze Duo 3: ವಿನ್ಯಾಸ
Lava Blaze Duo 3 ನ ವಿನ್ಯಾಸ ಆಧುನಿಕ ಹಾಗೂ ಪ್ರೀಮಿಯಂ ಲುಕ್ ನೀಡುವಂತಿದೆ. ಮ್ಯಾಟ್ ಫಿನಿಷ್ ಹೊಂದಿರುವ ಫ್ಲಾಟ್ ಬ್ಯಾಕ್ ಪ್ಯಾನೆಲ್, ಸ್ಲಿಮ್ ಬಾಡಿ ಮತ್ತು ಮೃದುವಾದ ಎಡ್ಜ್ಗಳು ಫೋನ್ಗೆ ಆಕರ್ಷಕ ಲುಕ್ ನೀಡುತ್ತವೆ. ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಒಳಗೆ ಅಳವಡಿಸಿರುವ ಸೆಕೆಂಡರಿ ಡಿಸ್ಪ್ಲೇ ಈ ಫೋನ್ನ ಪ್ರಮುಖ ವಿಶೇಷತೆಯಾಗಿದ್ದು, ಇದು ದಿನನಿತ್ಯದ ಬಳಕೆಯಲ್ಲಿ ತ್ವರಿತ ಮಾಹಿತಿ ಪಡೆಯಲು ಸಹಾಯಕವಾಗಲಿದೆ ಎಂದು ಹೇಳಲಾಗಿದೆ. ಇನ್ನು ಈ ಫೋನ್ ಕಪ್ಪು ಮತ್ತು ಆಫ್-ವೈಟ್ ಬಣ್ಣಗಳಲ್ಲಿ ಫೋನ್ ಲಭ್ಯವಾಗುವ ನಿರೀಕ್ಷೆ ಇದೆ.

Lava Blaze Duo 3: ಪ್ರಮುಖ ವೈಶಿಷ್ಟ್ಯಗಳು
ಡಿಸ್ಪ್ಲೇ ವಿಭಾಗದಲ್ಲಿ Lava Blaze Duo 3 ಫೋನ್ 6.6 ಇಂಚಿನ ಫುಲ್ HD+ AMOLED ಸ್ಕ್ರೀನ್ ಹೊಂದಿದ್ದು, ಗರಿಷ್ಠ 1,000 ನಿಟ್ಸ್ ಬ್ರೈಟ್ನೆಸ್ ನೀಡುತ್ತದೆ. ಹಿಂಭಾಗದ ಸೆಕೆಂಡರಿ ಸ್ಕ್ರೀನ್ ಗಾತ್ರ 1.6 ಇಂಚು ಇದೆ. ಕಾರ್ಯಕ್ಷಮತೆಗೆ ಈ ಸ್ಮಾರ್ಟ್ಫೋನ್ನಲ್ಲಿ MediaTek Dimensity 7060 ಪ್ರೊಸೆಸರ್ ಬಳಸಲಾಗಿದೆ. ಇದಕ್ಕೆ 6GB LPDDR5 RAM ಮತ್ತು 128GB UFS 3.1 ಸ್ಟೋರೇಜ್ ಬೆಂಬಲವಿದ್ದು, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ನಲ್ಲಿ ಸ್ಮೂತ್ ಅನುಭವ ನೀಡುವ ಗುರಿ ಹೊಂದಿದೆ. ದಿನನಿತ್ಯದ ಬಳಕೆಗೆ ಇದು ಸಮತೋಲನದ ಪರ್ಫಾರ್ಮೆನ್ಸ್ ನೀಡುವ ಸಾಧ್ಯತೆ ಇದೆ.
Lava Blaze Duo 3 ನ ಹಿಂಭಾಗದಲ್ಲಿ ಡ್ಯುಯೋ ಕ್ಯಾಮೆರಾ ಸೆಟ್ಅಪ್ ನೀಡಲಾಗಿದ್ದು, ಇದರಲ್ಲಿ AI ಬೆಂಬಲಿತ 50 ಮೆಗಾಪಿಕ್ಸೆಲ್ Sony IMX752 ಪ್ರೈಮರಿ ಸೆನ್ಸರ್ ಸೇರಿದೆ. ಈ ಕ್ಯಾಮೆರಾ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ಫಲಿತಾಂಶ ನೀಡಲು ಸಹಾಯ ಮಾಡುವ ಸಾಧ್ಯತೆ ಇದೆ. ಸೆಕೆಂಡರಿ ಡಿಸ್ಪ್ಲೇ ಮೂಲಕ ನೋಟಿಫಿಕೇಶನ್ಗಳು, ಸಂಗೀತ ನಿಯಂತ್ರಣ ಮತ್ತು ರಿಯರ್ ಕ್ಯಾಮೆರಾ ಸೆಲ್ಫಿ ಪ್ರೀವ್ಯೂಗಳನ್ನು ಸುಲಭವಾಗಿ ನೋಡಬಹುದು. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಬ್ಯಾಟರಿ ವಿಭಾಗದಲ್ಲಿ, Lava Blaze Duo 3 ಫೋನ್ನಲ್ಲಿ 5,000mAh ಬ್ಯಾಟರಿ ಇದ್ದು, 33W ಫಾಸ್ಟ್ ಚಾರ್ಜಿಂಗ್ ಬೆಂಬಲ ದೊರೆಯುತ್ತದೆ. ಜೊತೆಗೆ ಸ್ಟೀರಿಯೊ ಸ್ಪೀಕರ್ಗಳು, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್, IR ಬ್ಲಾಸ್ಟರ್ ಮತ್ತು IP64 ರೇಟಿಂಗ್ (ಧೂಳು ಮತ್ತು ನೀರಿನ ಸಿಂಪಳ ರಕ್ಷಣೆ) ನೀಡಲಾಗಿದೆ. 5G, Bluetooth 5.2 ಮತ್ತು ವಿವಿಧ ಗ್ಲೋಬಲ್ ನ್ಯಾವಿಗೇಶನ್ ಸಿಸ್ಟಮ್ಗಳಿಗೆ ಬೆಂಬಲವೂ ಇದೆ.ಫೋನ್ ನೇರವಾಗಿ Android 15 ಮೇಲೆ ಕಾರ್ಯನಿರ್ವಹಿಸುವುದರಿಂದ, ಬಳಕೆದಾರರಿಗೆ ಹೊಸ ಫೀಚರ್ಗಳು ಮತ್ತು ಉತ್ತಮ ಭದ್ರತಾ ಅಪ್ಡೇಟ್ ದೊರೆಯಬಹುದು.
ಒಟ್ಟಾರೆಯಾಗಿ, Lava Blaze Duo 3 ಭಾರತೀಯ ಬಳಕೆದಾರರಿಗೆ ವಿಭಿನ್ನ ಮತ್ತು ಉಪಯುಕ್ತ ಅನುಭವ ನೀಡುವ ಉದ್ದೇಶವನ್ನು ಹೊಂದಿದೆ. ಇದರ ಡ್ಯುಯಲ್ ಡಿಸ್ಪ್ಲೇ ವಿನ್ಯಾಸ, AMOLED ಸ್ಕ್ರೀನ್ ಮತ್ತು ಹೊಸ ಆಂಡ್ರಾಯ್ಡ್ ಆವೃತ್ತಿಯೊಂದಿಗೆ ಈ ಫೋನ್ ಮಧ್ಯಮ ವರ್ಗದ ಗ್ರಾಹಕರ ಗಮನ ಸೆಳೆಯುವ ಸಾಧ್ಯತೆ ಹೆಚ್ಚಿದೆ. ಜನವರಿ 19ರ ಬಿಡುಗಡೆ ನಂತರ ಇದರ ಬೆಲೆ ಮತ್ತು ಮಾರಾಟ ವಿವರಗಳು ತಿಳಿಯಲಿದ್ದು, ಲಾವಾ ಬ್ರ್ಯಾಂಡ್ನ ಮುಂದಿನ ಹೆಜ್ಜೆಯಾಗಿ ಇದನ್ನು ನೋಡಲಾಗುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?..ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








