Lava Blaze X 5G ಸೇಲ್: ಖರೀದಿಸಲು 5 ಕಾರಣಗಳು.. ಬೆಲೆ, ಆಫರ್ ಏನು?
ಭಾರತೀಯ ಟೆಕ್ ಕಂಪನಿ ಲಾವಾ ಬಜೆಟ್ ವಿಭಾಗದಲ್ಲಿ ಹೊಸ ಸ್ಮಾರ್ಟ್‌ಫೋನ್ 'ಲಾವಾ ಬ್ಲೇಜ್ ಎಕ್ಸ್' (Lava Blaze X 5G) ಅನ್ನು ಬಿಡುಗಡೆ ಮಾಡಿದೆ. ಇದು 'Blaze' ಸರಣಿಯ ನೂತನ 5G ಸ್ಮಾರ್ಟ್‌ಫೋನ್ ಆಗಿದೆ. ಇದು ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಸೈ ಎನಿಸಿಕೊಂಡಿದೆ. ಅಂದಹಾಗೆ, ಈ ಸ್ಮಾರ್ಟ್‌ಫೋನ್ ಅಮೆಜಾನ್ 'ಪ್ರೈಮ್ ಡೇ ಸೇಲ್' (Amazon Prime Day Sale 2024) ಮೂಲಕ ಸೇಲ್ ಶುರು ಮಾಡಿದೆ. ಈ ಫೋನಿನ ವಿಶೇಷತೆಗಳೇನು? ಬೆಲೆ ಎಷ್ಟು? ಅಮೇಜಾನ್ ಏನೆಲ್ಲಾ ಆಫರ್‌ಗಳನ್ನು ಘೋಷಿಸಿದೆ? ಇಂಬಿತ್ಯಾದಿ ವಿವರಗಳನ್ನು ನೋಡೋಣ ಬನ್ನಿ
15,000 ರೂ. ಬಜೆಟ್‌ನಲ್ಲಿ ಉತ್ತಮ 5G ಸ್ಮಾರ್ಟ್‌ಫೋನ್ ಬಯಸುವವರಿಗೆ ಲಾವಾ ಬ್ಲೇಜ್ X 5G ಒಳ್ಳೆಯ ಆಯ್ಕೆಯಾಗಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. 64 ಮೆಗಾಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಇದೆ. ಇದು 6.67 ಇಂಚಿನ HD+ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಪಡೆದಿದೆ. 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

13,999 ರೂ.ಗೆ ಖರೀದಿಸುವ ಸುವರ್ಣಾವಕಾಶ: ಹೇಗೆ?
- 4GB + 128GB ಬೆಲೆ - ರೂ.14,999
- 6GB + 256GB ಬೆಲೆ - ರೂ.15,999
- 8GB + 256GB ಬೆಲೆ - ರೂ.16,999
ಕಂಪನಿಯು ಲಾವಾ ಬ್ಲೇಜ್ X 5G ಫೋನನ್ನು ಮೂರು ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಪರಿಚಯಿಸಿದೆ. 4GB + 128GB ಸ್ಟೋರೇಜ್‌ನ ಬೆಲೆ 14,999 ರೂ. ಆಗಿದೆ. ಅಮೇಜಾನ್‌ನಲ್ಲಿ ಡಿಸ್ಕೌಂಟ್‌ನೊಂದಿಗದೆ 13,999 ರೂ.ಗೆ ಖರೀದಿಸಬಹುದು. 6GB + 256GB ಸ್ಟೋರೇಜ್‌ನ ಬೆಲೆ 15,999 ರೂ. ಇದೆ. 8GB + 256GB ಸ್ಟೋರೇಜ್ ರೂಪಾಂತರವು 16,999 ರೂ. ಬೆಲೆಗೆ ಮಾರಾಟವಾಗುತ್ತಿದೆ.
ನಾಳೆ ಕೊನೆಗೊಳ್ಳಲಿದೆ ಬಂಪರ್ ಆಫರ್!
ಅಮೆಜಾನ್ 'ಪ್ರೈಮ್ ಡೇ ಸೇಲ್' ಮೇಳದಲ್ಲಿ ಬಿಡುಗಡೆಯ ಭಾಗವಾಗಿ ಕಂಪನಿಯು ಎಲ್ಲಾ ರೂಪಾಂತರಗಳ ಖರೀದಿ ಮೇಲೆ 1,000 ರೂ. ಡಿಸ್ಕೌಂಟ್ ನೀಡುತ್ತಿದೆ. ಟೈಟಾನಿಯಂ ಗ್ರೇ ಮತ್ತು ಸ್ಟಾರ್‌ಲೈಟ್ ಪರ್ಪಲ್ ಬಣ್ಣದಲ್ಲಿ ನೀವು ಲಾವಾ ಬ್ಲೇಜ್ X 5G ಫೋನನ್ನು ಖರೀದಿಸಬಹುದು. ಇನ್ನು ಈ ಫೋನ್ ಲಾವಾ ಕಂಪನಿಯ ಇ-ಸ್ಟೋರ್, ಅಮೆಜಾನ್, ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
ಲಾವಾ ಬ್ಲೇಜ್ X 5G ಫೀಚರ್ಸ್
ಡಿಸ್‌ಪ್ಲೇ: ಇದು 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ.
ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ನೊಂದಿಗೆ ಈ ಫೋನ್ ಕೆಲಸ ಮಾಡುತ್ತದೆ. ಇದು ಆಂಡ್ರಾಯ್ಡ್ 14 ಓಎಸ್ ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಜೊತೆಗೆ ಮಾಲಿ-G68 MC4 GPU ಸಪೋರ್ಟ್ ಪಡೆದಿದೆ. 4GB + 128GB, 6GB + 256GB ಹಾಗೂ 8GB + 256GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂದಿದೆ.
ಕ್ಯಾಮೆರಾ: ಈ ಫೋನಿನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಇದೆ. 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಸೆನ್ಸಾರ್ ಹೊಂದಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, 5G, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್ 5.2, ಯುಎಸ್‌ಬಿ ಟೈಪ್-ಸಿ ಆಡಿಯೋ, ಎಫ್‌ಎಂ ರೇಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ನಂತಹ ಸೌಲಭ್ಯ ಹೋಂದಿದೆ. ಜೊತೆಗೆ, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ನ್ಯಾನರ್, ಯುಎಸ್‌ಬಿ ಟೈಪ್-ಸಿ ಅನ್ನು ಬೆಂಬಲಿಸುತ್ತದೆ.


Click it and Unblock the Notifications








