Home
ಮೊಬೈಲ್

ನಾಳೆ Lava Blaze X 5G ಫೋನ್ ಮಾರಾಟ ಶುರು: 13,999 ರೂ. ಮಾತ್ರ! ಈ ಆಫರ್‌ ಬಿಡಬೇಡಿ

Lava Blaze X 5G Sale Start in India: ಲಾವಾ ಕಂಪನಿಯು ಇತ್ತೀಚೆಗೆ ಹೊಸದಾಗಿ ಲಾವಾ ಬ್ಲೇಜ್ X 5G (Lava Blaze X 5G) ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು ಬಜೆಟ್‌ ಬೆಲೆಯ ಫೋನ್ ಆಗಿದ್ದು, ಮೊಬೈಲ್ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. 15,000 ರೂ.ಗಳ ಒಳಗೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ಹುಡುಕುತ್ತಿರುವವರಿಗೆ ಇದು ಪರ್ಫೆಕ್ಟ್‌ ಆಯ್ಕೆಯಾಗಿದೆ. ಅಂದಹಾಗೆ, ಈ ಮೊಬೈಲ್‌ ನಾಳೆಯಿಂದ (ಜುಲೈ 20) ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್‌ ಖರೀದಿ ಮೇಲೆ ಬಂಪರ್ ಆಫರ್ ನೀಡಲಾಗುತ್ತದೆ. ಈ ಫೋನಿನ ಬೆಲೆ ಎಷ್ಟು? ವಿಶೇಷತೆಗಳೇನು? ಎನ್ನುವುದನ್ನು ತಿಳಿಯೋಣ ಬನ್ನಿ.

ಲಾವಾ ಬ್ಲೇಜ್ X 5G ಫೋನ್ 'Blaze' ಸರಣಿಯ ನೂತನ 5G ಸ್ಮಾರ್ಟ್‌ಫೋನ್ ಆಗಿದೆ. ಇದು 6.67 ಇಂಚಿನ HD+ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ ಹೊಂದಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಪಡೆದಿದೆ. ಇದರಲ್ಲಿ 64 ಮೆಗಾಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಮಾಡಲಿದೆ. ಈ ಫೋನಿನ ಇನ್ನುಳಿದ ಫೀಚರ್ಸ್‌ ತಿಳಿಯಲು ಮುಂದೆ ಓದಿ.

ನಾಳೆ Lava Blaze X 5G ಫೋನ್ ಸೇಲ್: 13,999 ರೂ. ಮಾತ್ರ! ಈ ಆಫರ್‌ ಬಿಡಬೇಡಿ

ಲಾವಾ ಬ್ಲೇಜ್ X 5G ಬೆಲೆ ಮತ್ತು ಲಭ್ಯತೆ

ಲಾವಾ ಬ್ಲೇಜ್ X 5G ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳನ್ನು ಹೊಂದಿದೆ. 4GB + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆ 14,999 ರೂ. ಇದೆ. ಆಫರ್‌ನೊಂದಿಗೆ 13,999 ರೂ.ಗೆ ಖರೀದಿಸಬಹುದು. 6GB + 256GB ಮಾದರಿಯ ಬೆಲೆ 15,999 ರೂ. ಆಗಿದೆ. ಇನ್ನೂ, 8GB + 256GB ಸ್ಟೋರೇಜ್‌ ರೂಪಾಂತರವು 16,999 ರೂ. ಬೆಲೆಗೆ ಲಭ್ಯವಿದೆ.

ಮೊದಲ ದಿನ ಏನೆಲ್ಲಾ ಆಫರ್‌ ಲಭ್ಯ?

ಇನ್ನು ಈ ಫೋನ್‌ ಲಾವಾ ಕಂಪನಿಯ ಇ-ಸ್ಟೋರ್, ಅಮೆಜಾನ್, ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ನಾಳೆಯಿಂದ (ಜುಲೈ 20) ಖರೀದಿಗೆ ಲಭ್ಯವಾಗಲಿದೆ. ನೀವು ಈ ಸ್ಮಾರ್ಟ್‌ಫೋನ್‌ ಅನ್ನು ಟೈಟಾನಿಯಂ ಗ್ರೇ ಮತ್ತು ಸ್ಟಾರ್‌ಲೈಟ್ ಪರ್ಪಲ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದು. ಲಾಂಚ್‌ ಆಫರ್‌ ಭಾಗವಾಗಿ, ಕಂಪನಿಯು ಎಲ್ಲಾ ರೂಪಾಂತರಗಳ ಖರೀದಿ ಮೇಲೆ 1,000 ರೂ. ಡಿಸ್ಕೌಂಟ್ ಘೋಷಿಸಿದೆ.

ಲಾವಾ ಬ್ಲೇಜ್ X 5G ವೀಶೇಷತೆಗಳೇನು?

ಲಾವಾ ಬ್ಲೇಜ್ X 5G ಡಿಸ್‌ಪ್ಲೇ: ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯು 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಪಡೆದಿದ್ದು, 800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಪ್ರೊಸೆಸರ್‌: ಲಾವಾ ಬ್ಲೇಜ್ X 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಓಎಸ್‌ ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ ಮಾಲಿ-G68 MC4 GPU ಸಪೋರ್ಟ್‌ ಪಡೆದಿದೆ. ಜೊತೆಗೆ, 4GB + 128GB, 6GB + 256GB ಹಾಗೂ 8GB + 256GB ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂದಿದೆ.

ಕ್ಯಾಮೆರಾ ಸೆಟಪ್: ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್, ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಸೆನ್ಸಾರ್‌ ಹೊಂದಿದೆ. ಈ ಫೋನ್ ಸೆಲ್ಫಿ ಕ್ಲಿಕ್ಕಿಸಲು 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕಪ್: ಲಾವಾ ಬ್ಲೇಜ್ X 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 33W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ.

ಕನೆಕ್ಟಿವಿಟಿ ಆಯ್ಕೆಗಳು: ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ, 5G, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್ 5.2, ಯುಎಸ್‌ಬಿ ಟೈಪ್-ಸಿ ಆಡಿಯೋ, ಎಫ್‌ಎಂ ರೇಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ನಂತಹ ಸೌಲಭ್ಯ ಹೋಂದಿದೆ. ಜೊತೆಗೆ, ಇನ್‌-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ನ್ಯಾನರ್‌, ಯುಎಸ್‌ಬಿ ಟೈಪ್-ಸಿ ಅನ್ನು ಸಪೋರ್ಟ್‌ ಮಾಡುತ್ತದೆ.

Best Mobiles in India

English summary
Lava Blaze X goes on sale in india Tomorrow via Amazon. check offer, price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+