Home
ಮೊಬೈಲ್

ಭಾರತದಲ್ಲಿ Lava Bold 2 5G ಬಿಡುಗಡೆ: ₹12,999ಕ್ಕೆ ಎಂತಹ ಫೋನ್ ನೋಡಿ!

ಭಾರತೀಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Lava ತನ್ನ ಬಹುನಿರೀಕ್ಷಿತ Lava Bold 2 5G ಸ್ಮಾರ್ಟ್‌ಫೋನ್ ಅನ್ನು ಭರ್ಜರಿಯಾಗಿ ಪರಿಚಯಿಸಿದೆ. ಕಳೆದ ವರ್ಷ ಬಿಡುಗಡೆಗೊಂಡ Lava Bold 5G ಮಾದರಿಯ ಮುಂದುವರಿದ ಆವೃತ್ತಿಯಾಗಿ ಈ ಹೊಸ ಫೋನ್ ಮಾರುಕಟ್ಟೆಗೆ ಬಂದಿದ್ದು, ಮಧ್ಯಮ ಬೆಲೆ ವಿಭಾಗದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಸ್ಮಾರ್ಟ್‌ಫೋನ್ ಆಗಿ ಕಾಣುತ್ತಿದೆ. ಹಾಗಾದರೆ, ಹೊಸ Lava Bold 2 5G ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಮತ್ತು ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Lava Bold 2 5G : ಬೆಲೆ ಮತ್ತು ಮಾರಾಟ
ಭಾರತದಲ್ಲಿ Lava Bold 2 5G ಸ್ಮಾರ್ಟ್‌ಫೋನ್‌ ಏಕೈಕ 6GB RAM ಮತ್ತು 128GB ಮಾದರಿಯಲ್ಲಿ₹13,999 ಬೆಲೆಗೆ ಬಿಡುಗಡೆಯಾಗಿದೆ. ಆದರೆ, ಆರಂಭಿಕ ಸೀಮಿತ ಅವಧಿಗೆ ಕಂಪನಿಯು ಎಲ್ಲಾ ಪಾವತಿ ವಿಧಾನಗಳಿಗೂ ಅನ್ವಯವಾಗುವಂತೆ ₹1,000 ಕೂಪನ್ ರಿಯಾಯಿತಿಯನ್ನು ಒದಗಿಸಿದ್ದು, ಫೋನ್ ಇದೀಗ ₹12,999 ರೂ.ಗೆ ದೊರೆಯಲಿದೆ. ಲಭ್ಯತೆಯ ಕುರಿತು ನೋಡುವುದಾದರೆ, ಈ ಫೋನ್ ಇದೇ ಮಾರ್ಚ್ 19 ರಿಂದ ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ನಲ್ಲಿ ಮಾರಾಟಕ್ಕೆ ಬರಲಿದ್ದು, Feather White ಮತ್ತು Midnight Black ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಜೊತೆಗೆ ಈ ಫೋನ್ ಖರೀದಿಸುವ ಗ್ರಾಹಕರಿಗೆ ಲಾವಾ ಕಂಪನಿ ಉಚಿತ doorstep service ಸೌಲಭ್ಯವನ್ನೂ ನೀಡುತ್ತಿದೆ.

ಭಾರತದಲ್ಲಿ Lava Bold 2 5G ಬಿಡುಗಡೆ: ₹12,999ಕ್ಕೆ ಎಂತಹ ಫೋನ್ ನೋಡಿ!

Lava Bold 2 5G : ಪ್ರಮುಖ ವೈಶಿಷ್ಟ್ಯಗಳು
ಡಿಸ್‌ಪ್ಲೆ ಮತ್ತು ವಿನ್ಯಾಸ
Lava Bold 2 5G ಸ್ಮಾರ್ಟ್‌ಫೋನ್‌ನಲ್ಲಿ 6.67 ಇಂಚಿನ Full-HD+ AMOLED ಡಿಸ್ಪ್ಲೇ ನೀಡಲಾಗಿದೆ. ಇದು ಗರಿಷ್ಠ 120Hz ರಿಫ್ರೆಶ್ ರೇಟ್ ಬೆಂಬಲಿಸುವುದರಿಂದ ಸ್ಕ್ರೋಲಿಂಗ್, ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್ ವೇಳೆ ಹೆಚ್ಚು ಸ್ಮೂತ್ ಅನುಭವವನ್ನು ನೀಡುವ ಭರವಸೆ ತಂದಿದೆ. ವಿನ್ಯಾಸದ ವಿಭಾಗದಲ್ಲಿ, ಫೋನ್ ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ನೀಡಲಾಗಿದ್ದು, ಅದರೊಳಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಅಳವಡಿಸಲಾಗಿದೆ. ಜೊತೆಗೆ ಸಾಧನಕ್ಕೆ IP64 ರೇಟಿಂಗ್ ನೀಡಲಾಗಿದೆ. ಇದರಿಂದ ಧೂಳು ಮತ್ತು ನೀರಿನ ಚಿಮುಕಿನಿಂದ ಫೋನ್‌ಗೆ ಕೆಲವು ಮಟ್ಟದ ರಕ್ಷಣೆ ದೊರೆಯುತ್ತದೆ. ಫೋನ್‌ನ ದಪ್ಪ ಕೇವಲ 7.55mm ಆಗಿರುವುದರಿಂದ ಇದು ಸ್ಲಿಮ್ ಮತ್ತು ಹಿಡಿಯಲು ಸುಲಭವಾಗಿರುವ ವಿನ್ಯಾಸವನ್ನು ಹೊಂದಿದೆ.

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ
ಕಾರ್ಯಕ್ಷಮತೆಗಾಗಿ, Lava Bold 2 5G ನಲ್ಲಿ MediaTek Dimensity 7060 ಚಿಪ್‌ಸೆಟ್ ಇದೆ. ಇದು ಗರಿಷ್ಠ 2.6GHz ಕ್ಲಾಕ್ ಸ್ಪೀಡ್ ನೀಡುವ ಸಾಮರ್ಥ್ಯ ಹೊಂದಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಈ ಫೋನ್ AnTuTu ಬೆಂಚ್ಮಾರ್ಕ್ ಪರೀಕ್ಷೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ. ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಲು ಫೋನ್‌ನಲ್ಲಿ 6GB LPDDR5 RAM ಮತ್ತು 128GB UFS 3.1 ಸ್ಟೋರೇಜ್ ನೀಡಲಾಗಿದೆ. ಈ ಸಂಯೋಜನೆ ವೇಗವಾದ ಅಪ್ಲಿಕೇಶನ್ ಲೋಡಿಂಗ್ ಮತ್ತು ಉತ್ತಮ ಮಲ್ಟಿಟಾಸ್ಕಿಂಗ್ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಫೋನ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಕಂಪನಿಯ ಪ್ರಕಾರ ಇದರಲ್ಲಿ bloatware ಇಲ್ಲದ ಹಾಗೂ ಜಾಹೀರಾತು ರಹಿತ ಬಳಕೆ ಅನುಭವ ಸಿಗಲಿದೆ.

ಕ್ಯಾಮೆರಾ, ಬ್ಯಾಟರಿ ಮತ್ತು ಇತರೆ ವೈಶಿಷ್ಟ್ಯಗಳು
ಫೋಟೋಗ್ರಫಿಗಾಗಿ Lava Bold 2 5G ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದೆದಕ್ಕೆ ಜೊತೆಗೆ ಮತ್ತೊಂದು ಸೆಕೆಂಡರಿ ಕ್ಯಾಮೆರಾ ಕೂಡ ನೀಡಲಾಗಿದೆ, ಆದರೆ ಅದರ ವಿವರಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದು ಡಿಸ್ಪ್ಲೇಯಲ್ಲಿನ ಹೋಲ್-ಪಂಚ್ ಕಟ್‌ಔಟ್ ಒಳಗೆ ಅಳವಡಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, Lava Bold 2 5G ಫೋನ್‌ಗೆ 5,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದು 33W ವೈರ್‌ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಸುರಕ್ಷತಿಗಾಗಿ ಫೋನ್‌ನಲ್ಲಿ in-display fingerprint scanner ಕೂಡ ಅಳವಡಿಸಲಾಗಿದೆ.

Best Mobiles in India

English summary
Lava has launched the new Lava Bold 2 5G smartphone in India at a price of ₹13,999. With a limited-time ₹1,000 coupon discount, the phone will be available for ₹12,999. It comes with 6GB RAM and 128GB storage and will go on sale on Amazon from March 19 in Feather White and Midnight Black color options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+