Home
ಮೊಬೈಲ್

Lava Bold 2 5G ಲಾಂಚ್ ಡೇಟ್ ಫಿಕ್ಸ್: ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಖಚಿತ!

ಭಾರತೀಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Lava ತನ್ನ ಹೊಸ Lava Bold 2 5G ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಪ್ರಕಟಿಸಿದೆ. ಕಂಪೆನಿ ಅಧಿಕೃತ ಮಾಹಿತಿಯ ಪ್ರಕಾರ, Lava Bold 2 5G ಫೋನ್ ದೇಶದಲ್ಲಿ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಈ ಮಾಹಿತಿ ಅಮೆಜಾನ್ ತಾಣದಲ್ಲಿ ಫೋನ್‌ಗಾಗಿ ನಿರ್ಮಿಸಲಾದ ವಿಶೇಷ ಮೈಕ್ರೋಸೈಟ್‌ನಲ್ಲಿ ಅಪ್‌ಡೇಟ್ ಆದ ನಂತರ ಬಹಿರಂಗವಾಗಿದೆ. ಈ ಸಿಹಿಸುದ್ದಿಯ ಜೊತೆಗೆ ಮತ್ತೊಂದು ಭರ್ಜರಿ ಸುದ್ದಿ ಎಂದರೆ, ಬಜೆಟ್ ಬೆಲೆಯ ಈ ಫೋನಿನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಇರಲಿದೆ.!

ಹೌದು, Lava ಕಂಪನಿ ಹಂಚಿಕೊಂಡಿರುವ ಟೀಸರ್ ಚಿತ್ರಗಳ ಪ್ರಕಾರ, Lava Bold 2 5G ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗುತ್ತದೆ. ಸಾಮಾನ್ಯವಾಗಿ ಮಧ್ಯಮ ಬೆಲೆಯ ಫೋನ್‌ಗಳಲ್ಲಿ ಈ ವೈಶಿಷ್ಟ್ಯ ಕಡಿಮೆ ಕಾಣುವುದರಿಂದ ಇದು ಬಳಕೆದಾರರ ಗಮನ ಸೆಳೆಯುವ ಸಾಧ್ಯತೆ ಇದೆ. ಇದಲ್ಲದೆ, ಫೋನ್‌ನಲ್ಲಿ ಸೆಂಟರ್ ಹೋಲ್-ಪಂಚ್ ಡಿಸ್ಪ್ಲೇ ವಿನ್ಯಾಸ ಇರಲಿದೆ. ಈ ಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ ಮುಂಭಾಗದ ಕ್ಯಾಮೆರಾ ಅಳವಡಿಸಲಾಗುತ್ತದೆ. ಡಿಸ್‌ಪ್ಲೆ ಸುತ್ತಲು ತೆಳ್ಳನೆಯ ಬೆಝಲ್‌ಗಳು ಇದ್ದರೂ ಕೆಳಭಾಗದಲ್ಲಿ ಸ್ವಲ್ಪ ದಪ್ಪ ಚಿನ್ ಕಾಣಿಸಬಹುದು ಎಂಬ ನಿರೀಕ್ಷೆ ಇದೆ.

ಕ್ಯಾಮೆರಾ ಮತ್ತು ಬಾಹ್ಯ ವಿನ್ಯಾಸ
ಟೀಸರ್ ಚಿತ್ರಗಳಲ್ಲಿ ಫೋನ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು LED ಫ್ಲ್ಯಾಶ್ ಕಾಣಿಸುತ್ತದೆ. ಕ್ಯಾಮೆರಾಗಳು ಆಯತಾಕಾರದ ಕ್ಯಾಮೆರಾ ಐಲ್ಯಾಂಡ್ ಒಳಗೆ ಅಳವಡಿಸಲಾಗಿರುವಂತೆ ತೋರಿಸಲಾಗಿದೆ.ಫ್ಲಾಟ್ ಫ್ರೇಮ್ ಫೋನ್ ಮತ್ತು ಫ್ಲಾಟ್ ಬ್ಯಾಕ್ ಪ್ಯಾನೆಲ್ ವಿನ್ಯಾಸವನ್ನು ಒದಗಿಸುತ್ತದೆ. ಬಲಭಾಗದಲ್ಲಿ ಪವರ್ ಬಟನ್ ಹಾಗೂ ವಾಲ್ಯೂಮ್ ಕಂಟ್ರೋಲ್ ಬಟನ್‌ಗಳು ಇರಲಿ. ಪ್ರಸ್ತುತ ಕಂಪನಿ ಕ್ಯಾಮೆರಾ ಸ್ಪೆಸಿಫಿಕೇಶನ್, ಚಿಪ್‌ಸೆಟ್, ಬ್ಯಾಟರಿ ಸಾಮರ್ಥ್ಯ ಮತ್ತು ಡಿಸ್ಪ್ಲೇ ಗಾತ್ರದ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಬಹಿರಂಗಪಡಿಸಿಲ್ಲ.

Lava Bold 2 5G ಲಾಂಚ್ ಡೇಟ್ ಫಿಕ್ಸ್: ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಖಚಿತ!

ಹಿಂದಿನ ಮಾದರಿಯ ನಂತರದ ಮುಂದಿನ ಆವೃತ್ತಿ
ಈ ಹೊಸ Lava Bold 2 5G ಫೋನ್ ಕಳೆದ ವರ್ಷ ಬಿಡುಗಡೆಯಾದ Lava Bold 5G ಮಾದರಿಯ ಮುಂದುವರಿದ ಆವೃತ್ತಿಯಾಗಿ ಬರುತ್ತಿದೆ. Lava Bold 5G ಫೋನ್ ಅನ್ನು 2025ರ ಏಪ್ರಿಲ್‌ನಲ್ಲಿ ಭಾರತದಲ್ಲಿ ಪರಿಚಯಿಸಲಾಗಿತ್ತು. Lava Bold 5G ನಲ್ಲಿ 6.67 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ನೀಡಲಾಗಿತ್ತು. ಜೊತೆಗೆ 5,000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಬೆಂಬಲ ಕೂಡ ಲಭ್ಯವಿತ್ತು. ಅದರ ಆರಂಭಿಕ ಬೆಲೆ ಸುಮಾರು ₹10,499 ಆಗಿತ್ತು.

ಬಜೆಟ್ 5G ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿಸುವ ನಿರೀಕ್ಷೆ
ಭಾರತದಲ್ಲಿ ಕಡಿಮೆ ಬೆಲೆಯ 5G ಸ್ಮಾರ್ಟ್‌ಫೋನ್‌ಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ Lava Bold 2 5G ಉತ್ತಮ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ಆಧುನಿಕ ಡಿಸ್ಪ್ಲೇ ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಈ ವಿಭಾಗದಲ್ಲಿ ಬಳಕೆದಾರರ ಗಮನ ಸೆಳೆಯಬಹುದು. ಅಧಿಕೃತ ಬಿಡುಗಡೆ ಬಳಿಕ ಫೋನ್‌ನ ಸಂಪೂರ್ಣ ಸ್ಪೆಸಿಫಿಕೇಶನ್ ಹಾಗೂ ಬೆಲೆ ವಿವರಗಳು ಬಹಿರಂಗವಾಗಲಿದ್ದು, ಬಜೆಟ್ ಸ್ಮಾರ್ಟ್‌ಫೋನ್ ಖರೀದಿಸಲು ಕಾಯುತ್ತಿರುವವರಿಗೆ ಇದು ಹೊಸ ಆಯ್ಕೆಯಾಗಬಹುದು. ಹಾಗಾಗಿ, ಮಾರ್ಚ್ 13 ರಂದು ನಮ್ಮ ನಿಮ್ಮ ನೆಚ್ಚಿನ ಕನ್ನಡ ಗಿಜ್‌ಬಾಟ್ ನಲ್ಲಿ ಲೈವ್ ಆಗಿರಿ.

Best Mobiles in India

English summary
Lava's new Lava Bold 2 5G smartphone will be launched in India on March 13. With an in-display fingerprint sensor, hole-punch display, and dual camera design, this phone is likely to attract attention in the budget 5G segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+